ಸ್ವಿಟ್ಜರ್ಲೆಂಡ್‌ನ ಮಾಡೆಲ್ ಹಾಗೂ ಮಿಸ್ ಫೈನಲಿಸ್ಟ್ ಆಗಿದ್ದ ಸುಂದರಿಯೋರ್ವರನ್ನು ಅವರ ಪತಿಯೇ ಕತ್ತು ಹಿಸುಕಿ ಕೊಂದಿದ್ದಾರೆ. ಸುಂದರಿ ಪತ್ನಿಯ ಹತ್ಯೆಯ ಬಳಿಕ ಆರೋಪಿ ಪತಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹುಡಿ ಹುಡಿ ಮಾಡಿದ್ದಾನೆ.
ಸ್ವಿಟ್ಜರ್ಲೆಂಡ್‌ನ ಮಾಡೆಲ್ ಹಾಗೂ ಮಿಸ್ ಫೈನಲಿಸ್ಟ್ ಆಗಿದ್ದ ಸುಂದರಿಯೋರ್ವರನ್ನು ಅವರ ಪತಿಯೇ ಕತ್ತು ಹಿಸುಕಿ ಕೊಂದಿದ್ದಾರೆ. ಸುಂದರಿ ಪತ್ನಿಯ ಹತ್ಯೆಯ ಬಳಿಕ ಆರೋಪಿ ಪತಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹುಡಿ ಹುಡಿ ಮಾಡಿದ್ದಾನೆ. ಕ್ರಿಶ್ಟಿನಾ ಜೊಕ್ಸಿಮೊವಿಕ್ ಕೊಲೆಯಾದ ಮಹಿಳೆ. 38 ವರ್ಷದ ಈ ಮಾಡೆಲ್ ಕ್ರಿಶ್ಟಿನಾ ಜೊಕ್ಸಿಮೊವಿಕ್ ಅವರ ಶವವು ಸ್ವಿಟ್ಚರ್ಲೆಂಡ್‌ನ ಬಿನ್ನಿನ್ಗೆನ್‌ನಲ್ಲಿರುವ ಅವರ ಮನೆಯ ಲ್ಯಾಂಡ್ರಿ ರೂಮ್‌ನಲ್ಲಿ ಫೆಬ್ರವರಿ 13 ರಂದು ಪತ್ತೆಯಾಗಿತ್ತು.
ಪತ್ನಿಯನ್ನು ಕೊಲೆ ಮಾಡಿದ ಪತಿ ಥಾಮಸ್ ಬಳಿಕ ಶವವನ್ನು ಗರಗಸ ಹಾಗೂ ಚಾಕುವಿನಿಂದ ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾನೆ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ಹುಡಿ ಮಾಡಿ ಅದಕ್ಕೆ ರಾಸಾಯನಿಕ ಸುರಿದು ಶವ ಪೂರ್ತಿಯಾಗಿ ಕರಗಿ ಹೋಗುವಂತೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಕ್ರಿಶ್ಟಿನಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಖಚಿತವಾಗಿತ್ತು. ಆಕೆಯ 41 ವರ್ಷದ ಪತಿ ಥಾಮಸ್‌ನನ್ನು ನಂತರ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದ. ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈತ ಫೆಡರಲ್ ನ್ಯಾಯಾಲಯದ ಮುಂದೆ ತನ್ನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದ. ಆದರೆ ಲೌಸನ್ನೆಯಲ್ಲಿರುವ ನ್ಯಾಯಾಲಯವೂ ಆತನ ಮನವಿಯನ್ನು ತಿರಸ್ಕರಿಸಿದೆ.
undefined
ರಾಷ್ಟ್ರೀಯ ಹೆದ್ದಾರಿಯಲ್ಲಿ ತಲೆ ಇಲ್ಲದ ಮಹಿಳೆಯ ಬೆತ್ತಲೆ ದೇಹ ಪತ್ತೆ
ಮರಣೋತ್ತರ ಪರೀಕ್ಷೆಯಲ್ಲಿ ಕ್ರಿಶ್ಟಿನಾಳನ್ನು ಉಸಿರುಕಟ್ಟಿಸಿ ಸಾಯಿಸಿರುವುದು ತಿಳಿದು ಬಂದಿದೆ. ಹತ್ಯೆಯ ನಂತರ ಆಕೆಯ ದೇಹವನ್ನು ಗರಗಸ ಚಾಕು, ಹಾಗೂ ಉದ್ಯಾನವನದಲ್ಲಿ ಬಳಸುವ ಕತ್ತರಿಯನ್ನು ಬಳಸಿ ಕಟ್ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಲ್ಲದೇ ಆಕೆಯ ದೇಹದ ಅಳಿದುಳಿದ ಕೆಲ ಭಾಗಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ತಿರುಗಿಸಿ ಹುಡು ಮಾಡಿದ್ದಾನೆ. ಬಳಿಕ ರಾಸಾಯನಿಕ ಬಳಸಿ ದೇಹ ಕರಗುವಂತೆ ಮಾಡಿದ್ದಾನೆ.
ಆದರೆ ತಾನು ತನ್ನ ಸ್ವರಕ್ಷಣೆಗಾಗಿ ಆಕೆಯ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಆಕೆ ನನ್ನ ಮೇಲೆ ಚಾಕುವಿನಿಂದ ದಾಳಿಗೆ ಮುಂದಾದಳು ಈ ವೇಳೆ ನನ್ನನ್ನು ನಾನು ರಕ್ಷಿಸಿಕೊಳ್ಳುವ ವೇಳೆ ಆಕೆಯ ಹತ್ಯೆಯಾಗಿದೆ. ಆಕೆಯ ಸಾವಿನ ನಂತರ ಭಯಗೊಂಡ ನಾನು ಆಕೆಯ ದೇಹವನ್ನು ಛಿದ್ರಗೊಳಿಸಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ವಿಧಿವಿಜ್ಞಾನ ವರದಿಯು ಥಾಮಸ್‌ನ ಸ್ವ ರಕ್ಷಣೆಯ ನೆಪಕ್ಕೆ ವ್ಯತಿರಿಕ್ತವಾಗಿದೆ. ಆತನ ದ್ವೇಷಪೂರಿತವಾದ ಮನಸ್ಥಿತಿ ಹಾಗೂ ಮಾನಸಿಕ ಅನಾರೋಗ್ಯದಿಂದಲೇ ಆತ ಈ ಕೃತ್ಯವೆಸಗಿದ್ದಾನೆ ಎಂದು ವರದಿ ವಿಶ್ಲೇಷಿಸಿದೆ.
ಸಿಸಿಟಿವಿ ಅಪ್ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕುಯ್ದ ನರ್ಸ್
ಗಂಡನಿಂದಲೇ ಹತ್ಯೆಯಾದ ಕ್ರಿಸ್ಟಿನಾ ಜೊಕ್ಸಿಮೊವಿಕ್ ಸೆರ್ಬಿಯಾ ಮೂಲವನ್ನು ಹೊಂದಿರುವ ಸ್ವಿಟ್ಜರ್ಲೆಂಡ್ ಪ್ರಜೆಯಾಗಿದ್ದು, ಮಾಡೆಲಿಂಗ್‌ನಲ್ಲಿ ತಮ್ಮ ಭವಿಷ್ಯ ಕಂಡುಕೊಂಡಿದ್ದರು. 2003ರಲ್ಲಿ ಅವರು ಮಿಸ್ ವಾಯುವ್ಯ ಸ್ವಿಟ್ಜರ್ಲೆಂಡ್‌ನ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದು ಮಿಸ್ ಸ್ವಿಟ್ಜರ್ಲೆಂಡ್ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇದಾದ ನಂತತರ ಅವರು ಉದಯೋನ್ಮುಖ ಮಾಡೆಲ್‌ಗಳಿಗೆ ತರಬೇತಿ ನೀಡುವ ತರಬೇತುದಾರೆಯಾಗಿ ಫೇಮಸ್ ಆಗಿದ್ದರು. ಐಟಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದ ಈಕೆ ಯಶಸ್ವಿಯಾಗಿ ಕೋಚಿಂಗ್ ಸೆಂಟರೊಂದನ್ನು ಮುನ್ನಡೆಸುತ್ತಿದ್ದರು.