ಹಿಜಾಬ್ ತೆಗೆದು ಕೂದಲು ಕಟ್ಟಿದ ಯುವತಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಂಡಿಕ್ಕಿ ಹತ್ಯೆ!

By Suvarna News  |  First Published Sep 28, 2022, 8:59 PM IST

ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ನಡೆದ ಭಾರಿ ಪ್ರತಿಭಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.  ಪ್ರತಿಭಟನೆ ಹತ್ತಿಕ್ಕಲು ಪ್ರತಿಭಟನಕಾರರ ಮೇಲೆ ಗುಂಡಿನ ಸುರಿಮಳೆಯಾಗುತ್ತಿದೆ. ಇದೀಗ ಪ್ರತಿಭಟನೆ ನಡುವೆ ಹಿಜಾಬ್ ಎಸೆದು ಕೂದಲು ಹಿಂದಕ್ಕೆ ಕಟ್ಟಿ ಧೈರ್ಯದಿಂದ ಹೆಜ್ಜೆ ಹಾಕಿದ ಯುವತಿಯ ವಿಡಿಯೋ ವೈರಲ್ ಆಗಿತ್ತು. ಆದರೆ ದುರದೃಷ್ಟವಶಾತ್ ಈ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.


ತೆಹ್ರಾನ್(ಸೆ.28): ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದ ಇರಾನ್ ಹೊತ್ತಿ ಉರಿಯುತ್ತಿದೆ. ದಿನದಿಂದ ದಿನಕ್ಕೆ ಪ್ರತಿಭಟನಕಾರರ ಸಂಖ್ಯೆ ಹೆಚ್ಚಾಗುತ್ತಿದೆ. 75ಕ್ಕೂ ಹೆಚ್ಚು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಹಿಜಾಬ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ ಹೆಚ್ಚಾಗುತ್ತಿದೆ. ಹೀಗೆ ಪ್ರತಿಭಟನೆ ನಡುವೆ ಹಿಜಾಬ್ ಕಿತ್ತೆಸೆದು ತಲೆಕೂದಲನ್ನು ಕಟ್ಟುತ್ತಾ ಧೈರ್ಯದಿಂದ ಹೆಜ್ಜೆ ಹಾಕಿದ ಇರಾನ್ ಯುವತಿಯ ವಿಡಿಯೋ ವೈರಲ್ ಆಗಿತ್ತು. ಆದರೆ ಇದೀಗ ಈ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಯುವತಿ ಹದೀಸ್ ನಜಾಫಿ ಕೊಲೆಯಾದ ಯುವತಿ. ಪ್ರತಿಭಟನೆಯಲ್ಲಿ ಧೈರ್ಯವಾಗಿ ಮುನ್ನುಗ್ಗಿದ್ದಾಳೆ. ಇಸ್ಲಾಂನಲ್ಲಿ ತಲೆಗೂದಲು ಹೊರಗಡೆ ತೋರಿಸುವಂತಿಲ್ಲ. ಇದೇ ಕಾರಣಕ್ಕೆ ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯುವತಿಯರು, ಮಹಿಳೆಯರು ಬಹಿರಂಗವಾಗಿ ತಲೆ ಕೂದಲು ಕತ್ತರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ನಡುವೆಯೆ ತಲೆಗೂದಲನ್ನು ಕಟ್ಟುತ್ತಾ ಸಾಗಿದ ಯುವತಿಯ ವಿಡಿಯೋ ವೈರಲ್ ಆಗಿತ್ತು. ಆದರೆ ಈಕೆಯನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಯುವತಿ ಕುತ್ತಿಗೆ, ಎದೆ ಭಾಗ ಹಾಗೂ ಕೈಗೆ ಗುಂಡು ಹೊಕ್ಕಿದೆ. 

Tap to resize

Latest Videos

Mahsa Amini Death: ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಮಹಿಳೆಯರ ಗುಂಡಿಕ್ಕಿ ಹತ್ಯೆ

ಯುವತಿಯ ಅಂತ್ಯಕ್ರಿಯೆಯಲ್ಲಿ ಭಾರಿ ಜನಸ್ತೋಮ ಸೇರಿದೆ. ಈ ವೇಳೆಯೂ ಯುವತಿ ಪರ ಘೋಷಣೆ ಕೂಗಲಾಗಿದೆ. ಇಲ್ಲಿಗೆ ಹಿಜಾಬ್ ವಿರೋಧಿ ಪ್ರತಿಭಟನೆ ನಿಲ್ಲುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. 

ಇರಾನ್‌ ಹಿಜಾಬ್‌ ಪ್ರತಿಭಟನೆ: 76 ಬಲಿ, 20 ಪತ್ರಕರ್ತರ ಸೆರೆ
ಇರಾನ್‌ನಲ್ಲಿ ನಡೆದ ಹಿಜಾಬ್‌ ವಿರೋಧಿ ಭಾರೀ ಪ್ರತಿಭಟನೆ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಒಟ್ಟು 76 ಜನರು ಈವರೆಗೆ ಮೃತಪಟ್ಟಿದ್ದು, 20 ಪತ್ರಕರ್ತರನ್ನು ಬಂಧಿಸಲಾಗಿದೆ. ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ತೆಹರಾನ್‌ ಹಾಗೂ ಕುರ್ದಿಸ್ತಾನ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದೆ. ಈ ನಡುವೆ 20 ಪತ್ರಕರ್ತರ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿ ವಾರೆಂಟ್‌ ಇಲ್ಲದೇ ಅವರನ್ನು ಬಂಧಿಸಲಾಗಿದೆ. ಅವರ ಬಳಿ ಇರುವ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಲಾಗಿದೆ. ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಲಪ್ರಯೋಗಕ್ಕೆ ಮುಂದಾಗಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಕಿಡಿಕಾರಿದೆ. ಸೆ.16ರಂದು ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಇರಾನಿನ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ ಮಹ್ಸಾ ಎಂಬಾಕೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದು, ಮಹಿಳೆಯರು ಕೂದಲು ಕತ್ತರಿಸಿ, ಹಿಜಾಬ್‌ ಸುಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇರಾನ್‌ನಲ್ಲಿ ವಿರೋಧಿ ಹಿಜಾಬ್ ಹೋರಾಟಕ್ಕೆ 75 ಬಲಿ: ಇರಾನ್ ಅಧ್ಯಕ್ಷ ಆಡಳಿತ ಅಂತ್ಯಕ್ಕೆ ಕರೆ

ಮಾನವ ಹಕ್ಕುಗಳು ಮತ್ತು ಗೌರವನ್ನು ಬಯಸಿ ಇರಾನಿನ ಮಹಿಳೆಯರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಇದಕ್ಕೆ ಇರಾನ್‌ ಸರ್ಕಾರ ಬಂದೂಕಿನ ಗುಂಡುಗಳ ಮೂಲಕ ಉತ್ತರ ನೀಡುತ್ತಿದೆ ಎಂದು ಇರಾನ್‌ ಮಾನವ ಹಕ್ಕು ಆಯೋಗ ಆರೋಪಿಸಿದೆ. ಗುರುವಾರ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರು ವ್ಯಾಪಕವಾಗಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ

click me!