Women Health: ನಾರಿಗೆ ಹೆಚ್ಚಾಗ್ತಿದೆ ಒತ್ತಡ – ಹತ್ತಿರವಾಗ್ತಿದೆ ಸಾವು

By Suvarna NewsFirst Published May 27, 2022, 5:00 PM IST
Highlights

ಪ್ರತಿಯೊಬ್ಬರ ಬಾಯಲ್ಲೂ ಸ್ಟ್ರೆಸ್ ಪದವನ್ನು ನಾವು ಕೇಳ್ತಿದ್ದೇವೆ. ಸಮಯದ ಜೊತೆ ಓಡ್ತಿರುವ ಜನರಿಗೆ ದಿನ ದಿನಕ್ಕೂ ಒತ್ತಡ ಹೆಚ್ಚಾಗ್ತಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಾಧ್ಯವಾಗ್ತಿಲ್ಲ. ಮಹಿಳೆಯರು ಇದ್ರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಪಾಯಕಾರಿ ರೋಗಕ್ಕೆ ತುತ್ತಾಗ್ತಿರುವ ಅವರ ಜೀವಿತಾವಧಿ ಕಡಿಮೆಯಾಗ್ತಿದೆ. 
 

ಬಿಡುವಿಲ್ಲದ ಜೀವನ (Life) ದಲ್ಲಿ ಬಹುತೇಕ ಎಲ್ಲರೂ ಒತ್ತಡ (Stress) ದಲ್ಲಿ ಬದುಕುತ್ತಿದ್ದಾರೆ. ಮಹಿಳೆ (Woman) ಯರು ಕೂಡ ಹೆಚ್ಚು ಒತ್ತಡದಲ್ಲಿ ಬಳಲ್ತಿದ್ದಾರೆ. ಮಹಿಳೆಯರಲ್ಲಿ ಕಾಣಿಸಿಕೊಳ್ತಿರುವ ಒತ್ತಡ, ಅವರ ಬದುಕಿನ ನಗು, ಸುಖ ಎಲ್ಲವನ್ನೂ ಕಿತ್ತುಕೊಂಡಿದೆ. ಮಹಿಳೆಯರಲ್ಲಿ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಉದ್ಯೋಗಸ್ಥ ಮಹಿಳೆಯರು, ಮನೆ ಹಾಗೂ ಕಚೇರಿ ಎರಡನ್ನೂ ನಿಭಾಯಿಸುವುದು ಕಷ್ಟವಾಗ್ತಿದೆ. ಇದ್ರಿಂದ ಒತ್ತಡ ದುಪ್ಪಟ್ಟಾಗ್ತಿದೆ.  ಇದಲ್ಲದೆ ಮಹಿಳೆಯರಿಗೆ ಕೌಟುಂಬಿಕ ಕಲಹ, ಮಕ್ಕಳ ವಿದ್ಯಾಭ್ಯಾಸ, ಆರ್ಥಿಕ ಸಮಸ್ಯೆ, ದೈಹಿಕ ಕಾಯಿಲೆ, ಜವಾಬ್ದಾರಿ, ಮಕ್ಕಳಾಗದಿರುವುದು, ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದು, ದಾಂಪತ್ಯ ಕಲಹ  ಮುಂತಾದ ಅನೇಕ ಒತ್ತಡಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 13,000 ಕ್ಕೂ ಹೆಚ್ಚು ಕೆಲಸ ಮಾಡುವ ಮಹಿಳೆಯರ ಮೇಲೆ ಸಂಶೋಧನೆ ನಡೆಸಿದ್ದಾರೆ. ಕೆಲಸದ ಒತ್ತಡವು ಹೃದಯಾಘಾತ ಮತ್ತು ಆಂಜಿಯೋಗ್ರಫಿಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಸಾಮಾನ್ಯವಾಗಿ ಉದ್ಯೋಗ ನೀಡಲಾಗುತ್ತದೆ. ಆದ್ರೆ ಅವರ ಮೇಲೆ ನಿರೀಕ್ಷೆ ಹೆಚ್ಚಿರುತ್ತದೆಯೇ ವಿನಃ ಅವರ ಆರೋಗ್ಯದ ಬಗ್ಗೆ ಕಾಳಜಿ ಮಾಡಲಾಗುವುದಿಲ್ಲ. ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸಬೇಕೆಂಬ ಒತ್ತಡದಲ್ಲಿ ಮಹಿಳೆಯರು ಆರೋಗ್ಯ ಮರೆಯುತ್ತಾರೆ. ಮನೆಗೆ ಬಂದ್ಮೇಲೂ ಕೆಲಸ ಮಾಡುವ ಒತ್ತಡ ಅವರ ಮೇಲಿರುತ್ತದೆ. ಮನೆ ಕೆಲಸ ಮತ್ತಷ್ಟು ದಣಿವು ನೀಡುತ್ತದೆ. ಆಗ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ರಕ್ತದೊತ್ತಡವೂ ಹೆಚ್ಚಾಗುತ್ತದೆ. ಯುಎಸ್‌ನ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಫೊಡೆಸಿಪ್‌ನ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಮನೆಕೆಲಸಗಳಾದ ಅಡುಗೆ ಮಾಡುವುದು, ಸ್ವಚ್ಛಗೊಳಿಸುವುದು, ಒರೆಸುವುದು ಮತ್ತು ಪಡಿತರ ವಸ್ತುಗಳನ್ನು ಖರೀದಿಸುವುದು ಅವರ ಹೃದಯಕ್ಕೆ ಹೆಚ್ಚು ಅಪಾಯಕಾರಿಯಂತೆ. 

ಹೆರಿಗೆ ನಂತ್ರ Postpartum Yoga ಮಾಡಿದರೆ ಹೊಟ್ಟೆ ಬೊಜ್ಜು ಕಡಿಮೆ ಆಗುತ್ತೆ

100 ಉದ್ಯೋಗಿ ಮತ್ತು ಮನೆಕೆಲಸದ ಮಹಿಳೆಯರ ಮೇಲೆ ನಡೆಸಿದ ಅಧ್ಯಯನದಲ್ಲಿ, ವಿಜ್ಞಾನಿಗಳು ಸಾರ್ವಕಾಲಿಕ ಮನೆಕೆಲಸಗಳಲ್ಲಿ ತೊಡಗಿರುವ ಮಹಿಳೆಯರು ಯಾವಾಗಲೂ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದ್ದಾರೆ. ಸಂಶೋಧಕರ ಪ್ರಕಾರ, ಕೆಲಸದ ಹೊರೆಗಿಂತ ಹೆಚ್ಚು, ಕೆಲಸ ಮಾಡುವ ಬಗ್ಗೆ ಯೋಚಿಸುವುದು ಒತ್ತಡವನ್ನು ಉಂಟುಮಾಡುತ್ತದೆ. ಮತ್ತೊಂದು ಇತ್ತೀಚಿನ ಸಂಶೋಧನೆಯ ಪ್ರಕಾರ, ಕೆಲಸ ಮಾಡುವ ಮಹಿಳೆಯರ ಒತ್ತಡವು ಮಾರಕವಾಗುವ ಸಾಧ್ಯತೆಯಿದೆ. ಸಾಮಾನ್ಯ ವಯೋಮಾನದ 17415 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಕೆಲಸದ ಭದ್ರತೆಯ ಬಗ್ಗೆ ಚಿಂತಿಸುತ್ತಿದ್ದರೆ, ಅವರು ಅಧಿಕ ತೂಕ ಹೊಂದಿರುತ್ತಾರೆ, ಅವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.  

ಒತ್ತಡದಿಂದಾಗಿ ಮಹಿಳೆಯರಿಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಅಜೀರ್ಣ ಮತ್ತು ನಿದ್ರಾಹೀನತೆಯಂತಹ ಕಾಯಿಲೆಗಳು ಬರುತ್ತವೆ. ಕೆಮ್ಮು ಮತ್ತು ಜ್ವರದಿಂದ ವಸಡು ಕೊಳೆಯುವಂತಹ ಕಾಯಿಲೆಗಳು ಸಹ ಬರಬಹುದು. ಒತ್ತಡವು ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಹೃದಯ ಬಡಿತದ ದರವು ಹೆಚ್ಚಾಗುತ್ತದೆ. ಉಸಿರಾಟದ ವೇಗದ ಜೊತೆಗೆ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಹೆಚ್ಚಾಗುತ್ತದೆ. ಎಚ್‌ಐವಿಯಂತಹ ವೈರಸ್‌ಗಳ ವಿರುದ್ಧ ಹೋರಾಡುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಕೂಡ ಉಂಟುಮಾಡುತ್ತದೆ. ಹೆಚ್ಚು ಒತ್ತಡದಲ್ಲಿರುವ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಅವರ ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ ಮತ್ತು ಕೆಲವರು ಅದನ್ನು ಸಹ ಮಾಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ. 

ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಗೆ ಗಮನ ಕೊಡಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ !

ಒತ್ತಡ ನಿವಾರಣೆ ಹೀಗಿರಲಿ : ಒತ್ತಡ ಕಡಿಮೆ ಮಾಡಲು ಮಹಿಳೆಯರು ಸಾಕಷ್ಟು ನಿದ್ದೆ ಮಾಡುವ ಅಗತ್ಯವಿದೆ. ಬೆಳಿಗ್ಗೆ ವಾಕಿಂಗ್ ಮಾಡಬೇಕು. ಮಧುರವಾದ ಸಂಗೀತವನ್ನು ಆಲಿಸಬೇಕು. ಯಾವುದೇ ಸಮಸ್ಯೆಯಿರಲಿ ಇಲ್ಲ ಚಿಂತೆಯಿರಲಿ ನಿಮ್ಮ ಪ್ರೀತಿ ಪಾತ್ರರ ಮುಂದೆ ಹೇಳಿಕೊಂಡಲ್ಲಿ ಮನಸ್ಸು ಹಗುರವಾಗುತ್ತದೆ. ಹೆಚ್ಚು ಆಮ್ಲಜನಕ ಒಳಹೋಗಬೇಕು. ಹಾಗಾಗಿ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಬೇಕು. ನಿಮಗೆ ಖುಷಿ ಕೊಡುವ ಕೆಲಸ ಮಾಡು. ಒಳ್ಳೆಯ ಘಟನೆ ನೆನಪಿಸಿಕೊಳ್ಳಿ. ಕಹಿ ಘಟನೆಯನ್ನು ಮರೆಯಿರಿ. ಹಾಗೆಯೇ  ಸಣ್ಣ ವಿಷಯಗಳನ್ನು ನಿರ್ಲಕ್ಷಿಸಲು ಕಲಿಯಿರಿ. ಕೆಲಸ ಮಾಡಬೇಕೇ ಹೊರತು, ಕೆಲಸ ನೆನೆದು ವಿನಃ ಟೆನ್ಷನ್ ಮಾಡಿಕೊಳ್ಳಬಾರದು. ಗಾರ್ಡನಿಂಗ್ ಮಾಡಿದ್ರೆ ಮನಸ್ಸು ಖುಷಿಯಾಗುತ್ತದೆ. ಹಾಗೆಯೇ ಯೋಗ ನೆಮ್ಮದಿ ನೀಡುತ್ತದೆ.
 

click me!