ಕಾಫಿ 7,000 ರೂ, ಬಾಳೆ ಹಣ್ಣಿಗೆ 3,300 ರೂ; ಆಹಾರ ಕ್ಷಾಮಕ್ಕೆ ತತ್ತರಿಸಿದ ಉ.ಕೊರಿಯಾ ಜನ!

By Suvarna News  |  First Published Jun 20, 2021, 5:36 PM IST
  • ಶಸ್ತ್ರಾಸ್ತ್ರ ಹಿಂದೆ ಓಡಿದ ಉತ್ತರ ಕೊರಿಯಾದಲ್ಲಿ ಆಹಾರ ಕೊರತೆ
  • ಕೊರೋನಾದಿಂದ ಆಹಾರ ಆಮದಿಗೆ ನಿರ್ಬಂಧ, ಹಸಿವಿನಿಂದ ಸಾಯುತ್ತಿದ್ದಾರೆ ಜನ
  • ಪ್ರತಿ ದಿನ ರೈತರು 2 ಲೀಟರ್ ಮೂತ್ರ ಸಂಗ್ರಹಿ ನೀಡಲು ಕರೆ
  • ಸತತ ಸಭೆ ನಡೆಸಿದರೂ ಪರಿಸ್ಥಿತಿ ನಿಯಂತ್ರಿಸಲಾಗದ ಉ.ಕೊರಿಯಾ ಅಧ್ಯಕ್ಷ

ಉ.ಕೊರಿಯಾ(ಜೂ.20): ಶಸ್ತ್ರಾಸ್ತ್ರ, ನ್ಯೂಕ್ಲಿಯರ್ ಸೇರಿದಂತೆ ಮಿಲಿಟರಿ ಶಕ್ತಿ ಪ್ರದರ್ಶಿಸುತ್ತಾ ಬಂದಿರುವ ಉತ್ತರ ಕೊರಿಯಾದಲ್ಲೀಗ ಅತೀವ ಆಹಾರ ಕೊರತೆ ಎದುರಾಗಿದೆ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಉತ್ತರ ಕೊರಿಯಾದ ಜನತೆಯಲ್ಲಿ ಆಹಾರ ಖರೀದಿಸುವ ಶಕ್ತಿ ಇಲ್ಲದಾಗಿದೆ. ಕಾರಣ ಕಾಫಿ ಬೆಲೆ 7,000 ರೂಪಾಯಿ ಆಗಿದ್ದರೆ, ಬಾಳೆ ಹಣ್ಣಿನ ಬೆಲೆ 3,300 ರೂಪಾಯಿ ಆಗಿದೆ. ಆಹಾರ ಕ್ಷಾಮ ನೀಗಿಸಿಲು ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸತತ ಸಭೆ ನಡೆಸುತ್ತಿದ್ದರೂ, ನಿರೀಕ್ಷಿತ ಫಲ ಕಂಡಿಲ್ಲ.

ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಉತ್ತರ ಕೊರಿಯಾ..!

Tap to resize

Latest Videos

ಉತ್ತರ ಕೊರಿಯಾದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮ NK ನ್ಯೂಸ್ ವಿಸ್ತೃತ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಉತ್ತರ ಕೊರಿಯಾದಲ್ಲಿನ ಆಹಾರ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದಿದೆ. ಬ್ಲಾಕ್ ಟೀ ಪ್ಯಾಕೆಟ್ ಬೆಲೆ 5,167 ರೂಪಾಯಿ, ಒಂದು ಕೆಜಿ ಕಚ್ಚಾ ಜೋಳದ ಬೆಲೆ 205 ರೂಪಾಯಿ ಆಗಿದೆ.

ಈ ಪರಿಸ್ಥಿತಿಗೆ ಹಲವು ಕಾರಣಗಳಿವೆ. ಇದರಲ್ಲಿ ಕೊರೋನಾ ಕೂಡ ಪ್ರಮುಖವಾಗಿದೆ. ಕೊರೋನಾದಿಂದ ಗಡಿಗಳನ್ನು ಮುಚ್ಚಲಾಗಿದೆ. ಆಹಾರಕ್ಕಾಗಿ ಉತ್ತರ ಕೊರಿಯಾ ಚೀನಾವನ್ನು ಅವಲಂಬಿಸಿತ್ತು. ಇನ್ನು ಕೃಷಿ ಬೀಜ, ರಸಗೊಬ್ಬರ ಕೂಡ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕೊರೋನಾಗೂ ಮೊದಲು ಉತ್ತರ ಕೊರಿಯಾ ಚೀನಾದಿಂದ 500 ಮಿಲಿಯನ್ ಡಾಲರ್ ಮೊತ್ತದಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಈ ಮೊತ್ತ ಕೇವಲ 2.5 ಮಿಲಿಯನ್ ಡಾಲರ್‌ಗೆ ಇಳಿದಿದೆ.

ಲೈಂಗಿಕ ತೃಪ್ತಿಗಾಗಿ ಮಹಿಳಾ ಸ್ಕ್ವಾಡ್ ಇಟ್ಟುಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ!

ಆಹಾರ ಉತ್ಪನ್ನವೇ ದುಬಾರಿಯಾಗಿರುವ ಕಾರಣ ರಸಗೊಬ್ಬರ ಆಮದು ಅಥವಾ ಖರೀದಿ ಅಸಾಧ್ಯದ ಮಾತಾಗಿದೆ. ಹೀಗಾಗಿ ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್‌ನಷ್ಟು ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಬೇಕು ಎಂದು ಕಿನ್ ಜಾಂಗ್ ಉನ್ ಆದೇಶಿಸಿದ್ದಾರೆ.

ಉತ್ತರ ಕೊರಿಯಾದ ಆಹಾರ ಕೊರತೆಗೆ ಕೊರೋನಾ ಮಾತ್ರ ಕಾರಣವಲ್ಲ. ಸದಾ ಶಸ್ತ್ರಾಸ್ತ್ರ, ನ್ಯೂಕ್ಲಿಯರ್, ಮಿಲಟರಿಗೆ ಹೆಚ್ಚಿನ ಹಣ ವಿನಿಯೋಗಿಸುವ ಕಿನ್ ಜಾಂಗ್ ಉನ್, ಆಹಾರ ಉತ್ಪಾದನೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲೇ ಇಲ್ಲ. ಇನ್ನು ಕಳೆದ ವರ್ಷದ ಪ್ರವಾಹ, ಬಿರುಗಾಳಿಯಿಂದಲೂ ಉತ್ತರ ಕೊರಿಯಾ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಕೊರೋನಾ ಭೀತಿ: ಒಳನುಸುಳಲು ಬಂದ ವ್ಯಕ್ತಿಯ ಕೊಲ್ಲಿಸಿದ ಕಿಮ್‌!.

ಕಳೆದ ವರ್ಷದಿಂದ ಕೊರೋನಾ ಮುಕ್ತವಾಗಿಸಲು ಅತ್ಯಂತ ಕಠಿಣ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಆಮದು, ರಫ್ತು ವಹಿವಾಟುಗಳು ನಡೆಯುತ್ತಿಲ್ಲ. ದೇಶದಲ್ಲಿನ ಆಹಾರ ಉತ್ಪನ್ನು ಸಾಕಾಗುತ್ತಿಲ್ಲ. ಇದೀಗ ವ್ಯವಹಾರ ಕುಸಿತದಿಂದ ಉತ್ತರ ಕೊರಿಯಾ ಆಹಾರ ಆಮದು ಮಾಡಿಕೊಳ್ಳುವ ಶಕ್ತಿ ಕಳೆದುಕೊಂಡಿದೆ.

1990ರಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಉತ್ತರ ಕೊರಿಯಾ ಎದುರಿಸಿತ್ತು. ಇದಾದ ಬಳಿಕ ಮಿಲಿಟರಿ ಶಕ್ತಿಯಿಂದಲೇ ಗುರುತಿಸಿಕೊಂಡಿದ್ದ ಉತ್ತರ ಕೊರಿಯಾ ಇದೀಗ ಮತ್ತೊಮ್ಮೆ ಆಹಾರ ಕ್ಷಾಮ ಎದುರಿಸುತ್ತಿದೆ. ಉತ್ತರ ಕೊರಿಯಾದ ಪರಿಸ್ಥಿತಿ ಗಂಭೀರವಾಗಿದೆ ಅನ್ನೋದನ್ನು ಕಿಮ್ ಜಾಂಗ್ ಉನ್ ಒಪ್ಪಿಕೊಂಡಿದ್ದಾರೆ. ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ ಅನ್ನೋದು ಕಿಮ್ ಜಾಂಗ್ ಉನ್ ತಲೆನೋವು ಹೆಚ್ಚಿಸಿದೆ.

click me!