ಗರ್ಭಿಣಿಯಾದ (Pregnant) ಮೊದಲ ಮೂರು ತಿಂಗಳಲ್ಲಿ ಮಾನಸಿಕವಾಗಿ ಸಂಪೂರ್ಣ ಸಿದ್ಧವಾಗುವುದು ಉತ್ತಮ. ತನ್ನ ಮುಂದಿನ ಸ್ಥಿತಿ ಕುರಿತಾಗಿ ತಾಯಿಯಿಂದಲೋ, ಓರಗಿತ್ತಿಯಿಂದಲೋ, ಓದುವುದರಿಂದಲೇ ತಿಳಿದುಕೊಂಡು ಸಿದ್ಧವಾಗಬೇಕು. ತಾಯ್ತನದ (Mother) ಬಗೆಗೆ ತಿಳಿದುಕೊಂಡ ಮೇಲೆ ಬರುವ ಎಲ್ಲಾ ಸಂದರ್ಭಗಳಿಗೆ ಮೊದಲೆ ಮಾನಸಿಕವಾಗಿ ಸಿದ್ಧರಾಗಿ,
- ಗರ್ಭಿಣಿಯಾದಾಗ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಇದು ಗರ್ಭಿಣಿಯರಿಗೆ ಉಂಟಾಗುವ ಸಹಜ ಪ್ರಕ್ರಿಯೆ ಎಂಬುದನ್ನು ಮನದಟ್ಟುಮಾಡಿಕೊಳ್ಳಿ.
- ಬಾಣಂತನದ ಸಂದರ್ಭದಲ್ಲಿ ಬೇರೆ ಬೇರೆಯವರಿಂದ ಬೇರೆ ರೀತಿಯ ಮಾರ್ಗದರ್ಶನಗಳು ನೀಡಲ್ಪಡುತ್ತವೆ. ನೀವೆ ಅದರ ಬಗೆಗೆ ತಿಳಿದುಕೊಂಡಾಗ ಯಾವುದು ಸರಿ ಎಂಬುದನ್ನು ನಿರ್ಧರಿಸಲು ಸುಲಭ.
- ಮಗು ಸುಂದರವಾಗಿಲ್ಲ, ಕಡಿಮೆ ತೂಕ ಇದೆ ಮುಂತಾದ ರೀತಿಯ ಅನಗತ್ಯ ಹೋಲಿಕೆಗಳನ್ನು ತಲೆಯಿಂದ ತೆಗೆದುಹಾಕಿ.
- ಮಗು ಹುಟ್ಟಿನ ನಂತರ ಅದರ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ, ಅವಳ ಸನಿಹ, ಅಪ್ಪುಗೆ ಮಗುವಿಗೆ ಭದ್ರತೆಯನ್ನು ನೀಡುತ್ತದೆ.
- Face Yoga For Beauty: ವಯಸ್ಸಾದರೂ ಯಂಗ್ ಆಗಿ ಕಾಣಬೇಕಾದರೆ ಹೀಗೆ ಮಾಡಿ
- ಎಲ್ಲರಿಗೆ ಆಗುವುದೇ ನನಗೂ ಆಗಿದೆ. ಇದು ಸಹಜ ಎನ್ನುವುದನ್ನು ಮತ್ತೆ ಮತ್ತೆ ಹೇಳಿಕೊಳ್ಳಿ.
- ಗರ್ಭಿಣಿ ಹಾಗೂ ಬಾಣಂತಿಯ ಉತ್ತಮ ಆರೋಗ್ಯಕ್ಕಾಗಿ ಉತ್ತಮ ವೈದ್ಯರನ್ನು ಸಂಪರ್ಕಿಸಲು ಎಂದೂ ಹಿಂದೇಟು ಹಾಕಬೇಡಿ. ಹಣಕ್ಕೆ ಸಂಬಂಧಿಸಿದ ಧಾರಾಳತನ ತಾಯಿಯಲ್ಲಿ ಆರ್ಥಿಕ ಭದ್ರತೆ ನೀಡುತ್ತದೆ. ಅವಶ್ಯಬಿದ್ದರೆ ಆರ್ಥಿಕ ನೆರವನ್ನು ಪಡೆದು ಉತ್ತಮ ಶುಶ್ರೂಷೆಗೆ ಆದ್ಯತೆ ನೀಡಿ.
- ಅವಳಿಗೆ ಹಿಡಿಸುವ, ಇಷ್ಟಪಡುವ ಪ್ರದೇಶದಲ್ಲಿ ಇರಲು ಬಿಡಿ. ಅದು ಗಂಡನ ಮನೆಯೇ ಆಗಿರಬಹುದು, ತಾಯಿಯ ಮನೆಯೇ ಆಗಿರಬಹುದು.
- ಆಕೆಯೊಂದಿಗೆ ಚಿಕಿತ್ಸೆ, ಶುಶ್ರೂಷೆ ಸಂದರ್ಭದಲ್ಲಿ ಪತಿ ಜತೆಗಿದ್ದರೆ ಅವಳಿಗೆ ಮಾನಸಿಕ ಭದ್ರತೆ ದೊರೆಯುತ್ತದೆ.
- ಮಗು ಗಂಡೇ ಇರಲಿ, ಹೆಣ್ಣೆ ಇರಲಿ; ಕುಟುಂಬದವರು ಸ್ವೀಕರಿಸುತ್ತಾರೆಂಬ ವಿಶ್ವಾಸ ಮೂಡಿಸಿ.
Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!
- ಯಾರ ಜತೆಗಿದ್ದರೆ ಖುಷಿಯಿಂದಿರುತ್ತೇನೆ ಎಂದು ಗುರುತಿಸಿಕೊಂಡು ಅವರೊಂದಿಗಿರಲು ಅವಕಾಶ ನೀಡಿ, ಅದಕ್ಕೆ ಸಹಕರಿಸಿ. ಆಕೆಯ ಭಾವ ಭದ್ರತೆ, ಸ್ವಾತಂತ್ಯಕ್ಕೆ ಅವಕಾಶವಿರಲಿ.
- ಕೌಟುಂಬಿಕ ಸಂಬಂಧಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ಉತ್ತಮ ಬಾಂಧವ್ಯ ಇರುವಂತೆ ನೋಡಿಕೊಳ್ಳಿ. ನಿಮ್ಮ ನಿರೀಕ್ಷೆಗಳು ಸ್ಪಂದಿಸುವಂತಿರಲಿ.
- ತನ್ನ ಬಗ್ಗೆ ಕಾಳಜಿ ವಹಿಸುವವರಿಲ್ಲ ಅಂತಂದಾಗ ಆಕೆ ಸಹಜವಾಗಿ ಉನ್ಮಾದ, ಅನಗತ್ಯ ಮಾತು, ಸುಮ್ಮನೆ ಅಳುವುದು, ಆತಂಕ ಪಡುವುದು, ಬೇಜಾರು, ನಿರುತ್ಸಾಹ, ಜುಗುಪ್ಸೆ, ಖಿನ್ನತೆ, ಮೂರ್ಛೆ ತಪ್ಪಿ ಬೀಳುವುದು ಮುಂತಾದ ಮಾನಸಿಕ ಒತ್ತಡಗಳಿಗೆ ಗುರಿಯಾಗುತ್ತಾಳೆ. ಇವುಗಳು ಅವಳನ್ನು ಬಾಧಿಸದಂತೆ ನೋಡಿಕೊಳ್ಳಲು ಮನೆಯವರ ಪ್ರೀತಿ ಅತ್ಯಂತ ಮುಖ್ಯ.
- ಅನಿಶ್ಚಿತತೆ, ಅಭದ್ರತೆ, ಅಸಹಾಯಕತೆ, ಇಚ್ಛಿತ ವಿಕಲತೆಗಳಿಂದ ದೂರವಿರಿ.
- ಅವಳ ನೋವು ನಲಿವುಗಳಿಗೆ ಧನಾತ್ಮಕವಾಗಿ ಸ್ಪಂದನೆ ಸಿಗಬೇಕು.
Beauty Tips: ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಅನಗತ್ಯ ಕೂದಲು ತೆಗೆಯಿರಿ
- ಗರ್ಭಿಣಿ ಅಥವಾ ಬಾಣಂತಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಅನಗತ್ಯ ಯೋಚನೆಗಳಿಂದ ದೂರವಿರಬಹುದು.
- 6 ತಿಂಗಳಿನವರೆಗೂ ಮಗು ತಾಯಿಯ ಮನಸ್ಥಿತಿಯನ್ನು ಗ್ರಹಿಸದಿದ್ದರೂ ಅವಳ ಅಪ್ಪುಗೆ ಮಗುವಿನ ಬೆಳವಣಿಗೆಗೆ ಬೇಕಾದ ಭದ್ರತೆ ಒದಗಿಸುತ್ತದೆ. ಹೀಗಾಗಿ, ಜವಾಬ್ದಾರಿಯಿಂದ ನುಣಿಚಿಕೊಳ್ಳಬೇಡಿ.
- ಕೌಟುಂಬಿಕ ಸಂಬಂಧಗಳು ಬಿಗುವಾಗಿರದೆ ಸಹಕಾರಿ ಮನೋಭಾವದಿಂದ ಕೂಡಿರಲಿ.