ಹಮಾದ ಪೂರ್ವದ ಮರುಭೂಮಿಯಲ್ಲಿ ಟ್ರಫಲ್ಸ್ ಸಂಗ್ರಹಿಸುತ್ತಿದ್ದಾಗ 12 ಆಡಳಿತ ಪರ ಹೋರಾಟಗಾರರು ಸೇರಿದಂತೆ ಒಟ್ಟು 31 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರತ್ಯೇಕ ಘಟನೆಯಲ್ಲಿ ಐಸಿಸ್ ಜಿಹಾದಿಗಳು ನಾಲ್ವರು ಕುರುಬರನ್ನು ಕೊಂದ ಮತ್ತು ಇತರ ಇಬ್ಬರನ್ನು ಅಪಹರಿಸಿದ ಘಟನೆ ವರದಿಯಾಗಿದೆ.
ಬೈರುತ್, ಲೆಬನಾನ್ (ಏಪ್ರಿಲ್ 17, 2023): ಸಿರಿಯಾದಲ್ಲಿ ಮತ್ತೆ ಐಸಿಸ್ ಅಟ್ಟಹಾಸ ಬೆಳಕಿಗೆ ಬಂದಿದೆ. ಶಂಕಿತ ಇಸ್ಲಾಮಿಕ್ ಸ್ಟೇಟ್ ಗುಂಪಿನ ಉಗ್ರರು ಭಾನುವಾರ ಸಿರಿಯಾದಲ್ಲಿ ಕನಿಷ್ಠ 31 ಜನರನ್ನು ಕೊಂದಿದ್ದಾರೆ ಎಂದು ಈಗಾಗಲೇ ಭೂಕಂಪ, ಯುದ್ಧದಿಂದ ಬಹುತೇಕ ಧ್ವಂಸಗೊಂಡ ಸಿರಿಯಾ ದೇಶದಲ್ಲಿ ನಡೆದ ಇತ್ತೀಚಿನ ಈ ಹತ್ಯೆ ಬಗ್ಗೆ ಮೂಲಗಳು ಮಾಹಿತಿ ನೀಡಿದೆ. ಐಸ್‌ಕ್ರೀಂ ಸೇರಿ ಆಹಾರಕ್ಕೆ ಬಳಸುವ ಟ್ರಫಲ್ಸ್‌ಗಾಗಿ ಹುಡುಕಾಡುತ್ತಿದ್ದ ಜನರನ್ನು ಶಂಕಿತ ಇಸ್ಲಾಮಿಕ್ ಸ್ಟೇಟ್ ಗುಂಪಿನ ಹೋರಾಟಗಾರರು ಹತ್ಯೆ ಮಾಡಿದ್ದಾರೆ.
ಅಲ್ಲದೆ, ಪ್ರತ್ಯೇಕ ಘಟನೆಯಲ್ಲಿ ಐಸಿಸ್ ಜಿಹಾದಿಗಳು ನಾಲ್ವರು ಕುರಿಗಾಹಿಗಳನ್ನು ಕೊಂದ ಮತ್ತು ಇತರ ಇಬ್ಬರನ್ನು ಅಪಹರಿಸಿದ ಘಟನೆಯನ್ನು ಬ್ರಿಟಿಷ್ ಮೂಲದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯವು ವರದಿ ಮಾಡಿದೆ. ಹಮಾದ ಪೂರ್ವದ ಮರುಭೂಮಿಯಲ್ಲಿ ಟ್ರಫಲ್ಸ್ ಸಂಗ್ರಹಿಸುತ್ತಿದ್ದಾಗ 12 ಆಡಳಿತ ಪರ ಹೋರಾಟಗಾರರು ಸೇರಿದಂತೆ ಒಟ್ಟು 31 ಜನರು ಮೃತಪಟ್ಟಿದ್ದಾರೆ ಎಂದು ವೀಕ್ಷಣಾಲಯವು ಮಾಹಿತಿ ನೀಡಿದೆ. ಇದಕ್ಕೂ ಮೊದಲು ಕನಿಷ್ಠ 26 ಜನರು ಮೃತಪಟ್ಟಿದ್ದಾರೆಂದು ಹೇಳಲಾಗಿತ್ತು. ಆದರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನು ಓದಿ: ಮಂಗಳೂರು, ಕೊಯಮತ್ತೂರು ಬಾಂಬ್ ಸ್ಫೋಟ ಕೇಸ್: ಐಸಿಸ್ ಕೈವಾಡದ ಬಗ್ಗೆ ತನಿಖೆ
12 ವರ್ಷಗಳ ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಸಿರಿಯಾದ ಮರುಭೂಮಿಯಲ್ಲಿ ಸಿಗುವ ಟ್ರಫಲ್ಸ್‌ಗೆ ಹೆಚ್ಚಿನ ಬೆಲೆ ಇದೆ. ಈ ಹಿನ್ನೆಲೆ ಇಂತಹ ಅಭ್ಯಾಸಗಳು ಅಪಾಯಕಾರಿ ಎಂದು ಅಧಿಕಾರಿಗಳು ಆಗಾಗ್ಗೆ ಎಚ್ಚರಿಕೆ ನೀಡುತ್ತಾರೆ. ಆದರೂ, ಪ್ರತಿ ವರ್ಷ ಫೆಬ್ರವರಿ ಮತ್ತು ಏಪ್ರಿಲ್ ನಡುವೆ, ನೂರಾರು ಬಡ ಸಿರಿಯನ್ನರು ವಿಶಾಲವಾದ ಸಿರಿಯಾದ ಮರುಭೂಮಿಯಲ್ಲಿ ಅಥವಾ ಬಾಡಿಯಾದಲ್ಲಿ ಟ್ರಫಲ್ಸ್‌ಗಳನ್ನು ಹುಡುಕುತ್ತಾರೆ . ಇದೇ ಬಾಡಿಯಾ ಪ್ರದೇಶ ನೆಲಬಾಂಬ್‌ಗಳಿಂದ ಕೂಡಿರುವ ಜಿಹಾದಿಗಳಿಗೆ ಅಡಗುತಾಣವಾಗಿದೆ ಎಂದು ತಿಳಿದುಬಂದಿದೆ.
ಫೆಬ್ರವರಿಯಿಂದ, 230 ಕ್ಕೂ ಹೆಚ್ಚು ಜನರು - ಅವರಲ್ಲಿ ಹೆಚ್ಚಿನವರು ನಾಗರಿಕರು - ಟ್ರಫಲ್ಸ್ ತೆಗೆದುಕೊಳ್ಳಲು ಬರುವವರನ್ನು ಗುರಿಯಾಗಿಸಿಕೊಂಡು ಐಎಸ್ ದಾಳಿಯಲ್ಲಿ ಅಥವಾ ಉಗ್ರಗಾಮಿಗಳು ಇಟ್ಟಿರುವ ನೆಲಬಾಂಬ್‌ಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ. ಕಳೆದ ತಿಂಗಳು ಸಹ ಟ್ರಫಲ್ಸ್‌ಗಾಗಿ ಹುಡುಕುತ್ತಿದ್ದ 15 ಮಂದಿಯ ಕತ್ತು ಸೀಳಿ ಐಸಿಸ್ ಅಟ್ಟಹಾಸ ಎರೆದಿತ್ತು. ಫೆಬ್ರವರಿಯಲ್ಲಿ ಸಹ ಟ್ರಫಲ್ಸ್ ಹುಡುಕಾಟ ನಡೆಸುವವರ ಮೇಲೆ ಮೋಟರ್‌ಸೈಕಲ್‌ಗಳಲ್ಲಿ ಬರುವ ಐಎಸ್ ಹೋರಾಟಗಾರರು ಗುಂಡು ಹಾರಿಸಿ ಕನಿಷ್ಠ 68 ಜನರನ್ನು ಕೊಂದರು ಎಂದು ಯುದ್ಧದ ಮಾನಿಟರ್ ಹೇಳಿತ್ತು.
ಇದನ್ನೂ ಓದಿ: ಗುಜರಾತ್ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?
ಸಿರಿಯಾ ಮರುಭೂಮಿಯು ವಿಶ್ವದಲ್ಲೇ ಕೆಲವು ಉತ್ತಮ ಗುಣಮಟ್ಟದ ಟ್ರಫಲ್‌ಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಬೆಲೆಬಾಳುವ ಶಿಲೀಂಧ್ರವು ಗಾತ್ರ ಮತ್ತು ದರ್ಜೆಯ ಆಧಾರದ ಮೇಲೆ ಪ್ರತಿ ಕಿಲೋಗೆ $25 (2.2 ಪೌಂಡ್‌ಗಳು) ವರೆಗೆ ಮಾರಾಟ ಮಾಡಬಹುದು.
ಇನ್ನೊಂದೆಡೆ, ಭಾನುವಾರದಂದು ಸ್ವಯಂಚಾಲಿತ ರೈಫಲ್‌ಗಳನ್ನು ಹೊತ್ತೊಯ್ಯುತ್ತಿದ್ದ ಐಎಸ್ ಜಿಹಾದಿಗಳು ಮತ್ತು ಮೋಟರ್‌ಬೈಕ್‌ಗಳಲ್ಲಿ ಸವಾರಿ ಮಾಡುತ್ತಿದ್ದವರು ಡೀರ್ ಎಝೋರ್‌ನ ಪೂರ್ವ ಪ್ರದೇಶದಲ್ಲಿ ಕುರಿಗಾಹಿಗಳ ಗುಂಪಿನ ಮೇಲೆ ದಾಳಿ ಮಾಡಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ. ಉಗ್ರರು ಪಲಾಯನ ಮಾಡುವ ಮೊದಲು ಕುರಿಗಳನ್ನು ಕದ್ದಿದ್ದಾರೆ ಮತ್ತು ಇಬ್ಬರು ಕುರುಬರನ್ನು ಅಪಹರಿಸಿದ್ದಾರೆ ಎಂದು ವಾರ್ ಮಾನಿಟರ್ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್: ರಷ್ಯಾದಲ್ಲಿ ಐಸಿಸ್ ಉಗ್ರ ವಶಕ್ಕೆ