ಅಫ್ಘಾನಿಸ್ತಾನದಲ್ಲಿ ಇಬ್ಬರು ಅಪರಾಧಿಗಳಿಗೆ ಸಾರ್ವಜನಿಕರೆದುರೇ ಮರಣದಂಡನೆ ನೀಡಿದ ತಾಲಿಬಾನ್

By Kannadaprabha News  |  First Published Feb 23, 2024, 9:55 AM IST

ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಬ್ಬರನ್ನು ಸಾರ್ವಜನಿಕವಾಗಿಯೇ ಗುಂಡಿಟ್ಟು ಹತ್ಯೆ ಮಾಡಿ ಮರಣದಂಡನೆ ಶಿಕ್ಷೆ ಜಾರಿ ಮಾಡಿದ ಭೀಕರ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಹೀಗಾಗಿ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.


ಘಜ್ನಿ: ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಬ್ಬರನ್ನು ಸಾರ್ವಜನಿಕವಾಗಿಯೇ ಗುಂಡಿಟ್ಟು ಹತ್ಯೆ ಮಾಡಿ ಮರಣದಂಡನೆ ಶಿಕ್ಷೆ ಜಾರಿ ಮಾಡಿದ ಭೀಕರ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಹೀಗಾಗಿ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

ಶಿಕ್ಷೆಗೆ ಗುರಿಯಾದ ಇಬ್ಬರು, ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳು ಎಂದು ತಾಲಿಬಾನ್ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಇದಾದ ಬಳಿಕ ತಾಲಿಬಾನ್‌ನ ಅತ್ಯುನ್ನತ ನಾಯಕನಾದ ಹಿಬಾತ್‌ ಉಲ್ಲಾ ಅಖುಂಡ್‌ಜಾದಾ ಇಬ್ಬರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದ. ಹೀಗಾಗಿ ಗುರುವಾರ ಇವರಿಬ್ಬರಿಗೂ ಅಲಿ ಲಲಾ ಪ್ರದೇಶದಲ್ಲಿರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮರಣದಂಡನೆ ವಿಧಿಸಲಾಯಿತು.

Tap to resize

Latest Videos

ಪಾಕಿಸ್ತಾನವನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು: ತಾಲಿಬಾನ್‌ ಪ್ರತಿಜ್ಞೆ!

ಈ ವೇಳೆ ಅಪರಾಧಿಗಳ ಕುಟುಂಬದವರು ಮರಣದಂಡನೆಯಿಂದ ವಿನಾಯ್ತಿ ನೀಡುವಂತೆ ಮನವಿ ಮಾಡಿದರೂ ಸಹ ಇದನ್ನು ತಿರಸ್ಕರಿಸಿ ಇಬ್ಬರಿಗೂ ಗುಂಡು ಹಾರಿಸಲಾಗಿದೆ. 2021ರಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡಾಗಿನಿಂದ ಇದು 4ನೇ ಸಾರ್ವಜನಿಕ ಮರಣದಂಡನೆಯ ಪ್ರಕರಣವಾಗಿದೆ. 1990ಕ್ಕೂ ಮೊದಲು ತಾಲಿಬಾನ್‌ ಅಧಿಕಾರದಲ್ಲಿದ್ದಾಗ, ಕಲ್ಲು ಹೊಡೆದು ಕೊಲೆ ಮಾಡುವ ಮೂಲಕ ಮರಣದಂಡನೆ ವಿಧಿಸಲಾಗುತ್ತಿತ್ತು.

ಪಾಕ್ ಹೊರದಬ್ಬುತ್ತಿರೋ ಅಫ್ಘಾನ್​ ನಿರಾಶ್ರಿತರಿಗಾಗಿ ನಟಿ ಕಣ್ಣೀರು: ಗಾಜಾ ಭಕ್ತರು ಮೌನವೇಕೆ ಅಂತಿದ್ದಾರೆ ನೆಟ್ಟಿಗರು!

click me!