ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇಟಲಿ ಪ್ರಧಾನಿ ಗಿಯಸೆಪ್ಪೆ ಕಾಂಟೆ ಅಲ್ಲಿನ ಜನರಿಗೆ ಮನೆಯಲ್ಲಿಯೇ ಇರಬೇಕು ಎಂದು ಆದೇಶಿಸಿದ್ದಾರೆ. ಅಂದರೆ ಅಲ್ಲಿನ ಪ್ರಜೆಗಳು ಮನೆಯಿಂದ ಆಚೆ ಬರುವಂತಿಲ್ಲ. ತೀರಾ ಅಗತ್ಯ ಇರುವಾಗ ಮಾತ್ರ ಹೊರಗೆ ಬರಬಹುದು.
ಕೊರೋನಾ ಸೋಂಕು ನಿಯಂತ್ರಣಕ್ಕಾಗಿ 6 ಕೋಟಿ ಜನಸಂಖ್ಯೆ ಇರುವ ಇಡೀ ಇಟಲಿಯನ್ನು ಅಲ್ಲಿನ ಸರ್ಕಾರ ಬಂದ್ (ಲಾಕ್ ಡೌನ್) ಮಾಡಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಅಂದರೆ ಏನು, ಅಲ್ಲಿ ಯಾವುದಕ್ಕೆಲ್ಲಾ ನಿರ್ಬಂಧ ಇದೆ ಎಂಬ ವಿವರ ಇಲ್ಲಿದೆ.
ಲಾಕ್ ಡೌನ್ ಅಂದರೆ ಏನು?
undefined
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇಟಲಿ ಪ್ರಧಾನಿ ಗಿಯಸೆಪ್ಪೆ ಕಾಂಟೆ ಅಲ್ಲಿನ ಜನರಿಗೆ ಮನೆಯಲ್ಲಿಯೇ ಇರಬೇಕು ಎಂದು ಆದೇಶಿಸಿದ್ದಾರೆ. ಅಂದರೆ ಅಲ್ಲಿನ ಪ್ರಜೆಗಳು ಮನೆಯಿಂದ ಆಚೆ ಬರುವಂತಿಲ್ಲ. ತೀರಾ ಅಗತ್ಯ ಇರುವಾಗ ಮಾತ್ರ ಹೊರಗೆ ಬರಬಹುದು. ವ್ಯಕ್ತಿ ಮನೆಯಿಂದ ಹೊರಬರಲು, ಹೊರಗೆ ಸಂಚರಿಸಲು ಅನುಮತಿ ಪಡೆಯಬೇಕು. ಹಾಗೆಯೇ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.
ಕೊರೋನಾ ಭೀತಿ: ಭಾರತದ ಎಲ್ಲಾ ವೀಸಾ ಅಮಾನತು!
ಇಟಲಿಯಲ್ಲಿ ಫುಟ್ಬಾಲ್ ಪಂದ್ಯಗಳು ಸೇರಿದಂತೆ ಎಲ್ಲಾ ಬಗೆಯ ಕ್ರೀಡಾಕೂಟಗಳನ್ನು ನಿಷೇಧಿಸಲಾಗಿದೆ. ಏಪ್ರಿಲ್ 3ರ ವರೆಗೆ ಶಾಲೆ ಮತ್ತು ವಿಶ್ವ ವಿದ್ಯಾಲಯಗಳಿಗೆ ರಜೆ ನೀಡಲಾಗಿದೆ. ಪಬ್, ಹೋಟೆಲ್, ಕೆಫೆಗಳನ್ನು ಮುಚ್ಚಲಾಗಿದೆ. ವಿಮಾನದಲ್ಲಿ ಪ್ರಯಾಣಿಸುವವರು ತಮ್ಮ ಪ್ರಯಾಣದ ಅನಿವಾರ್ಯತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು.
ಅದೇ ರೀತಿ ವಿಮಾನಗಳಿಂದ ಬಂದವರೂ ತಮ್ಮ ಪ್ರವಾಸದ ದಾಖಲೆಗಳನ್ನು ಒಪ್ಪಿಸಿ, ದೇಶ ಪ್ರವೇಶಿಸಲು ಅಗತ್ಯ ಅನುಮತಿ ಪಡೆಯಬೇಕು. ಸುಳ್ಳು ಹೇಳಿ ಪ್ರಯಾಣಿಸುವವರಿಗೆ 16,000 ದಂಡ ಅಥವಾ 3 ತಿಂಗಳು ಜೈಲುವಾಸದ ಶಿಕ್ಷೆ ಇದೆ ಎಂದೂ ಘೋಷಿಸಲಾಗಿದೆ.
ಚೀನಾ ನಂತರ ಅತಿ ಹೆಚ್ಚು ಜನ ಮೃತಪಟ್ಟದೇಶ
ಚೀನಾ ಮೂಲದ ಕೊರೋನಾ ವೈರಸ್ ಅಲ್ಲಿ 3000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು, ಇತರ ರಾಷ್ಟ್ರಗಳಿಗೂ ವೇಗವಾಗಿ ಹಬ್ಬುತ್ತಿದೆ. ಇಟಲಿಯಲ್ಲಿ ಈವರೆಗೆ ಕೊರೋನಾ ವೈರಸ್ ಬಾಧೆಯಿಂದ 463 ಜನರು ಮೃತಪಟ್ಟಿದ್ದು, 10,149 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಚೀನಾ ನಂತರ ಅತಿ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ದೇಶ ಇಟಲಿ. ಹಾಗಾಗಿ ಅಲ್ಲಿನ ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ.
ಪ್ರವಾಸಿಗಳಿಗೆ ಸೂಚನೆ: ಕೊರೋನಾ ಹಿನ್ನೆಲೆ ಈ ಪ್ರದೇಶಕ್ಕೆ ಭೇಟಿ ಬೇಡ
ರಾಷ್ಟ್ರವೊಂದು ಸ್ತಬ್ಧಗೊಂಡಿದ್ದು ಇದೇ ಮೊದಲು
ಚೀನಾದಲ್ಲಿ ಕೊರೋನಾ ವ್ಯಾಧಿ ತೀವ್ರಗೊಂಡಾಗ ಚೀನಾದ ವುಹಾನ್ ಸೇರಿದಂತೆ ಕೆಲ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಜನರ ಸಂಚಾರಕ್ಕೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತು. ಆದರೆ ದೇಶದ ಇತರ ಭಾಗಗಳಲ್ಲಿ ಇಂಥ ನಿರ್ಬಂಧ ಇರಲಿಲ್ಲ. ಆದರೆ ಇಡೀ ದೇಶವನ್ನೇ ಹೀಗೆ ನಿರ್ಬಂಧಿಸಿದ್ದು, ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದು ಇದೇ ಮೊದಲು.
ಇಟಲಿ ಜನರ ಪ್ರತಿಕ್ರಿಯೆ ಹೇಗಿದೆ?
ಕಿರಾಣಿ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್ಗಳು ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ತೆರೆದಿರುತ್ತವೆ. ಅಲ್ಲಿಗೆ ಹೋಗಿ ಬರಲು ಅನುಮತಿಯೂ ಇದೆ ಎಂದು ಸರ್ಕಾರ ಹೇಳಿದೆ. ಆದಾಗ್ಯೂ ದೇಶದ ಪ್ರಧಾನಿ ಇಟಲಿ ಲಾಕ್ಡೌನ್ಗೆ ಕರೆಕೊಡುತ್ತಿದ್ದಂತೆಯೇ ಜನರು ಅಗತ್ಯ ಸಾಮಗ್ರಿಗಳ ಕೊಳ್ಳಲು ಅಂಗಡಿಗಳ ಮುಂದೆ ಮುಗಿಬಿದ್ದಿದಾರೆ. ಆಲೂಗಡ್ಡೆ, ಬಿಸ್ಕೆಟ್, ಹಾಲುಗಳನ್ನು ಶೇಖರಿಸಿಟ್ಟುಕೊಳ್ಳುವಷ್ಟುಖರೀದಿಸುತ್ತಿದ್ದಾರೆ. #IStayHome (ನಾನು ಮನೆಯಲ್ಲಿಯೇ ಇರುತ್ತೇನೆ) ಎಂಬ ಹ್ಯಾಷ್ಟ್ಯಾಗ್ಗಳು ಟ್ವೀಟರ್ನಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಸ್ವತಃ ಪ್ರಧಾನಿಯೇ ಹೀಗೆ ಕರೆಕೊಟ್ಟಿದ್ದಾರೆ.
ಕೊರೋನಾ ಭೀತಿ: ಬೆಳಗಾವಿಯಲ್ಲಿ ಸುಲಭವಾಗಿ ಮಾಸ್ಕ್‌ಗಳೇ ಸಿಗ್ತಿಲ್ಲ, ಆತಂಕದಲ್ಲಿ ಜನತೆ!
ಚೀನಾದಂತೆ ಇಟಲಿಯಲ್ಲಿ ಚಿಕಿತ್ಸೆ ಸೌಕರ್ಯಗಳಿಲ್ಲ
ವೈರಸ್ ತಡೆಗೆ ಇಟಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದ್ದರೂ ಇಟಲಿ ಆರೋಗ್ಯ ವ್ಯವಸ್ಥೆಯಲ್ಲಿ ಸೂಕ್ತ ಸೌಲಭ್ಯಗಳು ಲಭ್ಯವಿಲ್ಲದಿರುವುದು ಆತಂಕ ಮೂಡಿಸಿದೆ. ಡಾಕ್ಟರ್ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆಗಳಲ್ಲಿನ ಸನ್ನಿವೇಶ ಹೇಗಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖೆಯಲ್ಲಿ ಸೋಂಕು ವ್ಯಾಪಿಸಿದರೆ ಆರೋಗ್ಯ ಸೌಲಭ್ಯಗಳು, ವಾರ್ಡ್ಗಳು ಸಾಕಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಿಬ್ಬಂದಿಗೆ ಮಾತ್ರ ಕೆಲಸ
ಇಡೀ ದೇಶವೇ ಬಂದ್ ಆಗಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯರು ಮತ್ತು ನರ್ಸ್‌ಗಳು ಮಾತ್ರ ಹಗಲು-ರಾತ್ರಿ ಕೆಲಸ ಮಾಡಬೇಕೆಂದು ಸರ್ಕಾರ ಆದೇಶಿಸಿದೆ. ಅವರ ರಜೆಗಳನ್ನು ರದ್ದುಗೊಳಿಸಲಾಗಿದೆ.
ತಜ್ಞ ವೈದ್ಯರೊಂದಿಗೆ ತುರ್ತು ಕಾರ್ಯಪಡೆಗಳನ್ನು ರಚಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ಚಿಕಿತ್ಸೆ ಬಳಿಕವೂ ಮನೆಯಲ್ಲೇ ಇರುವಂತೆ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಸೂಚಿಸಲಾಗಿದೆ.
ಇಟಲಿಗೆ ಹಲವು ದೇಶಗಳಿಂದ ವಿಮಾನ ಬಂದ್
ಇಟಲಿಯಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆಯೇ ಹಲವು ದೇಶಗಳು ಇಟಲಿಗೆ ವಿಮಾನ ಸೇವೆಯನ್ನು ಬಂದ್ ಮಾಡಿವೆ. ಬ್ರಿಟಿಷ್ ಏರ್ವೇಸ್ ಇಟಲಿಗೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ರದ್ದು ಮಾಡಿದೆ. ಬ್ರಿಟನ್ ನೂತನ ಟ್ರಾವೆಲ್ ಅಡ್ವೈಸರಿಯನ್ನು ಬಿಡುಗಡೆ ಮಾಡಿದೆ. ಇಟಲಿಯಿಂದ ಬರುವ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದ ಜನರಿಗೆ ಆಸ್ಪ್ರೇಲಿಯಾ ನಿಷೇಧ ಹೇರಿದೆ. ಭಾರತ, ರೊಮೇನಿಯಾ, ಸ್ಲೋವಾಕಿಯಾ ಸೇರಿದಂತೆ ಹಲವು ಹೇಶಗಳು ಇಟಲಿಗೆ ವಿಮಾನ ಹಾರಾಟವನ್ನು ರದ್ದುಮಾಡಿವೆ.