ರಾಯಭಾರಿಗಳ ಬಳಸಿ ನಮ್ಮ ಮೇಲೆ ಭಾರತ ದಾಳಿ ಸಂಚು: ಕೆನಡಾ ಪ್ರಧಾನಿ ಟ್ರುಡೋ

By Kannadaprabha News  |  First Published Oct 16, 2024, 5:59 AM IST

ಭಾರತ-ಕೆನಡಾಗಳು ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ರಾಯಭಾರಿಗಳನ್ನು ಪರಸ್ಪರ ಉಚ್ಚಾಟಿಸಿಕೊಂಡ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 
 


ವಾಷಿಂಗ್ಟನ್ (ಅ.16): ಭಾರತ-ಕೆನಡಾಗಳು ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ರಾಯಭಾರಿಗಳನ್ನು ಪರಸ್ಪರ ಉಚ್ಚಾಟಿಸಿಕೊಂಡ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 'ಕೆನಡಾದಲ್ಲಿನ ತನ್ನ ಹಾಗೂ ಕ್ರಿಮಿನಲ್‌ಗಳನ್ನು ರಾಯಭಾರಿಗಳನ್ನು ಬಳಸಿಕೊಂಡು ಕೆನಡಾ ಪ್ರಜೆಗಳ ಮೇಲೆಯೇ ದಾಳಿ ಮಾಡಲು ಭಾರತ ಸಂಚು ರೂಪಿಸಿತ್ತು. ಕೆನಡಿಯನ್ನರಿಗೆ ಕೆನಡಾ ದೇಶವೇ ಅಸುರಕ್ಷಿತ ಎಂಬ ಭಾವನೆ ಸೃಷ್ಟಿಗೆ ಯತ್ನಿಸಿತ್ತು' ಎಂದಿದ್ದಾರೆ. ಈ ಹಿಂದೆ ಮಾಡಿದ ಆಧಾರ ರಹಿತ ಆರೋಪಗಳನ್ನೇ ಟ್ರುಡೋ ಮಾಡುತ್ತಿದ್ದಾರೆ' ಎಂದು ಭಾರತ ತಿರುಗೇಟು ಕೊಟ್ಟಿದೆ.

ಭಾರತದ ವಿರುದ್ಧ ಕೆನಡಾ ನಿರ್ಬಂಧ?: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಭಾರತ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಕೆನಡಾ, ಈಗ ಭಾರತದ ವಿರುದ್ಧ ನಿರ್ಬಂಧ ಹೇರುವ ಸುಳಿವು ನೀಡಿದೆ. ಸುದ್ದಿಗಾರರ ಮಾತನಾಡಿದ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜಾಲಿ ಅವರಿಗೆ ಪತ್ರಕರ್ತರು ‘ಭಾರತದ ವಿರುದ್ಧ ನಿರ್ಬಂಧ ಹೇರುತ್ತೀರಾ?’ ಎಂದು ಪ್ರಶ್ನೆ ಕೇಳಿದಾಗ, ‘ಎಲ್ಲ ಸಾಧ್ಯಾಸಾಧ್ಯತೆಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

ಆದರೆ ಇದೇ ವೇಳೆ, ‘ಭಾರತದಿಂದ ನಾವು ನಿಜ್ಜರ್‌ ಹತ್ಯೆಯ ತನಿಖೆಗೆ ಸಹಕಾರ ಬಯಸುತ್ತೇವೆ. ಕೆನಡಾ ಪೊಲೀಸರ ವರದಿ ಆಧರಿಸಿ 6 ಭಾರತೀಯ ರಾಯಭಾರಿಗಳನ್ನು ಉಚ್ಚಾಟಿಸಿದ್ದೇವೆ. ಅವರ ವಿಚಾರಣೆಗೆ ನಾವು ನಿರ್ಧರಿಸಿದ್ದೆವು. ಆದರೆ ರಾಜತಾಂತ್ರಿಕ ರಕ್ಷಣೆ ನೆಪವೊಡ್ಡಿ ಭಾರತ ತನಿಖೆಯಿಂದ ಜಾರಿಕೊಂಡಿತು’ ಎಂದು ದೂರಿದರು. ‘ಕೆನಡಾಗೆ ಪ್ರತಿ ವರ್ಷ ಸಾವಿರಾರು ಭಾರತೀಯರು ಬರುತ್ತಾರೆ. ನಮ್ಮವರು ಭಾರತಕ್ಕೂ ಹೋಗುತ್ತಾರೆ. ರಾಜತಾಂತ್ರಿಕ ಬಿಕ್ಕಟ್ಟು ಜನರ ಮೇಲೆ ಪರಿಣಾಮ ಆಗಬಾರದು. ಹೀಗಾಗಿ ಭಾರತವು ತನಿಖೆಗೆ ಸಹಕರಿಸಬೇಕು’ ಎಂದು ಜಾಲಿ ಆಗ್ರಹಿಸಿದರು.

click me!