ಇರಾನ್‌ನಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ : 103 ಬಲಿ

By Kannadaprabha News  |  First Published Jan 4, 2024, 11:05 AM IST

ಅಮೆರಿಕ ಸೇನೆಯ ಡ್ರೋನ್ ದಾಳಿಗೆ 2020ರಲ್ಲಿ ಹತ್ಯೆ ಯಾಗಿದ್ದ ಅಂದಿನ ಇರಾನ್ ಸೇನಾ ಜನರಲ್ ಖಾಸಿಮ್ ಸುಲೇ ಮಾನಿಯ 4ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, 103 ಮಂದಿ ಸಾವನ್ನಪ್ಪಿದ್ದಾರೆ


ದುಬೈ/ಇರಾನ್: ಅಮೆರಿಕ ಸೇನೆಯ ಡ್ರೋನ್ ದಾಳಿಗೆ 2020ರಲ್ಲಿ ಹತ್ಯೆ ಯಾಗಿದ್ದ ಅಂದಿನ ಇರಾನ್ ಸೇನಾ ಜನರಲ್ ಖಾಸಿಮ್ ಸುಲೇ ಮಾನಿಯ 4ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, 103 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 211 ಜನರಿಗೆ ಗಂಭೀರ ಗಾಯಗಳಾಗಿವೆ.

ಈ ಕುರಿತು ಮಾಹಿತಿ ನೀಡಿದ ಇರಾನ್ ತುರ್ತು ನಿರ್ವಹಣಾ ಘಟಕದ ವಕ್ತಾರ, 'ಅಮೆರಿಕ ನಡೆಸಿದ ಡೋನ್ ದಾಳಿಗೆ 2020ರಲ್ಲಿ ಹತ್ಯೆಯಾಗಿದ್ದ ಖಾಸಿಂ ಸುಲೈಮಾನಿಯವರ 4ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಬಾಂಬ್ ದಾಳಿಯಾಗಿದ್ದು ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದೊಂದು ಭಯೋ ತ್ಪಾದನಾ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಮಂಗಳೂರು ಹಡಗು ಮೇಲೆ ನಾವು ದಾಳಿ ಮಾಡಿಲ್ಲ, ಅಮೆರಿಕ ಆರೋಪ ಸುಳ್ಳು: ಇರಾನ್‌ ಸ್ಪಷ್ಟನೆ

ಖಾಸಿಮ್ ಸುಲೈಮಾನಿ ಖುದ್ ಫೋರ್ಸ್ ಎಂಬ ಕ್ರಾಂತಿಕಾರಿ ಸಂಘಟನೆಯ ಮುಖ್ಯಸ್ಥರಾಗಿದ್ದು, 2020ರಲ್ಲಿ ಇರಾಕ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಿಂದ ಹತ್ಯೆಯಾಗಿದ್ದರು. ಸಂಸ್ಮರಣಾ ಕಾರ್ಯಕ್ರಮವು ಕೆರ್ಮನ್ ಪಟ್ಟಣದಲ್ಲಿ ಸುಲೈಮಾನಿಯ ಗೋರಿಯ ಬಳಿ ನಡೆಯುತ್ತಿತ್ತು. ಇಲ್ಲಿಯವರೆಗೂ ಯಾವ ಸಂಘಟನೆಗಳೂ ಕೂಡ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.

ಮಂಗಳೂರು ಹಡಗಿನ ಮೇಲೆ ದಾಳಿ ಮಾಡಿದ್ದು ಇರಾನ್: ಅಮೆರಿಕ ಸ್ಫೋಟಕ ಹೇಳಿಕೆ

click me!