ಮಹಿಳೆಯೊಬ್ಬರು ಬ್ಯಾಗ್ ಪರಿಶೀಲನೆ ವೇಳೆ ಏರ್‌ಪೋರ್ಟ್ ಸಿಬ್ಬಂದಿ ನಿಮ್ಮ ಬಳಿ ಸೆಕ್ಸ್ ಟಾಯ್ ಇದೆಯಾ ಎಂದು ಪ್ರಶ್ನೆ ಮಾಡಿದ ಘಟನೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಮಾನಯಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ತಮ್ಮ ಜೊತೆಯಲ್ಲಿ ತೆಗೆದುಕೊಂಡ ಬಂದ ಪ್ರತಿಯೊಂದು ವಸ್ತುಗಳನ್ನು ಪರಿಶೀಲನೆ ನಡೆಸುತ್ತಾರೆ. ಕೊಂಚ ಅನುಮಾನ ಬಂದರೂ ಇಡೀ ದೇಹವನ್ನೇ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳಬಹುದು, ಆದ್ರೆ ಕಸ್ಟಮ್ಸ್ ಅಧಿಕಾರಿಗಳಿಂದ ಆಗಲ್ಲ ಎಂಬ ಮಾತಿದೆ. ವಿದೇಶದಿಂದ ಅಕ್ರಮವಾಗಿ ತಂದಂತಹ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ.
ಮಹಿಳೆಯೊಬ್ಬರು ಬ್ಯಾಗ್ ಪರಿಶೀಲನೆ ವೇಳೆ ಏರ್‌ಪೋರ್ಟ್ ಸಿಬ್ಬಂದಿ ನಿಮ್ಮ ಬಳಿ ಸೆಕ್ಸ್ ಟಾಯ್ ಇದೆಯಾ ಎಂದು ಪ್ರಶ್ನೆ ಮಾಡಿದ ಘಟನೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಮಾನನಿಲ್ದಾಣದಲ್ಲಿ ಸಿಬ್ಬಂದಿಯ ಮಾತುಗಳಿಂದ ಮುಜುಗರಕ್ಕೊಳಗಾದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಸದ್ಯ ಮಹಿಳೆಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲುಸಿಯಾ (@luciadreri) ಎಂಬವರ ಖಾತೆಯಲ್ಲಿ ಈ ಬಗ್ಗೆ ಬರೆಯಲಾಗಿದೆ.
undefined
44 ಅಮರನಾಥ ಯಾತ್ರಿಗಳಿದ್ದ ಬಸ್ ಬ್ರೇಕ್ ಫೇಲ್... ದೇವರಂತೆ ಬಂದು ಕಾಪಾಡಿದ ಯೋಧರು
ಜೀವನದಲ್ಲಿ ಮರೆಯಲಾರದ ಘಟನೆ
ನಾನು ವಿಮಾನನಿಲ್ದಾಣ ಪ್ರವೇಶ ಮಾಡುತ್ತಿದ್ದಂತೆ ಭದ್ರತಾ ಪರಿಶೀಲನೆಯ ಸಾಲಿನಲ್ಲಿ ನಿಂತುಕೊಂಡೆ. ಬ್ಯಾಗ್ ಪರಿಶೀಲನೆ ವೇಳೆ ಭದ್ರತಾ ಸಿಬ್ಬಂದಿ ನನ್ನ ಮೊಬೈಲ್ ಪವರ್ ಬ್ಯಾಂಕ್‌ನ್ನು ಚಾಕು ಎಂದು ತಿಳಿದುಕೊಂಡಿದ್ದರು. ಆನಂತರ ಅದನ್ನು ಸೆಕ್ಸ್ ಟಾಯ್ ಎಂದು ಭಾವಿಸಿದರು. ಇದೀಗ ಮಹಿಳೆ ತಮ್ಮ ಬಳಿಯಲ್ಲಿರುವ ಪವರ್ ಬ್ಯಾಂಕ್ ಫೋಟೋ ಹಂಚಿಕೊಂಡು ನಡೆದ ಘಟನೆಯನ್ನು ವಿವರಿಸಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯಲಾರದ ಘಟನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಭಯದ ಜೊತೆ ಶಾಕ್ ಆಯ್ತು
ಭದ್ರತಾ ಸಿಬ್ಬಂದಿ ಮುಜುಗರದಿಂದಲೇ ನಿಮ್ಮ ಬಳಿ ಚಾಕು ಇದೆಯಾ ಅಂತ ಹೇಳಿದರು. ಅದಕ್ಕೆ ನಾನು ಇಲ್ಲ ಎಂದು ಹೇಳಿದೆ. ನಂತರ ಬ್ಯಾಗ್‌ನಲ್ಲಿ ಯಾವುದಾದರೂ ಸೆಕ್ಸ್ ಟಾಯ್ ಎಂದು ಕೇಳಿದರು. ಈ ಪ್ರಶ್ನೆ ಕೇಳುತ್ತಿದ್ದಂತೆ ನನಗೆ ಭಯದ ಜೊತೆಯಲ್ಲಿ ಶಾಕ್ ಆಯ್ತು. ಆನಂತರ ಬ್ಯಾಗ್ ಓಪನ್ ಮಾಡಿದಾಗ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿಗೆ ಅದು ಬ್ಲಿಜ್‌ಕಾನ್ ಪವರ್ ಬ್ಯಾಂಕ್ (Blizzcon exclusive Diablo III Soulstone Power Bank) ಅನ್ನೋದು ಗೊತ್ತಾಯ್ತು ಎಂದು ಮಹಿಳೆ ಹೇಳಿದ್ದಾರೆ. ಸದ್ಯ ಮಹಿಳೆಯ ಪೋಸ್ಟ್‌ಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.
ತಡರಾತ್ರಿ ಆಕೆಯ ಕೋಣೆಗೆ ನುಗ್ಗಿದ 15ರ ಪೋರ; ರೊಮ್ಯಾನ್ಸ್ ಬಳಿಕ ಜೀವವೇ ಹೋಯ್ತು!
I got stopped at security at the airport and they asked me if I had a knife, which of course I didn’t. Then they awkwardly asked if I had a “self pleasuring device” in my backpack and I was HORRIFIED
….Turns out it was my Blizzcon exclusive Diablo III Soulstone Power Bank 😔 pic.twitter.com/GThkfCCkxu
this was a super common stop that year! i think eventually a sign got put up in some security lines.
— Mickey (@GameWithTurik)