
ಸ್ತ್ರೀಯನ್ನು ಗೌರವಿಸುವ, ಪೂಜನೀಯ ಭಾವದಲ್ಲಿ ನೋಡುವ ಸಂಸ್ಕೃತಿ ನಮ್ಮದು. ಒಂದು ಹೆಣ್ಣು ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ಸೊಸೆಯಾಗಿ ಏನೇನು ಜವಾಬ್ದಾರಿಗಳನ್ನು ನಿರ್ವಹಿಸಬೇಕೋ ಅದನ್ನೆಲ್ಲ ಚಾಚೂ ತಪ್ಪದೆ ನಿಭಾಯಿಸುತ್ತಾಳೆ. ತನ್ನ ಜವಾಬ್ದಾರಿಯನ್ನು ನಿರ್ವಹಿಸಿ ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾಳೆ ಕೂಡಾ.
ಒಬ್ಬ ಮಹಿಳೆ (Woman) ತನ್ನ ಚಿಂತೆ ಮಾಡುವುದಕ್ಕಿಂತ ಹೆಚ್ಚು ತನ್ನವರ, ತನ್ನ ಮನೆ, ಮಕ್ಕಳ ಒಳಿತಿನ ಬಗ್ಗೆಯೇ ಸದಾಕಾಲ ಚಿಂತಿಸುತ್ತಿರುತ್ತಾಳೆ. ದಿನ ಬೆಳಗಾದರೆ ಎಲ್ಲರಿಗೂ ತಿಂಡಿ ರೆಡಿ ಮಾಡು, ಗಂಡ ಮಕ್ಕಳಿಗೆ ಊಟಕ್ಕೆ ಡಬ್ಬಿ ರೆಡಿ ಮಾಡು, ….ಇಂತಹ ಹತ್ತು ಹಲವು ಕೆಲಸ ಜವಾಬ್ದಾರಿ (Responsibility) ಗಳ ಮಧ್ಯೆ ತನ್ನ ಆರೈಕೆ ತಾನು ಮಾಡಿಕೊಳ್ಳಬೇಕು, ತನ್ನ ಆರೋಗ್ಯ (Health) ದ ಬಗ್ಗೆಯೂ ಕಾಳಜಿವಹಿಸಬೇಕು ಎಂಬ ವಿಚಾರವೇ ಅವಳ ತಲೆಗೆ ಬರುವುದಿಲ್ಲ. ಹಾಗೊಮ್ಮೆ ಅಂತಹ ವಿಚಾರ ಬಂದರು ಕೂಡ ಅದಕ್ಕಾಗಿ ಅವಳು ಸಮಯ ಮೀಸಲಿಡುವುದಿಲ್ಲ. ಮೈ ಸುಡುವ ಜ್ವರ ಇರಲಿ, ತಲೆ ನೋವೇ ಬರಲಿ ಅವಳ ಕೆಲಸ ಅವಳಿಗೇ ಮೀಸಲು..
ಎಲ್ಲ ಕೆಲಸಗಳನ್ನು ಮುಂದಿಟ್ಟುಕೊಂಡು ತನ್ನವರನ್ನೂ ಹುರಿದುಂಬಿಸಿ ಅವರ ಕಷ್ಟಗಳಿಗೆ ಬೆನ್ನುಕೊಡುವ ತಾಯಿ ಮಾತ್ರ ಯಾವಾಗಲೂ ಹಿಂದೆಯೇ ಇರುತ್ತಾಳೆ. ಕೆಲವು ಸತ್ಯದಿಂದ ದೂರ ಓಡುತ್ತಾಳೆ. ಕೆಲವು ಭರವಸೆಗಳನ್ನು ತನಗೆ ತಾನೇ ಕೊಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಈಗ ನವರಾತ್ರಿಯ ಸಮಯ. ನವರಾತ್ರಿಯಲ್ಲಿ ದೇವಿ ಹೇಗೆ ಭಿನ್ನ ರೂಪ ಹೊಂದುತ್ತಾಳೋ ಹಾಗೆ ಹೆಣ್ಣು ಕೂಡ ಅನ್ನಪೂರ್ಣೇಶ್ವರಿ, ಲಕ್ಷ್ಮಿ, ಶಕ್ತಿ ಎಲ್ಲವೂ ಆಗಿದ್ದಾಳೆ. ಈ ನವರಾತ್ರಿಯಂದು ಹೆಣ್ಣು ತನ್ನನ್ನು ತಾನು ಸುರಕ್ಷಿತವಾಗಿಡಲು ಕೆಲವು ಪ್ರಾಮಿಸ್ ಗಳನ್ನು ತನಗೆ ತಾನೇ ಮಾಡಿಕೊಳ್ಳಬೇಕಿದೆ.
ಮೆನೊಪಾಸ್ ಲಕ್ಷಣಗಳಿಂದ ಮುಕ್ತಿ ದೊರೆಯಬೇಕಾ? ಹಾಗಿದ್ರೆ ಈ ಆಹಾರ ಸೇವಿಸಿ
ನಿಮ್ಮ ಆರೋಗ್ಯದ ಕಡೆ ಗಮನವಿರಲಿ : ಮನೆಯಲ್ಲಿ ಯಾರೊಬ್ಬರ ಆರೋಗ್ಯ ಹದಗೆಟ್ಟರೂ ಸಾಕು ತಾಯಿಯಾದವಳು ತುದಿಗಾಲಲ್ಲಿ ನಿಂತು ಅವರ ಸೇವೆಗಳನ್ನು ಮಾಡುತ್ತಾಳೆ. ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ತಾಯಿ ತನ್ನ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಾಳೆ. ಹಾಗಾಗಿ ಈ ನವರಾತ್ರಿಯಂದು ಮಹಿಳೆಯರು ಎಲ್ಲರ ಆರೋಗ್ಯದ ಮೇಲೆ ನಾನು ಹೇಗೆ ಕಾಳಜಿ ವಹಿಸುತ್ತೇನೋ ಹಾಗೆಯೇ ನನ್ನ ಆರೋಗ್ಯದ ಮೇಲೂ ಕಾಳಜಿ ವಹಿಸುತ್ತೇನೆ ಎಂದು ಪಣತೊಡಬೇಕಿದೆ.
ನಿಮ್ಮ ಪೋಷಣೆಯ ಕಡೆಗೂ ಲಕ್ಷ್ಯ ಕೊಡಿ : ಒಂದು ಹೆಣ್ಣು ಎಲ್ಲರಿಗೂ ಊಟ ಬಡಿಸಿ ಅವರಿಗೆ ಬೇಕಾದ ಪೌಷ್ಠಿಕ ಆಹಾರವನ್ನು ನೀಡುತ್ತಾಳೆ. ನಂತರ ತಾನು ಮುಂದಿನ ಕೆಲಸಗಳ ಬಗ್ಗೆ ಚಿಂತೆ ಮಾಡುತ್ತ ಸದಾಕಾಲ ಗಡಿಬಿಡಿಯಲ್ಲೇ ಊಟ, ತಿಂಡಿ ಮಾಡುತ್ತಾಳೆ. ಎಷ್ಟೋ ಸಮಯ ತಂಗಳನ್ನೇ ತಿನ್ನುವುದುಂಟು. ಇದರಿಂದ ಮಹಿಳೆಯರಿಗೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ. ಹಾಗಾಗಿ ಸ್ತ್ರೀಯರು ಕೂಡ ಹಣ್ಣು, ಸೊಪ್ಪು, ತರಕಾರಿಗಳನ್ನು ಯಾವಾಗಲೂ ತಿನ್ನಬೇಕು.
ಹುಟ್ಟುವ ಮಗುವಿನ ಆರೋಗ್ಯ, ಸಂತೋಷಕ್ಕಾಗಿ ಗರ್ಭಿಣಿಯರು ಈ ಮಂತ್ರ ಹೇಳಿ..
ಆರೋಗ್ಯ ತಪಾಸಣೆ (Health Checkup) : ಈಗಿನ ಮುಂದುವರೆದ ತಂತ್ರಜ್ಞಾನದಲ್ಲಿ ಕಣ್ಣುಬಿಡುವಷ್ಟರಲ್ಲಿ ಆರೋಗ್ಯ ತಪಾಸಣೆಗಳಾಗುತ್ತವೆ. ಅಷ್ಟೇ ಏಕೆ ಮನೆಯಿಂದಲೇ ನೀವು ಹೋಮ್ ಸ್ಯಾಂಪಲ್ ಕಲೆಕ್ಷನ್ ಮೂಲಕ ಕೂಡ ಕುಳಿತಲ್ಲಿಯೇ ನಿಮ್ಮ ಆರೋಗ್ಯದ ವರದಿಯನ್ನು ಪಡೆಯಬಹುದು. ಇದರಿಂದ ನಿಮ್ಮ ಶರೀರದಲ್ಲಿ ವಿಟಮಿನ್, ಮಿನರಲ್ ಅಥವಾ ಇನ್ಯಾವುದೋ ಪೌಷ್ಠಿಕಾಂಶಗಳ ಕೊರತೆಯಿದೆ ಎಂಬುದು ತಿಳಿಯುತ್ತದೆ.
ನಿಮ್ಮ ಇಷ್ಟಗಳನ್ನೂ ಪರಿಗಣಿಸಿ : ಮನೆಯಲ್ಲಿ ಯಾರಿಗೆ ಯಾವುದು ಇಷ್ಟ, ಯಾರಿಗೆ ಯಾವ ತಿಂಡಿ ಇಷ್ಟವಾಗುವುದಿಲ್ಲ ಎಂಬ ಪಟ್ಟಿ ತಾಯಿಯಾದವಳಿಗೆ ತಿಳಿದಿರುತ್ತದೆ. ಇಷ್ಟಕ್ಕೆ ಅನುಗುಣವಾಗಿಯೇ ಆಕೆ ಅಡುಗೆಯನ್ನು ಕೂಡ ಮಾಡುತ್ತಾಳೆ. ಈ ನವರಾತ್ರಿಯಂದು ಮಹಿಳೆಯರು ನನಗೆ ಇಷ್ಟವಾದ ತಿಂಡಿಯನ್ನು ನಾನು ವಾರಕ್ಕೆ ಒಮ್ಮೆಯಾದರೂ ಮಾಡಿಕೊಳ್ತೇನೆ ಎನ್ನುವ ಪ್ರಾಮಿಸ್ ಮಾಡಬೇಕಿದೆ.
ಹೆಚ್ಚು ನೀರು ಕುಡಿಯಿರಿ (Drink Sufficient Water): ಮನೆಯ ನಾಲ್ಕು ಗೋಡೆ ಮಧ್ಯೆ ಕೆಲಸ ಮಾಡುವ ಹೆಣ್ಣು ಮಷಿನ್ ನಂತೆಯೇ ಓಡುತ್ತಲೇ ಇರುತ್ತಾಳೆ. ಇದರ ಮಧ್ಯೆ ಆಕೆ ನೀರು ಕುಡಿಯದೆಯೇ ಎಷ್ಟೋ ಗಂಟೆಗಳು ಸರಿದುಬಿಡುತ್ತವೆ. ಇದು ತಪ್ಪು. ಎಷ್ಟೇ ಕೆಲಸವಿದ್ದರೂ ಅದರ ನಡುವೆ ನೀರನ್ನು ಕುಡಿಯುತ್ತಿರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.