ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ 2 ತಿಂಗಳ ಮೊದಲೇ ಇರಿಸಿದ್ದ ಬಾಂಬ್‌ನಿಂದ ಹಮಾಸ್‌ ಚೀಫ್‌ ಹತ್ಯೆ!

By Kannadaprabha News  |  First Published Aug 3, 2024, 8:38 AM IST

ರಾನ್‌ ರಾಜಧಾನಿ ತೆಹರಾನ್‌ನಲ್ಲಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆನನ್ನು ಹತ್ಯೆಗೈಯಲು ಎರಡು ತಿಂಗಳ ಮೊದಲೇ ಅತಿಥಿ ಗೃಹದಲ್ಲಿ ಬಾಂಬ್‌ ಇರಿಸಲಾಗಿತ್ತು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದೆ.


ತೆಹರಾನ್‌ (ಆ.3): ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆನನ್ನು ಹತ್ಯೆಗೈಯಲು ಎರಡು ತಿಂಗಳ ಮೊದಲೇ ಅತಿಥಿ ಗೃಹದಲ್ಲಿ ಬಾಂಬ್‌ ಇರಿಸಲಾಗಿತ್ತು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದೆ.

ಇರಾನ್‌ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆ ಆಗಮಿಸಿದ್ದರು. ಅವರನ್ನು ಉತ್ತರ ತೆಹರಾನ್‌ನಲ್ಲಿ ಇರಾನ್‌ ಸರ್ಕಾರದ ಅಧಿಕೃತ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಹನಿಯೆ ತೆಹರಾನ್‌ಗೆ ಆಗಮಿಸಿದಾಗಲೆಲ್ಲ ಇದೇ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಬಾರಿಯ ಭೇಟಿ ವೇಳೆ ಅವರು ಕೋಣೆಯಲ್ಲಿ ತಂಗಿದ್ದಾಗ, ಎರಡು ತಿಂಗಳ ಮೊದಲೇ ಕಳ್ಳಸಾಗಣೆ ಮಾಡಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕಗಳನ್ನು ರಿಮೋಟ್‌ ಮೂಲಕ ಸ್ಫೋಟಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Latest Videos

undefined

Israel–Hamas war: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್  ಇರಾನ್‌ನಲ್ಲಿ  ಹತ್ಯೆ

ಹಮಾಸ್‌ ಮೇಲೆ ಯುದ್ಧ ನಡೆಸುತ್ತಿರುವ ಇಸ್ರೇಲ್‌ ಸೇನೆಯೇ ಹನಿಯೆನನ್ನು ಹತ್ಯೆಗೈದಿದೆ ಎಂದು ಇರಾನ್‌ ಮತ್ತು ಹಮಾಸ್‌ ಆರೋಪಿಸಿವೆ. ಇಸ್ರೇಲ್‌ ಇದನ್ನು ಅಲ್ಲಗಳೆದೂ ಇಲ್ಲ, ಒಪ್ಪಿಕೊಂಡೂ ಇಲ್ಲ. ಬುಧವಾರ ಹನಿಯೆ ಹತ್ಯೆಯಾಗಿದ್ದರು.

click me!