Women Welfare : ಸ್ವಾವಲಂಬಿಯಾಗಲು ಮಹಿಳೆಯರಿಗೆ ಸರಕಾರದ ನೆರವು

By Suvarna News  |  First Published Dec 20, 2022, 4:11 PM IST

ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿ ಬದುಕು ನಡೆಸುವ ಅವಶ್ಯಕತೆ ಇದೆ. ಇದಕ್ಕೆ ಸರ್ಕಾರದಿಂದ ನೆರವು ಕೂಡ ಸಿಗ್ತಿದೆ. ಸರ್ಕಾರ ಅನೇಕ ಯೋಜನೆಗಳನ್ನು ಶುರು ಮಾಡಿದೆ. ಆದ್ರೆ ಈ ಯೋಜನೆ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. 
 


ಭಾರತ ಸರ್ಕಾರ ಜನರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲವರು ರೈತರಿಗೆ ಅನುಕೂಲ ಮಾಡಿದ್ರೆ ಮತ್ತೆ ಕೆಲವು ಯೋಜನೆಗಳು ಯುವಕರಿಗೆ ನೆರವಾಗುತ್ತವೆ. ಅದೇ ರೀತಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಅವರನ್ನು ಸ್ವಾವಲಂಬಿ ಮಾಡಲು ಸರ್ಕಾರ ಕೆಲ ಯೋಜನೆಗಳನ್ನು ಶುರು ಮಾಡಿದೆ. ಆದ್ರೆ ಬಹುತೇಕ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವಿಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ, ಮಹಿಳೆಯರು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಕೆಲ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

ಮಾತೃತ್ವ ವಂದನಾ ಯೋಜನೆ : ಭಾರತ (India) ಸರ್ಕಾರ ನಡೆಸುತ್ತಿರುವ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ  ಮೊದಲ ಬಾರಿಗೆ ಗರ್ಭಧರಿಸುವ ಮಹಿಳೆಯರಿಗೆ ಆರ್ಥಿಕ (Financial) ನೆರವು ನೀಡಲಾಗುತ್ತದೆ. 2017 ರಿಂದ ಚಾಲನೆಯಲ್ಲಿರುವ ಈ ಯೋಜನೆಯನ್ನು ಪ್ರೆಗ್ನೆನ್ಸಿ ಅಸಿಸ್ಟೆನ್ಸ್ (Pregnancy Assistance ) ಸ್ಕೀಮ್ ಎಂದೂ ಕರೆಯಲಾಗುತ್ತದೆ. ಈ ಯೋಜನೆಯಡಿ 6000 ರೂಪಾಯಿವರೆಗೆ ಸಹಾಯ ಸಿಗುತ್ತದೆ. 

Tap to resize

Latest Videos

ರಾಷ್ಟ್ರೀಯ ಪಿಂಚಣಿ (National Pension) ಯೋಜನೆ : ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಪಿಂಚಣಿ ಯೋಜನೆ ಶುರು ಮಾಡಲಾಗಿದೆ. ಸ್ವಾವಲಂಬಿಯಾಗಲು ಬಯಸುವ  ಮಹಿಳೆಯರು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಖಾತೆಯನ್ನು ತೆರೆಯುವ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರತಿ ತಿಂಗಳು ನೀವು ಖಾತೆಗೆ ಸ್ವಲ್ಪ ಮೊತ್ತವನ್ನು ಹಾಕಬೇಕಾಗುತ್ತದೆ. 60 ವರ್ಷಗಳ ನಂತರ ನಿಮಗೆ ಪಿಂಚಣಿ ರೂಪದಲ್ಲಿ ಇದು ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಹಣ ಹೂಡಿದ್ರೆ ವೃದ್ಧಾಪ್ಯದಲ್ಲಿ ಬೇರೆಯವರ ಅವಲಂಬಿಸುವ ಅಗತ್ಯವಿರುವುದಿಲ್ಲ. 

ಇಂದಿರಾ ಗಾಂಧಿ (Indira Gandhi) ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ : ಹಿರಿಯ ವಿಧವೆಯರು ಮತ್ತು ಅಂಗವಿಕಲ ನಾಗರಿಕರು ಈ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಲಾಭ ಪಡೆಯಲು  ನೀವು ಬಿಪಿಎಲ್ (BPL) ಕಾರ್ಡ್ ಹೊಂದಿರಬೇಕು. ಈ ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು 500 ರಿಂದ 800 ರೂಪಾಯಿಗಳನ್ನು ಪಡೆಯಬಹುದು.

ಉಚಿತ ಹೊಲಿಗೆ ಯಂತ್ರ ಯೋಜನೆ : ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಚಾಲನೆ ನೀಡಲಾಗಿದೆ. ಆರ್ಥಿಕವಾಗಿ ದುರ್ಬಲರು ಮತ್ತು ವಿಧವೆಯರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. 

YOUTUBE COURSES ಇದು ಯುಟ್ಯೂಬ್‌ನ ಹೊಸ ಹಣ ಗಳಿಕೆಯ ದಾರಿ, ಏನು ಲಾಭ?

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ : ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಸಹಾಯ ಮಾಡಲು ಸರ್ಕಾರ ಈ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ  ಸರ್ಕಾರ ಕೌಟುಂಬಿಕ ದೌರ್ಜನ್ಯದಿಂದ ಬಳಲುತ್ತಿರುವ ಮಹಿಳೆಯರಿಗೆ ಕಾನೂನು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ.  

ಪ್ರಧಾನ ಮಂತ್ರಿ ಉಜ್ವಲ ಯೋಜನೆ : ಮಹಿಳೆಯರಿಗೆ ಅಡಿಗೆ ಸೌಲಭ್ಯಗಳನ್ನು ಒದಗಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು  ಮೇ 1, 2016 ರಂದು ಪ್ರಾರಂಭಿಸಲಾಯಿತು. ಈ ಮೂಲಕ ಬಡ ಹಾಗೂ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ. ಭಾರತದ ಕೋಟ್ಯಂತರ ಕುಟುಂಬಗಳು ಇದರ ಲಾಭ ಪಡೆದಿವೆ.

ವರ್ಷಾಂತ್ಯದ ಆಫರ್ ಗಳಿಗೆ ಮರುಳಾಗಿ ಆನ್ ಲೈನ್ ಖರೀದಿ ಮಾಡೋವಾಗ ಈ 5 ಟಿಪ್ಸ್ ಪಾಲಿಸಿ, ವಂಚನೆಯಿಂದ ಪಾರಾಗಿ! 

ಪ್ರಧಾನ ಮಂತ್ರಿ ಸಮರ್ಥ ಯೋಜನೆ : ಈ ಯೋಜನೆಯ ಮೂಲಕ ಮಹಿಳೆಯರಿಗೆ ಉದ್ಯೋಗ, ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಹೊಸ ಮಾಹಿತಿ ಪಡೆಯಬಹುದು. ಸ್ವಂತ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಬದುಕನ್ನು ನಡೆಸಬಹುದು.  
 

click me!