ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಾಂತನು ದೇಶಪಾಂಡೆ, ಮಹಿಳೆಯರ ಧೂಮಪಾನದ ಬಗ್ಗೆ ನೀಡಿದ ಹೇಳಿಕೆ ಟೀಕೆಗೆ ಗುರಿಯಾಗಿದೆ. ಮಹಿಳೆಯರ ಧೂಮಪಾನ ಪುರುಷರಿಗಿಂತ ಹೆಚ್ಚು ಭಯಾನಕ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ಬಾಂಬೆ ಶೇವಿಂಗ್ ರೇಜರ್ ಕಂಪನಿಯ ಸ್ಥಾಪಕ ಶಾಂತನು ದೇಶಪಾಂಡೆ ಹಂಚಿಕೊಂಡಿದ್ದ ವೀಡಿಯೊ ಭಾರೀ ಟೀಕೆಗೆ ಗುರಿಯಾಗಿದೆ. ಆನ್ ಲೈನ್ ನಲ್ಲಿ ಆಕ್ರೋಶ ವ್ಯಕ್ತವಾದಾಗಿದ್ದಕ್ಕೆ ಎಚ್ಚೆತ್ತ ದೇಶಪಾಂಡೆ ಬಳಿಕ ಕ್ಷಮೆ ಯಾಚಿಸಿದ್ದಾರೆ.
ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರ. ಅದು ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ. ಆದರೆ ಹೆಚ್ಚಾಗಿ ಮದ್ಯಪಾನ ಮತ್ತು ಧೂಮಪಾನ ಮಾಡುವ ಮಹಿಳೆಯರನ್ನು ಜನರು ಟೀಕಿಸುತ್ತಾರೆ. ಮಹಿಳೆಯರು ಇಂತಹ ಅಭ್ಯಾಸವನ್ನು ಇಟ್ಟುಕೊಳ್ಳಬಾರದೆಂಬುದು ಈ ಪುರುಷ ಪ್ರಧಾನ ಸಮಾಜದಲ್ಲಿ ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಇದೇ ಅರ್ಥದಲ್ಲಿ ಮಾತನಾಡಿದ ಶಾಂತನು ದೇಶಪಾಂಡೆ ಕೂಡ ಈಗ ವಿವಾದಕ್ಕೆ ಸಿಲುಕಿರುವುದು.
ಫೋಟೋಗ್ರಾಫರ್‌ಗಳಿಗೆ ಹೃದಯದ ಸಿಂಬಲ್ ತೋರಿಸಿ ಇಟಲಿಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ!
ದಿ ರೇಜರ್ ಶಾರ್ಪ್ ಪ್ರಾಜೆಕ್ಟ್‌ನ ಒಂದು ರೀಲ್ ನಲ್ಲಿ ಈ ಬಗ್ಗೆ ಮಾತನಾಡಿದ ದೇಶಪಾಂಡೆ ಪುರುಷರ ಧೂಮಪಾನಕ್ಕಿಂತ ಮಹಿಳೆಯರ ಧೂಮಪಾನವು ಹೆಚ್ಚು ಭಯಾನಕವಾಗಿದೆ. ಮಹಿಳೆಯರು ಧೂಮಪಾನ ಮಾಡುವುದನ್ನು ನೋಡಿ ತನಗೆ ಆಘಾತವಾಗುತ್ತದೆ. ಏಕೆಂದರೆ ಮಹಿಳೆಯರನ್ನು ಹೆಚ್ಚು ಅಮೂಲ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅವರು ಧೂಮಪಾನ ಮಾಡುವುದು ಇಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿ ಸಬಲೀಕರಣಗೊಂಡಿದ್ದಾರೆ ಎಂದು ತೋರಿಸಲು ಮಹಿಳೆಯರು ಹೆಚ್ಚು ಮದ್ಯಪಾನ ಮಾಡಲು ಅಥವಾ ಧೂಮಪಾನ ಮಾಡಲು ಪ್ರಾರಂಭಿಸಿದ್ದಾರೆ. ಮಹಿಳೆಯರು ಧೂಮಪಾನ ಮಾಡಬಾರದು ಎಂದು ಹೇಳಲು, ಪುರುಷರಿಗಿಂತ ಹೆಚ್ಚು ಜರ್ಜರಿತವಾಗಲು ಜೈವಿಕ ಕಾರಣವಿದೆ. ಮಹಿಳೆಯರನ್ನು ಹೆಚ್ಚು ಅಮೂಲ್ಯವೆಂದು ಪರಿಗಣಿಸಲಾಗುತ್ತದೆ ಎಂದು ದೇಶಪಾಂಡೆ ಹೇಳಿದ್ದಾರೆ.
ಪುರುಷರು ಮಾಡುವುದೆಲ್ಲವನ್ನೂ ನಾನೂ ಮಾಡುತ್ತೇನೆ ಎಂದು ಹೇಳುವುದು ಅವರಲ್ಲಿ ಸ್ತ್ರೀತತ್ವ ಕಡಿಮೆ ಇರುವವರನ್ನಾಗಿ ಮಾಡುತ್ತದೆ ಎಂಬಂತೆ ದೇಶಪಾಂಡೆ ಹೇಳಿಕೆ ಇತ್ತು. “ಸ್ತ್ರೀಯರ ಲೈಂಗಿಕ ವಿಮೋಚನೆ ( ಲೈಂಗಿಕ ಸ್ವಾತಂತ್ರ್ಯ - sexual liberation ಅಥವಾ sexual revolution) ಅಂದ್ರೆ ಅವರು ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದಕ್ಕೆ ಸಮಾನ” ಎಂಬ ಹೇಳಿಕೆಯನ್ನೂ ದೇಶಪಾಂಡೆ ನೀಡಿದ್ದರು.
ವಯಸ್ಸಾದಾಗ ಸಹಾಯವಾಗುವ LICಯ ಈ ಪಿಂಚಣಿ ಯೋಜನೆ, ಪ್ರಯೋಜನ ತಿಳಿಯಿರಿ
ಆದರೆ, ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ವಿಡಿಯೊವನ್ನು ನಂತರ ಡಿಲೀಟ್ ಮಾಡಲಾಯ್ತು. ದೇಶಪಾಂಡೆ ನಂತರ ಕ್ಷಮೆಯಾಚಿಸಿದರು. ಆದರೆ, ಅಸ್ಪಷ್ಟ ಕ್ಷಮೆಯಾಚನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ದೇಶಪಾಂಡೆ ಇದಕ್ಕೂ ಮೊದಲು ಕೂಡ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಕಳೆದ ತಿಂಗಳು, ಬೆಂಗಳೂರನ್ನು ಕೋಟಾ ನಗರಕ್ಕೆ ಹೋಲಿಸಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬೆಂಗಳೂರಿನ ಕೆಲಸದ ಸಂಸ್ಕೃತಿ ಹೆಚ್ಚು ಮಾತು ಮತ್ತು ಕಡಿಮೆ ಕೆಲಸ ಎಂದು ಅವರು ಹೇಳಿದ್ದರು. ಇದಲ್ಲದೆ 2022 ರಲ್ಲಿ, ಫ್ರೆಷರ್‌ಗಳಿಗೆ ಐದು ವರ್ಷಗಳ ಕಾಲ ದಿನಕ್ಕೆ 18 ಗಂಟೆ ಕೆಲಸ ಮಾಡುವಂತೆ ಸೂಚಿಸಿದ್ದಕ್ಕಾಗಿ ದೇಶಪಾಂಡೆ ಟೀಕೆಗೆ ಗುರಿಯಾಗಿದ್ದರು.