ಬ್ರಾ ಧರಿಸಿದ ಸಂದರ್ಭದಲ್ಲಿ ಆಗುವ ಕಿರಿಕಿರಿ ಹಲವರನ್ನು ಚಿಂತೆಗೀಡುಮಾಡುತ್ತದೆ. ಇದರಿಂದ ಮುಕ್ತವಾಗಿಸಲು ಮಾರುಕಟ್ಟೆಗೆ ಬಂದಿದೆ TTT. ಏನಿದು ಟಿಟಿಟಿ?
ಎಷ್ಟೋ ಮಹಿಳೆಯರು ಒಳ ಉಡುಪುಗಳಿಂದ (Innerwears) ಹೇಳಿಕೊಳ್ಳಲಾಗದ ಮುಜುಗರ ಅನುಭವಿಸುವುದು ಮಾಮೂಲು. ಆದರೆ ದುರದೃಷ್ಟಕರ ಸಂಗತಿಯೆಂದರೆ ಇದನ್ನು ಓಪನ್ನಾಗಿ ಚರ್ಚೆ ಮಾಡುವ ವಾತಾವರಣ ನಮ್ಮಲ್ಲಿನ್ನೂ ಬಂದಿಲ್ಲ. ಅದರಲ್ಲಿಯೂ ಬೇಸಿಗೆಯಲ್ಲಿ ಅಥವಾ ತುಂಬಾ ದೂರ ಪ್ರಯಾಣ ಮಾಡುವವರು ತೀವ್ರವಾಗಿ ಹಿಂಸೆ ಅನುಭವಿಸುವುದು ಧರಿಸುವ ಬ್ರಾಗಳಿಂದ. ಎಷ್ಟೇ ಉತ್ತಮ ಗುಣಮಟ್ಟದ ಬ್ರಾ ಧರಿಸಿದರೂ ಬೆವರು ಹೆಚ್ಚಿರುವ ಪ್ರದೇಶಗಳಲ್ಲಿ ಅಥವಾ ತೀವ್ರವಾಗಿ ಬೆವರುವ ಮಹಿಳೆಯರು ಅನುಭವಿಸುವ ಕಿರಿಕಿರಿ ಆ ದೇವರಿಗೇ ಪ್ರೀತಿ. ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ಬ್ರಾ ಸರಿ ಮಾಡಿಕೊಳ್ಳುವ ಅವಕಾಶವೂ ಇರುವುದಿಲ್ಲ. ಏಕೆಂದರೆ ಇನ್ನೊಬ್ಬರು ನೋಡುವಾಗ ಆ ಭಾಗವನ್ನು ಮುಟ್ಟಿಕೊಳ್ಳುವುದು ಕೂಡ ಅಪರಾಧ ಎಂಬಂತೆ ಬಿಂಬಿತವಾಗುತ್ತದೆ. ಬ್ರಾ ಧರಿಸುವುದರಿಂದ ಸ್ತನಗಳ ಕೆಳಗೆ ವಿಪರೀತ ಬೆವರುವ ಸಂದರ್ಭಗಳೇ ಹೆಚ್ಚು. ದಿನಪೂರ್ತಿ ಇದನ್ನು ಧರಿಸಿಯೇ ಇರಬೇಕಾಗಿರುವ ಕಾರಣ, ಅದರ ಹಿಂಸೆ ಅಪಾರ. ಕೆಲವು ಮಹಿಳೆಯರಲ್ಲಿ ಬೆವರುವಿಕೆ ಹೆಚ್ಚಾದರೆ ಸ್ತನಗಳ ಕೆಳಗೆ ಬೆವರಿನಿಂದಾಗಿಯೇ ಹಲವು ಚರ್ಮದ ಸಮಸ್ಯೆಗಳೂ ಬರುವುದು ಉಂಟು.
ಸಮಸ್ಯೆ ಏನೇ ಇದ್ದರೂ, ಅದರಿಂದ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ತೊಂದರೆ, ಕಿರಿಕಿರಿ, ಹಿಂಸೆ ಅನುಭವಿಸುತ್ತಿದ್ದರೂ ಬ್ರಾ ಧರಿಸುವ ಅನಿವಾರ್ಯತೆ ಮಹಿಳೆಯರಿಗೆ ಇದ್ದೇ ಇದೆ. ಇದರಿಂದ ಮುಕ್ತಿ ಪಡೆಯಲಂತೂ ಸಾಧ್ಯವೇ ಇಲ್ಲ. ಹಲವು ತಜ್ಱರು ಇದೇ ಕಾರಣಕ್ಕೆ ಕೊನೆಯ ಪಕ್ಷ ಮನೆಯಲ್ಲಿ ಇರುವಾಗ ಬ್ರಾ (Bra) ಬದಲು ಸಡಿಲವಾದ ಬಟ್ಟೆಯನ್ನು ಧರಿಸಿ ಎಂದು ಹೇಳುವುದು ಉಂಟು. ದಿನಪೂರ್ತಿ ಬ್ರಾ ಧರಿಸುವ ಕಾರಣ ಅದು ಸ್ತನಗಳಿಗೆ ಮಾತ್ರವಲ್ಲದೇ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಎಷ್ಟೋ ಮಹಿಳೆಯರಿಗೆ ಇದು ಹೇಳಿದ್ದಷ್ಟು ಸುಲಭವಲ್ಲ. ಮನೆಯಲ್ಲಿ ಕೂಡ ಬ್ರಾ ಧರಿಸಲೇಬೇಕು. ಏಕೆಂದರೆ ಇದು ನಮ್ಮಲ್ಲಿ ಗುಟ್ಟಾಗಿ ನಡೆಯುವ ವಿಷಯ, ಮುಕ್ತವಾಗಿ ಚರ್ಚಿಸಲು ಆಸ್ಪದ ಇಲ್ಲವೇ ಇಲ್ಲ.
undefined
Women Health: ಗರ್ಭಧರಿಸಿದಾಗ ಸೆಕ್ಸ್ ಯಾಕೆ ದೂರ?
ಆದರೆ ಈಗೀಗ ಹಲವು ಮಹಿಳೆಯರು ಇದರ ವಿರುದ್ಧ ದನಿ ಎತ್ತುತ್ತಿದ್ದಾರೆ. ಭಾರತದಲ್ಲಿ ಅಲ್ಲದಿದ್ದರೂ ಕೊನೆಯ ಪಕ್ಷ ವಿದೇಶಗಳಲ್ಲಿ ಇಂಥ ವಿಷಯಗಳನ್ನು ಮುಕ್ತವಾಗಿ ಸಾರ್ವಜನಿಕವಾಗಿ ಮಾತನಾಡುವುದು ಉಂಟು. ಅಂಥದ್ದೇ ಒಂದು ಮಾತು ಈಗ ಸಕತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ (Social Media) ಇಂದು ಬಹುದೊಡ್ಡ ಫ್ಲ್ಯಾಟ್ಫಾರ್ಮ್ ಆಗಿ ಹೊರಹೊಮ್ಮಿರುವ ಕಾರಣದಿಂದ ಇಂಥ ವಿಷಯಗಳು ಪ್ರತಿಯೊಬ್ಬರ ಮನೆಯನ್ನೂ ತಲುಪುತ್ತಿವೆ. ಮಹಿಳೆಯ ದೇಹ, ಅದರಲ್ಲಿಯೂ ಮುಖ್ಯವಾಗಿ ಸ್ತನಗಳ ರಕ್ಷಣೆ ಕುರಿತು ವಿಡಿಯೋ ಒಂದು ಸಕತ್ ಸದ್ದು ಮಾಡುತ್ತಿದೆ.
ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮಾಮೂಲು ಬ್ರಾ ಧರಿಸುವುದರಿಂದ ತಾನು ಅನುಭವಿಸುತ್ತಿದ್ದ ಬೆವರಿನ ಕಿರಿಕಿರಿಯ ಕುರಿತು ಮಾತನಾಡಿದ್ದಾರೆ. ತಾವು ಡೇಟಿಂಗ್ಗೆ ಹೋಗಲು ಇಷ್ಟಪಟ್ಟರೂ ಬೆವರಿನ ಕಿರಿಕಿರಿಯಿಂದ ಹಿಂಸೆ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ರಿಯಾಲಿಟಿ ಷೋ ಒಂದರಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಆದರೆ ಕೊನೆಗೆ ಈ ಕಿರಿಕಿರಿಯಿಂದ ತಾವು ಹೇಗೆ ಹೊರಕ್ಕೆ ಬಂದಿದ್ದೇವೆ ಎನ್ನುವುದನ್ನು ಹೇಳಿದ್ದಾರೆ. ಇದಕ್ಕೆ ಅವರು ನೀಡಿರುವ ಸೊಲ್ಯೂಷನ್ ಎಂದರೆ ಅದು TTT. ಇದರ ಅರ್ಥ ಟಾ-ಟಾ ಟವಲ್. ಹೌದು. ಕಾಟನ್ನಿಂದ ಮಾಡಿರುವ ಬ್ರಾ ರೀತಿಯಿರುವ ಟವಲ್ ಇದಾಗಿದೆ. ಬ್ರಾ ಧರಿಸುವ ರೀತಿಯಲ್ಲಿಯೇ ಇದನ್ನು ಧರಿಸಬಹುದು. ಆದರೆ ಹೆಚ್ಚುವರಿ ಬೆವರನ್ನುಇದು ಹೀರಿಕೊಳ್ಳುವ ಕಾರಣದಿಂದ ಯಾವುದೇ ಸಮಸ್ಯೆ ತಮಗೆ ಆಗುತ್ತಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಬ್ರಾನಲ್ಲಿ ಸಾಮಾನ್ಯವಾಗಿ ಇರುವಂತೆ ಹುಕ್ಗಳು (Hook) ಕೂಡ ಇದರಲ್ಲಿ ಇರದ ಕಾರಣ ದೇಹಕ್ಕೆ ಟೈಟ್ ಎನಿಸುವ ಪ್ರಶ್ನೆಯೇ ಇಲ್ಲ. ಇದನ್ನು ಧರಿಸಿದರೂ ಧರಿಸಿದಂತೆ ಅನ್ನಿಸುವುದಿಲ್ಲ. ಇದು ಮಹಿಳೆಯರಿಗೆ ಅತಿ ಹೆಚ್ಚು ಕನ್ಫರ್ಟ್ ನೀಡುತ್ತದೆ ಎಂದಿದ್ದಾರೆ.
ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?
ಇದು ಜಾಹೀರಾತಿನಂತೆಯೇ ಕಂಡರೂ, ಇದನ್ನು ನೋಡಿದಾಗ ನಿಜಕ್ಕೂ ವಿಶೇಷ ಅನುಭವ ನೀಡುವಂತಿದೆ ಎಂದು ಹಲವು ಮಹಿಳೆಯರು ಕಮೆಂಟ್ ಮೂಲಕ ತಿಳಿಸಿದ್ದರೆ, ತಾವೂ ಇದನ್ನು ಬಹಳಸುತ್ತಿದ್ದು, ತುಂಬಾ ಕನ್ಫರ್ಟ್ ಇದೆ ಎಂದು ಇನ್ನು ಹಲವರು ಹೇಳಿಕೊಂಡಿದ್ದಾರೆ. ಸಾಮಾನ್ಯ ಬ್ರಾಗಳಂತೆ ಇದರಲ್ಲಿಯೂ ವಿಭಿನ್ನ ಸೈಜ್ಗಳು ಲಭ್ಯವಿದ್ದು, ವಿವಿಧ ಬಣ್ಣಗಳಲ್ಲಿಯೂ ಖರೀದಿಸಬಹುದು. ಆನ್ಲೈನ್ ಮಾರುಕಟ್ಟೆಯಲ್ಲಿಯೂ ಲಭ್ಯವಿವೆ.