Latest Videos

ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ

By Suvarna NewsFirst Published Sep 25, 2023, 3:10 PM IST
Highlights

ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ತೀವ್ರವಾಗಿ ಹಳಸಿದೆ. ಅತ್ತ ಮಿತ್ರ ರಾಷ್ಟ್ರದ ಸೋಗು ಹಾಕಿಕೊಂಡಿದ್ದ ಅಮೆರಿಕವೂ ಕೂಡ ಪರೋಕ್ಷವಾಗಿ ಕೆನಡಾವನ್ನು ಬೆಂಬಲಿಸುತ್ತಿದೆ. ಆದರೆ ನಮ್ಮ ಪಕ್ಕದ ನೆರೆಯ ಪುಟ್ಟ ರಾಷ್ಟ್ರ ಬಾಂಗ್ಲಾದೇಶ ಈ ವಿಚಾರದಲ್ಲಿ ಭಾರತದ ಬೆನ್ನಿಗೆ ನಿಂತು ಅಚ್ಚರಿ ಮೂಡಿಸಿದೆ. ಈ ಮೂಲಕ ನಿಜ ಸ್ನೇಹವನ್ನು ಸಾಬೀತುಪಡಿಸಿದೆ. 

ನವದೆಹಲಿ: ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ತೀವ್ರವಾಗಿ ಹಳಸಿದೆ. ಅತ್ತ ಮಿತ್ರ ರಾಷ್ಟ್ರದ ಸೋಗು ಹಾಕಿಕೊಂಡಿದ್ದ ಅಮೆರಿಕವೂ ಕೂಡ ಪರೋಕ್ಷವಾಗಿ ಕೆನಡಾವನ್ನು ಬೆಂಬಲಿಸುತ್ತಿದೆ. ಆದರೆ ನಮ್ಮ ಪಕ್ಕದ ನೆರೆಯ ಪುಟ್ಟ ರಾಷ್ಟ್ರ ಬಾಂಗ್ಲಾದೇಶ ಈ ವಿಚಾರದಲ್ಲಿ ಭಾರತದ ಬೆನ್ನಿಗೆ ನಿಂತು ಅಚ್ಚರಿ ಮೂಡಿಸಿದೆ. ಈ ಮೂಲಕ ನಿಜ ಸ್ನೇಹವನ್ನು ಸಾಬೀತುಪಡಿಸಿದೆ. 

ನಮಗೆ ಭಾರತದ ಬಗ್ಗೆ ತುಂಬಾ ಹೆಮ್ಮೆ ಇದೆ. ಏಕೆಂದರೆ ಅವರು ಅಪ್ರಬುದ್ಧವೆನಿಸಿದ ನಿರ್ಧಾರಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ,  ಭಾರತದೊಂದಿಗೆ ನಾವು ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ತೂಕ ಮೌಲ್ಯಯುತವಾದ ಸ್ನೇಹವನ್ನು ನಾವು ಭಾರತದೊಂದಿಗೆ ಹೊಂದಿದ್ದೇವೆ.  ಆದರೆ  ಕೆನಡಾ ಹಾಗೂ ಭಾರತದ ನಡುವಿನ ಈ ಹೊಸ ಬೆಳವಣಿಗೆ ಬೇಸರದ ವಿಚಾರ ಎಂದು ಬಾಂಗ್ಲಾ ವಿದೇಶಾಂಗ ಸಚಿವರು ನುಡಿದಿದ್ದಾರೆ. 

ಭಾರತ ಮಾತೆಗೆ ಜೈ ಎಂದಷ್ಟೇ ಹೇಳಬಲ್ಲೆ... ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನೂಪುರ್ ಶರ್ಮಾ

ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಮರ ಉಂಟಾಗಿದ್ದು,  ಇದರಿಂದ  ಜಿ-20 ವೇಳೆ ನವದೆಹಲಿ ಒಟ್ಟವಾ ನಡುವೆ ಆದ ಒಪ್ಪಂದದ ಮೇಲೆ ಇದರ ಕರಿಛಾಯೆ ಬೀಳುತ್ತಿದೆ. ಆದರೆ ಇದೊಂದು ಬೇಸರದ ವಿಚಾರ. ಆದರೆ ಈ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲದೇ ಇರುವುದರಿಂದ ಇದರ ಬಗ್ಗೆ ಕಾಮೆಂಟ್ ಮಾಡುವುದು ಸರಿ ಅಲ್ಲ. ಆದರೆ ಭಾರತದ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತ ಎಂದಿಗೂ ಅಸಂಬದ್ಧವಾದ ನಿರ್ಧಾರ ಕೈಗೊಳ್ಳುವುದಿಲ್ಲ, ನಮ್ಮ ಹಾಗೂ ಭಾರತದ ನಡುವೆ ಬಹಳ ಉತ್ತಮವಾದ ಸಂಬಂಧವಿದೆ. ಈ ರಾಜತಾಂತ್ರಿಕ ಸಮರ ಆದಷ್ಟು ಬೇಗ ಕೊನೆಗೊಳ್ಳುವುದು ಎಂಬ ವಿಶ್ವಾಸವಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವ ಅಬ್ದುಲ್ ಮೊಮೆಮ್‌ ( Abdul momen) ಹೇಳಿದ್ದಾರೆ.   

ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಅವರು ಕೆನಡಾದಲ್ಲಿ ಹತ್ಯೆಯಾದ ಭಾರತ ಮೂಲದ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ನಂತರ  ಬಾಂಗ್ಲಾ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದ್ದು, ಮಹತ್ವದ್ದಾಗಿದೆ. ಆದರೆ ಟ್ರಡೋ ಆರೋಪವನ್ನು ಭಾರತ ಸರ್ಕಾರ ಹಾಗೂ  ವಿದೇಶಾಂಗ ಇಲಾಖೆ ತೀವ್ರವಾಗಿ ಖಂಡಿಸಿದ್ದಲ್ಲದೇ ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದಿದೆ. ಖಲಿಸ್ತಾನಿ ಉಗ್ರರ ಪರ ಟ್ರುಡೋ ಮೃದು ಧೋರಣೆಯಿಂದ ಭಾರತ ಕೆನಡಾ ಸಂಬಂಧ ಮತ್ತಷ್ಟು ಹಳಸಿದೆ.

| Foreign Minister of Bangladesh Dr A.K. Abdul Momen says, "We have a lot of hopes from the 78th UNGA, most of the whole world is divided and Bangladesh believe that multilateralism is the way to go. We have so many challenges like climate change, price inflation across… pic.twitter.com/Jxl5519Yct

— ANI (@ANI)

 

ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್‌

ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದ ಅಮೆರಿಕ!

ಆದರೆ ಮತ್ತೊಂದೆಡೆ ಭಾರತದ ಮಿತ್ರರಾಷ್ಟ ಎನಿಸಿಕೊಂಡಿದ್ದ ಅಮೆರಿಕಾ ನಿಜ್ಜರ್ ಹತ್ಯೆಯ ವಿಚಾರದಲ್ಲಿ ಕೆನಡಾಗೆ ಪರೋಕ್ಷವಾಗಿ ತೆರೆಮರೆಯಲ್ಲಿ ಬೆಂಬಲಿಸುತ್ತಿದೆ. ಕೆನಡಾದಲ್ಲಿ ಸಂಭವಿಸಿದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಭಾರತದ ವಿರುದ್ಧ ಕೆನಡಾಕ್ಕೆ ‘ಗುಪ್ತಚರ ಮಾಹಿತಿ’ ಒದಗಿಸಿದ್ದು ಭಾರತದ ಮಿತ್ರ ದೇಶ ಅಮೆರಿಕ(US). ಅದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ಸಿಬ್ಬಂದಿ, ಭಾರತೀಯ ಅಧಿಕಾರಿಗಳ ಸಂಭಾಷಣೆ ಕದ್ದಾಲಿಸಿದ್ದಾರೆ. ಈ ಎರಡೂ ಕಾರಣಗಳಿಂದ ಕೆನಡಾಗೆ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಖಚಿತ ಸಾಕ್ಷ್ಯ ಲಭ್ಯವಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿತ್ತು.

ಇದೇ ವೇಳೆ ಕೆನಡಾದಲ್ಲಿನ ಅಮೆರಿಕ ರಾಯಭಾರಿ (US ambassador to Canada) ಕೋಹೆನ್‌ ಕೂಡಾ, ನಿಜ್ಜರ್‌ ಹತ್ಯೆ ಕುರಿತು ‘ಫೈವ್‌ ಐ’ (Five EYe) ಮೈತ್ರಿಕೂಟದ ದೇಶಗಳ ನಡುವೆ ರಹಸ್ಯ ಮಾಹಿತಿ ಹಂಚಿಕೆಯಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಮಾಹಿತಿ ವಿನಿಮಯ ಆಗಿದ್ದನ್ನು ಅಮೆರಿಕ ಒಪ್ಪಿಕೊಂಡಿದ್ದು ಇದೇ ಮೊದಲು ಎಂಬುದು ಗಮನಾರ್ಹ. ‘ಫೈವ್‌ ಐ’ ಎಂಬುದು ಕೆನಡಾ, ಅಮೆರಿಕ, ಆಸ್ಟ್ರೇಲಿಯಾ(Australia), ನ್ಯೂಜಿಲೆಂಡ್‌ ಹಾಗೂ ಬ್ರಿಟನ್‌ (Britain) ಒಳಗೊಂಡ ಸಮೂಹವಾಗಿದೆ.

ಜಗತ್ತು ದ್ವಿಮುಖ ನೀತಿಗಳಿಂದ ತುಂಬಿದೆ: ಜೈಶಂಕರ್‌ ಕಿಡಿ

2023ರ ಜೂ.18ರಂದು ನಿಜ್ಜರ್‌ ಹತ್ಯೆ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಕೆನಡಾಕ್ಕೆ ಕೆಲವೊಂದು ಮಾಹಿತಿಯನ್ನು ನೀಡಿದ್ದವು. ಇದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ನಡೆಸಿದ ಭಾರತೀಯರ ಸಂಭಾಷಣೆ ಕದ್ದಾಲಿಕೆಯು ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾಕ್ಕೆ ಖಚಿತಪಡಿಸಿತು. ಹೀಗಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau)ಅವರು ಬಹಿರಂಗವಾಗಿಯೇ ಈ ಕುರಿತು ಘೋಷಣೆ ಮಾಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿತ್ತು.

click me!