Latest Videos

ಪುತ್ರಿಯ ಕಾಲೇಜು ಕಳ್ಳಾಟ ಅರಿತ ಹೆತ್ತಮ್ಮನ 30 ಬಾರಿ ಇರಿದು ಕೊಂದ ಮಗಳು...

By Suvarna NewsFirst Published Sep 26, 2023, 2:57 PM IST
Highlights

ಅಮೆರಿಕಾದ ಓಹಿಯೋದಲ್ಲಿ 23 ವರ್ಷದ ಹದಿ ಹರೆಯದ ಮಗಳೊಬ್ಬಳು ತನ್ನ ಹೆತ್ತಮ್ಮನನ್ನೇ ಚಾಕುವಿನಿಂದ 30 ಬಾರಿ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. 

ಒಹಿಯೋ: ಅಮೆರಿಕಾದ ಓಹಿಯೋದಲ್ಲಿ 23 ವರ್ಷದ ಹದಿ ಹರೆಯದ ಮಗಳೊಬ್ಬಳು ತನ್ನ ಹೆತ್ತಮ್ಮನನ್ನೇ ಚಾಕುವಿನಿಂದ 30 ಬಾರಿ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ. 2020ರ ಫೆಬ್ರವರಿಯಲ್ಲಿ  ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಮಗಳು ದೋಷಿ ಎಂಬುದು ಸಾಬೀತಾಗಿದ್ದು, ಸೆಪ್ಟೆಂಬರ್ 28 ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ತಾನು ಕಾಲೇಜಿನಿಂದ ಹೊರ  ಹಾಕಲ್ಪಟ್ಟ ವಿಚಾರ ಅಮ್ಮನಿಗೆ ತಿಳಿದ ನಂತರ 23 ವರ್ಷದ ಯುವತಿ ಅಮ್ಮನ ಮೇಲೆ ದಾಳಿ ನಡೆಸಿದ್ದಾಳೆ. ದೋಸೆ ಮಾಡುವ ಪ್ಯಾನ್ ಹಾಗೂ ಚಾಕುವಿನಿಂದ ಅಮ್ಮನ ಮೇಲೆ ಹಲ್ಲೆ ಮಾಡಿದ್ದಾಳೆ. 

ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, ಅಕ್ರಾನ್‌ನ ನಿವಾಸಿಯಾದ 50 ವರ್ಷದ  ಬ್ರೆಂಡಾ ಪೊವೆಲ್ (Brenda Powell) ಮಗಳಿಂದಲೇ ಹತ್ಯೆಯಾದ ನತದೃಷ್ಟೆ. ಈಕೆ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಲ್ಲದೇ ನಂತರ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಈಕೆಯ ಪುತ್ರಿ 23 ವರ್ಷದ ಸಿಡ್ನಿ ಪೊವೆಲ್ (Sydney Powell)ನನ್ನು ಪೊಲೀಸರು ಬಂಧಿಸಿದ್ದಾರೆ.

18ರ ಹುಡುಗನಾಗಲು ಹೊರಟಿರುವ 46ರ ಹರೆಯದ ಉದ್ಯಮಿ ಬ್ರಿಯಾನ್ ಲೈಫ್‌ಸ್ಟೈಲ್ ಹೇಗಿದೆ ನೋಡಿ?


ಮಾರ್ಚ್‌ 2020 ರಂದು ಸಿಡ್ನಿ ಪೊವೆಲ್ ಕಬ್ಬಿಣದ ಬಾಣಲೆಯಿಂದ ತಾಯಿ ಬ್ರೆಂಡಾ ಪೊವೆಲ್ ಅವರ ತಲೆಗೆ ಹೊಡೆದಿದ್ದಾಳೆ. ನಂತರ ಕುತ್ತಿಗೆಗೆ ಸುಮಾರು 30 ಬಾರಿ ಇರಿದಿದ್ದಾಳೆ ಎಂದು ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಮಾಜಿ ವಿದ್ಯಾರ್ಥಿನಿಯಾದ ಸಿಡ್ನಿ ಪೊವೆಲ್ ನನ್ನು ಸಮ್ಮಿಟ್ ಕೌಂಟಿ ನ್ಯಾಯಾಲಯವೂ ದೋಷಿ ಎಂದು ಘೋಷಿಸಿದಾಗ ಆಕೆ ಜೋಆಗಿ ಅಳಲು ಶುರು ಮಾಡಿದ್ದಾಳೆ ಎಂದು ಅಕ್ರಾನ್ ಬೀಕನ್ ಜರ್ನಲ್ ವರದಿ ಮಾಡಿದೆ.

ಸದ್ದಿಲ್ಲದೇ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯ ದೊಡ್ಡ ಸಾಧನೆ: ಕ್ಷುದ್ರಗ್ರಹದ ಮಣ್ಣು ತಂದ ನಾಸಾ

2020ರ ಮಾರ್ಚ್‌ನಲ್ಲಿ ಬ್ರೆಂಡಾ ತೀವ್ರವಾದ ಗಾಯಗಳಿಂದ ಮನೆಯಲ್ಲಿ ಬಿದ್ದಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಮಗಳು ಸಿಡ್ನಿ ಓದುತ್ತಿರುವ ಕಾಲೇಜಿನ ಅಧಿಕಾರಿಗಳ ಜೊತೆ ಆಕೆ ದೂರವಾಣಿಯಲ್ಲಿ ಮಾತನಾಡುತ್ತಿರುವಾಗಲೇ ಮಗಳು ಅಮ್ಮನ ಮೇಲೆ ದಾಳಿ ಮಾಡಿದ್ದಳು. 

ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ

ಆದರೆ ಈಕೆ ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಈಕೆ ಈ ಕೊಲೆಗೆ ಜವಾಬ್ದಾರಿಯಲ್ಲ ಎಂದು ಆಕೆಯ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಆದರೆ ಆಕೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾಳೆ ಎಂದು ವಾದ ಮಂಡಿಸಿದ ಸರ್ಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತಾಯಿಯನ್ನು ಕೊಂದ ಪ್ರಕರಣದಲ್ಲಿ ಸಿಡ್ನಿ ಪೊವೆಲ್ ದೋಷಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ಸೆಪ್ಟೆಂಬರ್ 28 ರಂದು ಪ್ರಕಟವಾಗಲಿದೆ.  

ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ

click me!