ಬಾಂಗ್ಲಾ ಪ್ರಧಾನಿ ಮನೆಯಲ್ಲಿ ಪ್ರತಿಭಟನಾಕಾರರ ದರೋಡೆ, ಶೇಖ್‌ ಹಸಿನಾರ 'ಬ್ರಾ..' ಕೂಡ ಬಿಡದ ಲೂಟಿಕೋರರು!

By Santosh Naik  |  First Published Aug 5, 2024, 7:54 PM IST

ಪ್ರಧಾನಿ ಶೇಖ್‌ ಹಸೀನಾ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಕೈಗೆ ಸಿಕ್ಕಿದ್ದನ್ನೆಲ್ಲಾ ಲೂಟಿ ಮಾಡಿದ್ದಾರೆ. ಬಾಂಗ್ಲಾ ಸಂಸತ್‌ ಭವನವನ್ನೂ ನಿರ್ನಾಮ ಮಾಡಿದ್ದಾರೆ. ಅಧಿಕೃತ ಪ್ರಧಾನಿ ನಿವಾಸದ ಎಲ್ಲಾ ಕೋಣೆಗಳಿಗೂ ನುಗ್ಗಿದ್ದಲ್ಲದೆ, ಶೇಖ್‌ ಹಸೀನಾ ಅವರ ಬ್ರಾ ಕೂಡ ಬಿಡದೆ ಕದ್ದುಕೊಂಡು ಹೋಗಿದ್ದಾರೆ.
 



ನವದೆಹಲಿ (ಆ.5): ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸೋಮವಾರ ಬಾಂಗ್ಲಾದೇಶದ ಸಾವಿರಾರು ಪ್ರತಿಭಟನಾಕಾರರು ಢಾಕಾದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು. ಹಸೀನಾ ರಾಜೀನಾಮೆ ನೀಡಿ ಸೇನಾ ಹೆಲಿಕಾಪ್ಟರ್‌ನಲ್ಲಿ ನವದೆಹಲಿಗೆ ಆಗಮಿಸಿದ್ದಾರೆ. ಇನ್ನೊಂದೆಡೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅವರ ಕೊಠಡಿಗಳನ್ನು ಲೂಟಿ ಮಾಡಿ, ಧ್ವಂಸ ಮಾಡಿದ್ದಾರೆ. ಅವರ ಕೋಣೆಗಳಿಗೆ ನುಗ್ಗಿ ಸೀರೆಗಳನ್ನು ದೋಚಿದ್ದು ಮಾತ್ರವಲ್ಲದೆ, ಅವರ ಒಳುಡುಪುಗಳನ್ನೂ ದೋಚಿದ್ದಾರೆ. ಅಧಿಕೃತ ನಿವಾಸದ ಅಡುಗೆ ಮನೆಯಲ್ಲಿ ಬಿರಿಯಾನಿಯನ್ನು ಬಾಚಿಕೊಂಡು ತಿಂದಿದ್ದರೆ, ಇನ್ನೂ ಕೆಲವರು ನಿವಾಸದ ಕೆರೆಯಲ್ಲಿದ್ದ ಮೀನುಗಳನ್ನು ಹಿಡಿದು ಕದ್ದುಕೊಂಡು ಹೋಗಿದ್ದಾರೆ. ನಿವಾಸದಲ್ಲಿದ್ದ ಕುರಿ ಹಾಗೂ ಬಾತುಕೋಳಿಗಳನ್ನೂ ಕದ್ದಿದ್ದಾರೆ. ಇನ್ನೂ ಕೆಲವು ಪ್ರತಿಭಟನಾಕಾರರು ಶೇಖ್‌ ಹಸೀನಾ ಅವರ ಹಾಸಿಗೆಯ ಮೇಲೆ ಮಲಗಿ ಸಂಭ್ರಮಿಸಿದ್ದಾರೆ. ಢಾಕಾದಿಂದ ಬರುತ್ತಿರುವ ವಿಡಿಯೋಗಳಲ್ಲಿ ಹಸೀನಾ ಸರ್ಕಾರದ ಪತನವನ್ನು ಸಂಭ್ರಮಿಸುವ ಆಚರಣೆಗಳು ಹಾಗೂ ಘೋಷಣೆಗಳನ್ನು ಕೂಗಿ ಜನರು ಬೀದಿಯಲ್ಲಿ ಸಂಭ್ರಮಿಸಿದ್ದಾರೆ. ಪ್ರಧಾನಿಯವರ ಅಧಿಕೃತ ನಿವಾಸ ‘ಗಣಭಬನ’ಕ್ಕೆ ಸಾವಿರಾರು ಜನ ಮುತ್ತಿಗೆ ಹಾಕಿ ವಿಜಯದ ಸಂಕೇತ ತೋರಿಸಿದರು.

ಸೋಶಿಯಲ್‌ ಮೀಡಿಯಾದ ವಿಡಿಯೋಗಳ ಪ್ರಕಾರ, ಗಣಭಬನ ಡ್ರಾಯಿಂಗ್ ರೂಮ್‌ಗಳಲ್ಲಿ ಸಾಕಷ್ಟು ಜನರು ಸೇರಿದ್ದಾರೆ. ದೇಶದ ಅತ್ಯಂತ ಸಂರಕ್ಷಿತ ಕಟ್ಟಡಗಳಲ್ಲಿ ಒಂದಾದ ಪ್ರಧಾನಿ ಅಧಿಕೃತ ನಿವಾಸದ ಟಿವಿ, ಖುರ್ಚಿ ಹಾಗೂ ಮೇಜುಗಳನ್ನು ಕದ್ದುಕೊಂಡು ಹೋಗುತ್ತಿರುವುದು ಕಂಡಿದೆ.

Tap to resize

Latest Videos

undefined

ಬಳಿಕ ಅಡುಗೆ ಮನೆಗೆ ನುಗ್ಗಿ ಅಲ್ಲಿನ ಫ್ರಿಜ್‌ಗಳಲ್ಲಿದ್ದ ವಸ್ತುಗಳನ್ನು ಕದ್ದಿದ್ದು ಮಾತ್ರವಲ್ಲದೆ, ಪಾತ್ರಗಳಲ್ಲಿದ್ದ ಬಿರಿಯಾನಿಯನ್ನು ಬಾಚಿಕೊಂಡು ತಿಂದಿದ್ದಾರೆ. ಇನ್ನು ನಿವಾಸದ ಒಳಗಡೆ ಇದ್ದ ಶೇಖ್‌ ಹಸೀನಾ ಅವರ ಚಿತ್ರಕ್ಕೂ ಪ್ರತಿಭಟನಾಕಾರರು ಹಾನಿ ಮಾಡಿದ್ದಾರೆ. ಅಲ್ಲದೆ, ಅವರಲ್ಲಿ ಹಲವರು ನಿವಾಸದಲ್ಲಿದ್ದ ಕೆರೆಯಲ್ಲಿ ಮೀನು ಹಿಡಿದ್ದಾರೆ, ಮೇಕೆಗಳು ಮತ್ತು ಬಾತುಕೋಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. 

ಪ್ರತಿಭಟನಾಕಾರರು ಬಾಂಗ್ಲಾದೇಶದ ಸ್ವಾತಂತ್ರ್ಯ ನಾಯಕ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ದೊಡ್ಡ ಪ್ರತಿಮೆಯ ಮೇಲೆ ಹತ್ತಿ ಅದನ್ನು ನಾಶಮಾಡಲು ಪ್ರಯತ್ನಿಸಿದರು. ಮುಜಿಬುರ್ ರೆಹಮಾನ್ ಅವರ ಹಲವಾರು ಭಾವಚಿತ್ರಗಳನ್ನೂ ಧ್ವಂಸಗೊಳಿಸಲಾಗಿದೆ. ಸರ್ಕಾರಿ ಕಚೇರಿಗಳು ಮತ್ತು ಇತರ ಕಟ್ಟಡಗಳಿಂದ ಶೇಖ್ ಹಸೀನಾ ಅವರ ಭಾವಚಿತ್ರಗಳನ್ನು ತೆಗೆಯುತ್ತಿದ್ದಂತೆ ಪ್ರತಿಭಟನಾಕಾರರು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

 

ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ, ಭಾರತಕ್ಕೆ ಓಡಿಬಂದ ಶೇಖ್‌ ಹಸೀನಾ!

ಕೋಟಾ ವ್ಯವಸ್ಥೆಯನ್ನು ವಿರೋಧಿಸುವ ಆಂದೋಲನವಾಗಿ ಒಂದು ತಿಂಗಳ ಹಿಂದೆ ಪ್ರಾರಂಭವಾದ ಪ್ರತಿಭಟನೆಗಳು ದಶಕಗಳಲ್ಲಿ ಹಿಂಸಾಚಾರದ ಕೆಟ್ಟ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು. 15 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರವನ್ನು ತೆಗೆದುಹಾಕಬೇಕು ಎಂದು ಚಳವಳಿಗಾರರು ಒತ್ತಾಯಿಸಿದರು.

ಬಾಂಗ್ಲಾದೇಶದಲ್ಲಿ ಮತ್ತೆ ಭಾರೀ ಸಂಘರ್ಷಕ್ಕೆ 98 ಜನ ಬಲಿ: ಭಾರತೀಯರಿಗೆ ಎಚ್ಚರಿಕೆ

ಇದೇ ರೀತಿಯ ದೃಶ್ಯಗಳು ಜುಲೈ 2022 ರಲ್ಲಿ ಶ್ರೀಲಂಕಾದಲ್ಲಿ ಕಂಡಿದ್ದವು.  ಪ್ರತಿಭಟನಾಕಾರರು ಆಗಿನ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿದರು. ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದಲ್ಲಿ ನೃತ್ಯ ಮಾಡಿದ್ದಲ್ಲದೆ, ನಿವಾಸದಲ್ಲಿದ್ದ ವಸ್ತುಗಳ ಲೂಟಿ ಮಾಡಿದ್ದರು. ವರದಿಗಳ ಪ್ರಕಾರ, ರಾಜಪಕ್ಸೆ ಅವರ ಭವನದಲ್ಲಿ 17.85 ಮಿಲಿಯನ್ ಶ್ರೀಲಂಕಾದ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

 

Height of shamelessness of pervert protestors in Bangladesh.🤷🏻‍♀️

They stole the 'Bra' of PM and flaunting them. pic.twitter.com/VB8VirSDrH

— Pooja Sangwan 🇮🇳 (@ThePerilousGirl)

 

click me!