ಇಸ್ರೇಲ್, ಇರಾನ್ ಹಾಗೂ ಹಮಾಸ್ ನಡುವಣ ಯುದ್ಧ ವಿಶ್ವ ಯುದ್ಧವಾಗಿ ಬದಲಾಗುತ್ತಾ ಎಂಬ ಭೀತಿ ಶುರುವಾಗಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯನನ್ನು ಇರಾನ್‌ನಲ್ಲೇ ಇಸ್ರೇಲ್ ರಾಕೆಟ್ ಹಾರಿಸಿ ಹತ್ಯೆ ಮಾಡಿದ ನಂತರ ಇರಾನ್ ಹಾಗೂ ಹಮಾಸ್ ಬೆಂಬಲಿತ ರಾಷ್ಟ್ರಗಳು ಕೋಪದಿಂದ ಕುದಿಯುತ್ತಿವೆ.
ಇಸ್ರೇಲ್, ಇರಾನ್ ಹಾಗೂ ಹಮಾಸ್ ನಡುವಣ ಯುದ್ಧ ವಿಶ್ವ ಯುದ್ಧವಾಗಿ ಬದಲಾಗುತ್ತಾ ಎಂಬ ಭೀತಿ ಶುರುವಾಗಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯನನ್ನು ಇರಾನ್‌ನಲ್ಲೇ ಇಸ್ರೇಲ್ ರಾಕೆಟ್ ಹಾರಿಸಿ ಹತ್ಯೆ ಮಾಡಿದ ನಂತರ ಇರಾನ್ ಹಾಗೂ ಹಮಾಸ್ ಬೆಂಬಲಿತ ರಾಷ್ಟ್ರಗಳು ಕೋಪದಿಂದ ಕುದಿಯುತ್ತಿದ್ದು, ಇಸ್ರೇಲ್‌ಗೆ ಬುದ್ದಿ ಕಲಿಸಲು ಯೋಜನೆ ರೂಪಿಸುತ್ತಿವೆ. ಇತ್ತ ಲೆಬನಾನ್ ಬೆಂಬಲಿತ ಹಿಜ್ಬುಲ್ಹಾ ಉಗ್ರಗಾಮಿ ಸಂಘಟನೆ ದಕ್ಷಿಣ ಲೆಬನಾನ್‌ನಿಂದ ಇಸ್ಟ್ರೇಲ್‌ನ ಬೈಟ್ ಹಿಲ್ಲೆಲ್‌ನತ್ತ ಒಂದಾದ ಮೇಲೊಂದರಂತೆ 50ಕ್ಕೂ ಹೆಚ್ಚ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲನ್ನು ನಡುಗಿಸುವ ಪ್ರಯತ್ನ ಮಾಡುತ್ತಿದೆ. 50 ಕತ್ಯುಶ ರಾಕೆಟ್‌ಗಳನ್ನು ಉತ್ತರ ಇಸ್ರೇಲ್‌ನತ್ತ ಹಿಜ್ಬುಲ್ಲಾ ಸಂಘಟನೆ ಹಾರಿ ಬಿಟ್ಟಿದ್ದು, ಇದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿದೆ.
ಆಗಸ್ಟ್ 3 ರಂದು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್‌ನ ಅಧಿಕಾರಿ ಅಲಿ ನಝಿಹ್ ಅಬ್ದ್ ಅಲಿ ಸಾವನ್ನಪ್ಪಿದ್ದ. ಹಿಜ್ಬುಲ್ಲಾ ಪ್ರಮುಖ ಕಮಾಂಡರ್ ಫೌದ್ ಶುಕ್ರ್ ಹತ್ಯೆಯಾದ ಕೆಲವೇ ದಿನಗಳ ಅಂತರದಲ್ಲಿ ಈ ಹತ್ಯೆ ನಡೆದಿತ್ತು. ಹಿರಿಯ ಮಿಲಿಟರಿ ನಾಯಕ ಮತ್ತು ಹಸನ್ ನಸ್ರಲ್ಲಾ ಅವರ ಸಲಹೆಗಾರನಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಫೌದ್ ಶುಕ್ರ್ ಜುಲೈ 30 ರಂದು ಹತ್ಯೆಯಾಗಿದ್ದ. ಈ ಎಲ್ಲಾ ಹತ್ಯೆಗಳ ಸಲುವಾಗಿ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಸಂಘಟನೆ ಮುಂದಾಗಿದೆ. ಮೇಲನ ಗಲಿಲೀ ಸೆಟಲ್‌ಮೆಂಟ್ ಹಾಗೂ ಬೈಟ್ ಹಿಲೆಲ್ ಪ್ರದೇಶದ ಮೇಲಿನ ದಾಳಿಯೂ ಸೇರಿದಂತೆ ಈ ಎಲ್ಲಾ ದಾಳಿಗಳಿಗೆ ಒಟ್ಟಾಗಿ ಹಿಜ್ಬುಲ್ಲಾ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ತನ್ನ ನಾಯಕರ ಹತ್ಯೆಗೆ ಹಿಜ್ಬುಲ್ಲಾ ತೀವ್ರ ಪ್ರತೀಕಾರದ ಪ್ರತಿಜ್ಞೆ ಮಾಡಿದೆ. ಇದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಮತ್ತುಷ್ಟು ಹೆಚ್ಚಿಸಿದೆ.
ಲೆಬನಾನ್‌ನ ಕ್ಫರ್ ಕೆಲಾ ಮತ್ತು ಡೀರ್ ಸಿರಿಯಾನ್‌ನ ಮೇಲೆ ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಬೀಟ್ ಹಿಲ್ಲೆಲ್‌ನ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ಬೆಂಬಲಿತ ಗುಂಪು ಹೇಳಿದೆ. ಆದರೆ ಈ ಎಲ್ಲಾ ರಾಕೆಟ್ ದಾಳಿಗಳನ್ನುಇಸ್ರೇಲ್‌ನ ಐರನ್ ಡೋಮ್ ತಡೆ ಹಿಡಿದಿದೆ ಎಂದು ವರದಿ ಆಗಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಮಾಡಿರುವುದಕ್ಕೆ ಇರಾನ್ ಮತ್ತು ಹಮಾಸ್ ಸಂಘಟನೆ ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
Interceptions of rockets in northern Israel. pic.twitter.com/mCNYxkFLPD
— Israel War Room (@IsraelWarRoom)
ಇರಾನ್ ರಾಜಧಾನಿ ತೆಹರಾನ್‌ನಲ್ಲಿ 2 ತಿಂಗಳ ಮೊದಲೇ ಇರಿಸಿದ್ದ ಬಾಂಬ್‌ನಿಂದ ಹಮಾಸ್ ಚೀಫ್ ಹತ್ಯೆ!