ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಅಲೆದಾಟ, ಇಲ್ಲಿದೆ ದಾಖಲೆಯ 90 ಲಕ್ಷ ಮನೆ ಖಾಲಿ ಖಾಲಿ!

By Gowthami K  |  First Published Jul 23, 2024, 4:10 PM IST

ಬೆಂಗಳೂರಿನಲ್ಲಿ ದೂರದೂರಿನಿಂದ ಕೆಲಸ ಅರಸಿ ಬರುವವರು ಬಾಡಿಗೆ ಮನೆ ಪಡೆಯಲು ಕಷ್ಟ ಪಡ್ತಾರೆ ಆದರೆ ಇಲ್ಲಿ 9 ಮಿಲಿಯನ್ ಮನೆಗಳು ಖಾಲಿ ಇದೆ ಎಂದರೆ ನೀವು ನಂಬಲೇಬೇಕು.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೂರದೂರಿನಿಂದ ಕೆಲಸ ಅರಸಿ ಬರುವ ಜನ ಅದೆಷ್ಟೋ ಮಂದಿ ಇದ್ದಾರೆ. ಹೀಗಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ವೆಚ್ಚ ಏರಿಕೆ ಇದ್ದು, ಕಡಿಮೆ ಬೆಲೆಗೆ ಮನೆಗಳು ಸಿಗುವುದೇ ಇಲ್ಲ. ಇತ್ತೀಚಿಗಂತೂ  ನಗರದಲ್ಲಿ ಜೀವನ ನಡೆಸುವುದು ಕೂಡ ಕಷ್ಟವಾಗಿದೆ. ಹೀಗಾಗಿ  ಐಟಿಬಿಟಿ ಯಲ್ಲಿ ಕೆಲಸ ಮಾಡುವ ಅನೇಕ ಮಂದಿ ಬೆಂಗಳೂರು ಹೊರಗೆ ಕಡಿಮೆ ಬಾಡಿಗೆಗೆ ಅತ್ಯುತ್ತಮ ಮನೆಯನ್ನು ಹುಡುಕಿ ಜೀವನ ನಡೆಸುತ್ತಿದ್ದಾರೆ.

ಆದರೆ ಈಗ ನಾವು ಹೇಳುತ್ತಿರುವ ಈ ದೇಶದಲ್ಲಿ 9 ಮಿಲಿಯನ್ ಅಂದರೆ ಬರೋಬ್ಬರಿ 90 ಲಕ್ಷ ಮನೆಗಳು ಖಾಲಿಯಾಗಿವೆ. ಇಲ್ಲಿ ಬಾಡಿಗೆ ಕೊಡುವುದೇ ಬೇಡ ಎಂದರೂ ವಾಸ ಮಾಡಲು ಜನರೇ ಇಲ್ಲ.  ಇದು ನಿಜ. ವಿಶ್ವದ ಪುಟ್ಟ ದೇಶಗಳಲ್ಲಿ ಒಂದೆನಿಸಿಕೊಂಡಿದೆ. ಇದೊಂದು ದ್ವೀಪ ರಾಷ್ಟ್ರ ಕೂಡ ಹೌದು. ಅದುವೇ ಜಪಾನ್. ಜಗತ್ತಿನ 10ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ ಇದಾಗಿದ್ದು, ಇದರ ರಾಜಧಾನಿ  ಟೋಕಿಯೋ.

Latest Videos

undefined

ಇದು ವಿಶ್ವದ 2ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ ಎನಿಸಿಕೊಂಡಿದ್ದು, ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ದೇಶ ಇದಾಗಿದೆ. ಆದರೆ ಈಗ ಜಪಾನ್‌ನಲ್ಲಿ ಜನಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ.

ರಾಧಿಕಾ ಮರ್ಚೆಂಟ್‌ ಕ್ಲೋಸ್‌ ಫ್ರೆಂಡ್ಸ್ ಜಾನ್ವಿ ಕಪೂರ್‌ ಅಂಬಾನಿ ಕುಟುಂಬಕ್ಕೆ ಹತ್ತಿರದ ಸಂಬಂಧಿ!

ತಂತ್ರಜ್ಞಾನ ದೇಶ ಜಪಾನ್ ಈಗ ಖಾಲಿ ಮನೆ ಹೊಂದಿರುವ ಮೂಲಕ ಗಮನಾರ್ಹ ಸಮಸ್ಯೆಯನ್ನು ಎದುರಿಸುತ್ತಿದೆ. ಖಾಲಿ ಮನೆಗಳ ಸಂಖ್ಯೆ ದಾಖಲೆಯ ಒಂಬತ್ತು ಮಿಲಿಯನ್ ತಲುಪಿದೆ. ಇದು ನ್ಯೂಯಾರ್ಕ್ ನಗರದ ಜನಸಂಖ್ಯೆಯನ್ನು ಮೀರಿಸಿದೆ ಎಂದರೆ ನಂಬಲೇಬೇಕು.  ಖಾಲಿ ಮನೆಗಳ ಈ ಹೆಚ್ಚಳವು ಜಪಾನ್‌ನಲ್ಲಿ ಎಷ್ಟರಮಟ್ಟಿದೆ ಜನಸಂಖ್ಯೆ ಕ್ಷೀಣಿಸುತ್ತಿದೆ ಎಂಬುದರ ಜೀವಂತ ಉದಾಹರಣೆಯಾಗಿದೆ.  

ಸಾಂಪ್ರದಾಯಿಕವಾಗಿ ಈ ಮನೆಗಳನ್ನು "ಅಕಿಯಾ" ಎಂದು ಕರೆಯಲಾಗುತ್ತದೆ. ಈ ಮನೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಆದರೆ ಇದು ಈಗ ಟೋಕಿಯೊ ಮತ್ತು ಕ್ಯೋಟೋದಂತಹ ಪ್ರಮುಖ ನಗರಗಳಿಗೆ ಕೂಡ ಹರಡುತ್ತಿದೆ. ಈ ಪರಿಸ್ಥಿತಿಯು ಜಪಾನಿನ ಸರ್ಕಾರಕ್ಕೆ ಗಂಭೀರ ಸವಾಲಾಗಿದೆ. ಮಾತ್ರವಲ್ಲ ಜಪಾನ್  ಈಗಾಗಲೇ ವಯಸ್ಸಾದವರ ಜನಸಂಖ್ಯೆಯನ್ನು ಹೆಚ್ಚು ಹೊಂದಿದೆ. ಜೊತೆಗೆ ಕಡಿಮೆ ಜನನ ಪ್ರಮಾಣದ ಸಮಸ್ಯೆಯನ್ನು ಎದುರಿಸುತ್ತಿದೆ.

ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!

9 ಲಕ್ಷದಷ್ಟು ಖಾಲಿ ಮನೆಗಳು ಅಭಿವೃದ್ಧಿ ಅಥವಾ ಹೆಚ್ಚು ಹೊಸ ಬಿಲ್ಡಿಂಗ್‌ ರೂಪುಗೊಂಡಿರುವುದರಿಂದ ಆಗಿರುವುದಲ್ಲ. ಬದಲಾಗಿ, ಇದು ಜಪಾನ್‌ನ ಕುಗ್ಗುತ್ತಿರುವ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ಮಾತ್ರವಲ್ಲ ಅಸ್ತಿತ್ವದಲ್ಲಿರುವ ಮನೆಗಳನ್ನು ಆಕ್ರಮಿಸಲು ಸಾಕಷ್ಟು ಜನರಿಲ್ಲ ಎಂಬುದನ್ನು ತೋರಿಸುತ್ತದೆ.

ಜಪಾನ್‌ನ ಆಂತರಿಕ ವ್ಯವಹಾರಗಳು ಮತ್ತು ಸಂವಹನ ಸಚಿವಾಲಯದ ಪ್ರಕಾರ, ಜಪಾನ್‌ನ 14% ವಸತಿ ಆಸ್ತಿಗಳು ಖಾಲಿ ಇವೆ. ಇದು ಕೇವಲ ಎರಡನೇ ಮನೆಗಳನ್ನು ಕೆಲವರು ಪಡೆದಿರುವುದರಿಂದ ಅಲ್ಲ. ಕೆಲವು ಮನೆ ಮಾಲೀಕರು ಕೆಲಸಕ್ಕಾಗಿ ವಿದೇಶಕ್ಕೆ ತೆರಳುವ ಕಾರಣ ಸಹಿತ ವಿವಿಧ ಕಾರಣಗಳಿಗಾಗಿ ಖಾಲಿ ಉಳಿದಿರುವ ಆಸ್ತಿಗಳು ಇದರಲ್ಲಿ  ಒಳಗೊಂಡಿದೆ.

ಜಪಾನ್‌ ನಲ್ಲಿ ಎಲ್ಲಾ ಮನೆಗಳು ಹಾಳಾಗಿಲ್ಲ, ಅಥವಾ ಪಾಳು ಬಿದ್ದಿಲ್ಲ. ಆದರೆ ಹೆಚ್ಚುತ್ತಿರುವ ಸಾಂಪ್ರದಾಯಿಕ ಅಕಿಯಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.  

ಸಾಮಾನ್ಯವಾಗಿ ಅಕಿಯಾ ಮನೆಗಳನ್ನು  ತಲೆಮಾರುಗಳ ಮೂಲಕ ಆನುವಂಶಿಕವಾಗಿ ಪಡೆಯಲಾಗುತ್ತದೆ. ಆದರೂ ಜಪಾನ್‌ನ ಫಲವತ್ತತೆಯ ದರವು ಕುಸಿಯುತ್ತಿದೆ ಎಂದರೆ ಅನೇಕ ಮನೆಗಳು ಉತ್ತರಾಧಿಕಾರಿಗಳಿಲ್ಲದೆ ಉಳಿದಿವೆ ಅಥವಾ ನಗರಗಳಿಗೆ ಸ್ಥಳಾಂತರಗೊಂಡ ಯುವ ಪೀಳಿಗೆಯಿಂದ ಆನುವಂಶಿಕವಾಗಿ ಪಡೆದಿವೆ. ಜೊತೆಗೆ ಗ್ರಾಮೀಣ ಆಸ್ತಿಗಳಲ್ಲಿ ಕಡಿಮೆ ಮೌಲ್ಯ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. 

ಜಪಾನ್ 19ನೆಯ ಶತಮಾನದ ಪೂರ್ವಾರ್ಧದ ವರೆಗೂ ವ್ಯವಸಾಯಪ್ರಧಾನ ರಾಷ್ಟ್ರವಾಗಿತ್ತು. ಅದು ಆ ಕಾಲದ ಏಷ್ಯದ ಇತರ ರಾಷ್ಟ್ರಗಳಂತೆ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರವಾಗಿತ್ತು. ಆದರೆ 1868ರಿಂದ ಅದು ಪಾಶ್ಚಾತ್ಯ ನಾಗರಿಕತೆಯ ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದ್ದರಿಂದ ಅದರ ಆರ್ಥಿಕ ರಂಗ ಹೊಸ ಶಕೆಗೆ ಕಾಲಿಟ್ಟಿತು.  

19ನೆಯ ಶತಮಾನದ ಉತ್ತರಾರ್ಧದಲ್ಲಿ ಗಣಿಗಾರಿಕೆ, ಸಂಚಾರ ಮಾರ್ಗಗಳ ನಿರ್ಮಾಣ, ನೌಕಾ ನಿರ್ಮಾಣ, ಶಸ್ತ್ರಾಸ್ತ್ರಗಳ ತಯಾರಿಕೆ, ಸಿಮೆಂಟು, ಗಾಜು, ಕಬ್ಬಿಣ, ಉಕ್ಕು ಮುಂತಾದ ಕಾರ್ಖಾನೆಗಳ ಬಟ್ಟೆಗಿರಣಿಗಳ ರೇಷ್ಮೆ ಉದ್ಯಮಗಳ ಸ್ಥಾಪನೆ ಆರಂಭವಾಯಿತು. ವ್ಯವಸಾಯ ಪ್ರಧಾನ ರಾಷ್ಟ್ರವಾಗಿದ್ದ ಜಪಾನ್ ತನ್ನ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ ಕೈಗಾರಿಕಾ ರಾಷ್ಟ್ರವಾಗಿ ರೂಪುಗೊಂಡಿತು.

click me!