ರಾತ್ರಿ ಬ್ರಾ ಹಾಕ್ಬೇಕಾ ಬೇಡ್ವಾ? ಕನ್ಫ್ಯೂಸ್‌‌ನಲ್ಲಿದ್ದಾರೆ ಇಸ್ರೇಲಿ ಮಹಿಳೆಯರು!

By Roopa Hegde  |  First Published Aug 8, 2024, 1:29 PM IST

ಒಂದ್ಕಡೆ ಇರಾನ್ – ಇಸ್ರೇಲಿ ಯುದ್ಧ ಭಯ ಶುರುವಾಗಿದೆ. ಇರಾನ್ ಯಾವುದೇ ಕಾರಣಕ್ಕೂ ಇಸ್ರೇಲನ್ನು ಉಳಿಸೋದಿಲ್ಲ ಎಂದು ಶಪಥ ಮಾಡಿದೆ. ಈ ಮಧ್ಯೆ ಇಸ್ರೇಲಿ ಮಹಿಳೆಯರ ಸಮಸ್ಯೆಯೊಂದು ಎಲ್ಲರ ಗಮನ ಸೆಳೆದಿದೆ. ರಾತ್ರಿ ಬ್ರಾ, ವಿಷ್ಯ ಅಲ್ಲಿನ ಮಹಿಳೆಯರ ದೊಡ್ಡ ತಲೆನೋವಾಗಿದೆ. 
 


ಇಸ್ರೇಲ್ ಹಾಗೂ ಇರಾನ್ ಮಧ್ಯೆ ದ್ವೇಷದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಇದ್ರಿಂದಾಗಿ ಇಸ್ರೇಲಿ ಪ್ರಜೆಗಳಿಗೆ ಸದಾ ಜೀವ ಭಯ ಕಾಡುತ್ತದೆ. ಈಗ ಇಸ್ರೇಲ್ ಪ್ರಜೆಗಳಲ್ಲಿ ಇರಾನ್ ದಾಳಿಯ ಆತಂಕ ಹೆಚ್ಚಾಗಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇಸ್ರೇಲ್ ಜನರು ದಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬ ಬಗ್ಗೆ ಹಗಲಿರುಳು ಪ್ಲಾನ್ ಮಾಡ್ತಿರುತ್ತಾರೆ. ಈ ಮಧ್ಯೆ ಇಸ್ರೇಲಿ ಮಹಿಳೆಯರಿಗೆ ಭಿನ್ನ ಚಿಂತೆಯೊಂದು ಕಾಡಲು ಶುರುವಾಗಿದೆ. ರಾತ್ರಿ ಬ್ರಾ ಧರಿಸ್ಬೇಕೋ ಬೇಡ್ವೋ ಎನ್ನುವ ಚಿಂತೆಯಲ್ಲಿ ಇಸ್ರೇಲಿ ಮಹಿಳೆಯರಿದ್ದಾರೆ. ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ?

ಇಸ್ರೇಲಿ (Israeli) ಮಹಿಳೆಯರ ಸಮಸ್ಯೆ ಏನು? :  ಶತ್ರುಗಳ ಕ್ಷಿಪಣಿ ಅಥವಾ ರಾಕೆಟ್‌ (rocket) ಸೈರನ್ ಕೇಳ್ತಿದ್ದಂತೆ ಜನರು ಬಾಂಬ್ ಸುರಕ್ಷಿತ ಸ್ಥಳಕ್ಕೆ ಓಡ್ಬೇಕು. ಅಲ್ಲಿಗೆ ತಲುಪಲು ಅವರಿಗೆ ಕೆಲವೇ ಕೆಲವು ಸೆಕೆಂಡ್ ಸಿಗುತ್ತದೆ. ಅವರು ವಾಸಿಸುವ ಜಾಗವನ್ನು ಇದು ನಿರ್ಧರಿಸುತ್ತದೆ. ಅವರಿಗೆ ಹೆಚ್ಚುವರಿ ಸಮಯವನ್ನು ನೀಡೋದಿಲ್ಲ. ಕೊಟ್ಟ ಸಮಯದಲ್ಲಿ ಸುರಕ್ಷಿತ ಸ್ಥಳ ಸೇರಿಲ್ಲ ಅಂದ್ರೆ ಸಾವು ನಿಶ್ಚಿತ. ಸಾಮಾನ್ಯವಾಗಿ ಮಹಿಳೆಯರು ರಾತ್ರಿ ಸಡಿಲ ಬಟ್ಟೆಗಳನ್ನು ಧರಿಸ್ತಾರೆ.  ರಾತ್ರಿ ಸೈರನ್ ಆಗ್ತಿದ್ದಂತೆ ಸರಿಯಾದ ಬಟ್ಟೆ ಧರಿಸಿ, ಬ್ರಾ (Bra) ಧರಿಸಿ ಸುರಕ್ಷಿತ ಸ್ಥಳಕ್ಕೆ ಓಡೋದು ಸುಲಭವಲ್ಲ.  

Latest Videos

undefined

ಬೇರೆ ಜನಾಂಗದ ಗಂಡಸ್ರ ಕಣ್ಣು ಬೀಳದಿರಲು ಈ ಬುಡಕಟ್ಟು ಮಹಿಳೆ ಕುತ್ತಿಗೆಗೆ ಬಿತ್ತು ರಿಂಗ್

ಕೆಲವು ಇಸ್ರೇಲಿಗಳು ತಮ್ಮ ಸ್ವಂತ ಅಪಾರ್ಟ್‌ಮೆಂಟ್‌ಗಳಲ್ಲಿ ಸುರಕ್ಷಿತ ರೂಮ್ ಹೊಂದಿದ್ದಾರೆ. ಆದ್ರೆ ಹಳೆ ಅಪಾರ್ಟ್ಮೆಂಟ್, ಹಳೆಯ ಕಟ್ಟಡಗಳಲ್ಲಿ ಈ ವ್ಯವಸ್ಥೆ ಇಲ್ಲ. ಅವರು ಬಾಂಬ್ ನಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳಗಳಿಗೆ ಓಡ್ಬೇಕು. ಮೆಟ್ಟಿಲ ಕೆಳಗೆ ಅವಿತುಕೊಳ್ಳಬೇಕು. ಈ ಸಮಯದಲ್ಲಿ ನೆರೆ ಹೊರೆಯವರು, ಆಪ್ತರು ಅವರಿಗೆ ಮುಖಾಮುಖಿಯಾಗುವ ಸಾಧ್ಯತೆ ಇರುತ್ತದೆ. ಬ್ರಾ ಇಲ್ಲದ ಸಡಿಲ ಬಟ್ಟೆಯನ್ನು ಧರಿಸಿರುವ ಮಹಿಳೆಯರು ಇದ್ರಿಂದ ಮುಜುಗರ ಎದುರಿಸುವ ಸಾಧ್ಯತೆ ಇರುತ್ತದೆ.  ಮರುದಿನ ಮತ್ತೆ ಅವರ ಜೊತೆ ಒಡನಾಟ ನಡೆಸಬೇಕಾದ ಅನಿವಾರ್ಯತೆ ಇದೆ. 

ಇಸ್ರೇಲಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ : ಸಾಮಾಜಿಕ ಮಾಧ್ಯಮದಲ್ಲಿ ರಾತ್ರಿ ಬ್ರಾ ಧರಿಸಬೇಕೆ, ಬೇಡ್ವೇ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಇಸ್ರೇಲಿ ಮಹಿಳೆಯರು ಇದ್ರಲ್ಲಿ ಆಸಕ್ತಿ ತೋರಿದ್ದಾರೆ. ಟೆಲ್ ಅವಿವ್ ಮಹಿಳೆ ಇಸ್ರೇಲಿ ಮಿಲಿಟರಿ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಅವರ ಫೋಟೋವನ್ನು ಹಂಚಿಕೊಂಡು ಒಂದು ಪೋಸ್ಟ್ ಹಾಕಿದ್ದರು. ಅದ್ರಲ್ಲಿ  ಐಡಿಎಫ್ ವಕ್ತಾರರಿಂದ ಈ ಬಗ್ಗೆ ಮಾಹಿತಿ ಸಿಗಲಿಲ್ಲ. ಬ್ರಾ ಅಥವಾ ವಿತ್ ಔಟ್ ಬ್ರಾ?  ಎಂದು ಬರೆದಿದ್ದರು. ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಅನೇಕರು ಬ್ರಾ ವಿರೋಧಿಸಿದ್ದಾರೆ. ನಾನು ಸತ್ತರೆ, ಹುಟ್ಟಿದ ಸ್ಥಿತಿಯಲ್ಲೇ ಎಂದು ಬರೆದಿದ್ದಾರೆ. ಇಸ್ಮಾಯಿಲ್ ಹನಿಯಾ ಹತ್ಯೆಯ ನಂತ್ರ ಬ್ರಾ ಧರಿಸಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ವಿಶೇಸ ಸಮಯಕ್ಕಾಗಿ ಬ್ರಾ ಇಟ್ಕೊಂಡಿದ್ದು, ಅದನ್ನು ಬೇಕಿದ್ದಲ್ಲಿ ಕೊಡ್ತೆನೆ ಅಂತಾ ಇನ್ನೊಬ್ಬರು ಬರೆದಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಸುರಕ್ಷಿತ ಜಾಗವಿದ್ದು, ಎಲ್ಲ ಫೇಸ್ಬುಕ್ ಮಹಿಳಾ ಸ್ನೇಹಿತೆಯರಿಗೆ ನೀಡ್ತೇನೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

ಬಾಂಗ್ಲಾದೇಶ ಹಿಂಸಾಚಾರ: ಒಂದೇ ದಿನದಲ್ಲಿ ಪೊಲೀಸರು ಸೇರಿ 1000 ಜನರ ಹತ್ಯೆ!

ಮತ್ತೆ ದಾಳಿಯ ಸುಳಿವು ನೀಡಿದ ಇರಾನ್ : ಇಸ್ರೇಲಿಗಳ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ದಟ್ಟವಾಗಿದೆ. ಇರಾನ್ ಮತ್ತೆ ದಾಳಿಯ ಎಚ್ಚರಿಕೆ ನೀಡಿದೆ. ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಇರಾನ್ ಮತ್ತೊಮ್ಮೆ ಮಾತನಾಡಿದೆ. ಇರಾನ್ ಸೇನೆಯ ಕಮಾಂಡರ್ ಇನ್ ಚೀಫ್ ಜನರಲ್ ಅಬ್ದುಲ್ ರಹೀಮ್ ಮೌಸಾವಿ, ಇಸ್ರೇಲ್ ಅನ್ನು ವಿನಾಶದಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇಸ್ರೇಲ್ ಅಪರಾಧ ಮಾಡಿದೆ ಮತ್ತು ಶೀಘ್ರದಲ್ಲೇ ಶಿಕ್ಷೆಗೆ ಗುರಿಯಾಗಲಿದೆ ಎಂದಿದ್ದಾರೆ.  

click me!