ಗರ್ಭಿಣಿಯರಿಗೆ ಥೈರಾಯ್ಡ್‌ : ಭಯ ಬೇಕಾಗಿಲ್ಲ

By Kannadaprabha News  |  First Published May 28, 2020, 9:11 AM IST

ಹೆರಿಗೆ ಸಂದರ್ಭದಲ್ಲಿ ಡಯಾಬಿಟೀಸ್‌ ನಂತರ ಅತಿ ಹೆಚ್ಚು ಕಾಣಿಸಿಕೊಳ್ಳುವುದು ಥೈರಾಯ್ಡ್‌. ಇದು ದೀರ್ಘಾವಧಿವರೆಗೆ ಫರ್ಟಿಲಿಟಿ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಹೈಪರ್‌ಥæೖರಾಯಿಡಿಸಂ (ಓವರಾಕ್ಟೀವ್‌ ಥೈರಾಯ್ಡ್‌) ಮತ್ತು ಹೈಪೋಥೈರಾಯಿಡಿಸಂ (ಅಂಡರಾಕ್ಟೀವ್‌ ಥೈರಾಯ್ಡ್‌) ಕಾಮಾಸಕ್ತಿಯನ್ನು ಕಳೆದುಕೊಳ್ಳುವುದು ಮತ್ತು ಅನಿಯಮಿತ ಪೀರಿಯಡ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಲ್ಲದು.


ಡಾ ವಿದ್ಯಾ ವಿ. ಭಟ್‌

ಲ್ಯಾಪರೋಸ್ಕೋಪಿಕ್‌ ಸರ್ಜನ್‌, ಫರ್ಟಿಲಿಟಿ ಸ್ಪೆಷಲಿಸ್ಟ್‌

Tap to resize

Latest Videos

undefined

ಪರಿಣಾಮ ಗಂಭೀರ

ಈ ಸಮಸ್ಯೆಯಿಂದ ಗರ್ಭಪಾತ, ಅವಧಿಪೂರ್ವ ಜನನ, ಪ್ರಿಕ್ಲಾಂಪ್ಸಿಯಾ(ಲಿವರ್‌ ಮತ್ತು ಕಿಡ್ನಿಯಂತಹ ಅಂಗಾಂಗಳಿಗೆ ಹಾನಿಯನ್ನುಂಟು ಮಾಡುವಂತಹ ಅತ್ಯಧಿಕ ರಕ್ತದೊತ್ತಡ), ಹೃದಯ ವೈಫಲ್ಯ, ಕಡಿಮೆ ತೂಕದ ಶಿಶುವಿಗೆ ಜನ್ಮ ನೀಡುವುದು ಸೇರಿದಂತೆ ಮತ್ತಿತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನವಜಾತ ಶಿಶುವಿನ ಮೆದುಳಿನ ಬೆಳವಣಿಗೆ ಮತ್ತು ಐಕ್ಯೂ ಮಟ್ಟದ ಮೇಲೆ ಪರಿಣಾಮ ಬೀರುವುದು, ಕ್ರೆಟಿನಿಸಮ್‌ ನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!

ಗರ್ಭಿಣಿಯರಲ್ಲಿ ಹೈಪರ್‌ಥೈರಾಯಿಡಿಸಂನ ಲಕ್ಷಣಗಳೆಂದರೆ ಅನಿಯಮಿತ ಹೃದಯ ಬಡಿತ, ಅತಿಯಾದ ಭಯ, ವಾಕರಿಕೆ ಮತ್ತು ವಾಂತಿ, ನಡುಕ, ನಿದ್ರಾಭಂಗ, ತೂಕ ಇಳಿಯುವುದು ಅಥವಾ ಹೆಚ್ಚುವುದು, ಸಾಮಾನ್ಯ ಗರ್ಭಧಾರಣೆಗಿಂತ ನಿರೀಕ್ಷೆ ಮೀರುವುದು. ಹೈಪೋಥೈರಾಯಿಡಿಸಂನ ಲಕ್ಷಣಗಳೆಂದರೆ ಗಮನಹರಿಸುವಲ್ಲಿ ಕಷ್ಟವಾಗುವುದು, ನೆನಪಿನ ಸಮಸ್ಯೆ, ಶೀತ ಮತ್ತು ಉಷ್ಣ ತಾಪಮಾನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು, ಮಲಬದ್ಧತೆ, ಸ್ನಾಯು ಸೆಳೆತ, ಉಗುರು ಶಕ್ತಿಹೀನತೆ, ಅತಿಯಾಗಿ ಕೂದಲು ಉದುರುವುದು ಮತ್ತು ಕ್ಷಿಪ್ರವಾಗಿ ತೂಕ ಹೆಚ್ಚಳವಾಗುವುದು.

ಓವರಾಕ್ಟಿವ್‌ ಥೈರಾಯ್ಡ್‌ನಿಂದ ಶೇ.2ರಿಂದ 3ರಷ್ಟುಮಹಿಳೆಯರು ಫಲವತ್ತತೆ ಸಮಸ್ಯೆಯನ್ನು ಎದುರಿಸುತ್ತಾರೆ. ಸ್ವಯಂ ರೋಗ ನಿರೋಧಕ ಶಕ್ತಿಯಲ್ಲಿ ಸಮಸ್ಯೆ, ಗರ್ಭಪಾತ, ಅವಧಿಗೆ ಮುನ್ನ ಹೆರಿಗೆ, ಹೃದಯ ವೈಫಲ್ಯ ಸೇರಿದಂತೆ ಮತ್ತಿತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದಲ್ಲದೇ, ನವಜಾತ ಶಿಶುವಿನ ತೂಕದಲ್ಲಿ ಕಡಿಮೆ ಇರುವುದು ಮತ್ತು ಆ ಶಿಶುವಿನ ದೇಹದಲ್ಲಿ ಅಧಿಕವಾದ ಥೈರಾಯ್ಡ್‌ ಹಾರ್ಮೋನ್‌ ಗಳು ಇರುವುದು ಇತ್ಯಾದಿ ಸಮಸ್ಯೆ ಆಗುತ್ತೆ.

ಅವಳಿ ಎಂದ ಮಾತ್ರಕ್ಕೆ ಅಪ್ಪ ಒಬ್ಬರೇ ಆಗಿರಬೇಕಿಲ್ಲ; ಅವಳಿ ಲೋಕದಲ್ಲಿ ಅಚ್ಚರಿಗಳಿಗೆ ಬರವಿಲ್ಲ

ಈ ಹೈಪೋಥೈರಾಯ್ಡಿಸಂ ಅನ್ನು ನಿಯಂತ್ರಣಕ್ಕೆ ತಾರದ ಗರ್ಭಿಣಿಯರು ಅಧಿಕ ರಕ್ತದೊತ್ತಡ, ಅನೀಮಿಯಾ, ಸ್ನಾಯು ನೋವು ಮತ್ತು ನಿಶ್ಯಕ್ತಿಯಿಂದ ಬಳಲಬೇಕಾಗುತ್ತದೆ. ಇದಲ್ಲದೇ, ಗರ್ಭಪಾತ, ಅವಧಿಪೂರ್ವ ಜನನ ಇತ್ಯಾದಿ ಅಪಾಯಗಳು ಹೆಚ್ಚಾಗಬಹುದು. ನವಜಾತ ಶಿಶುವು ಕಡಿಮೆ ತೂಕದಿಂದ ಜನನವಾಗುತ್ತದೆ, ಅವಧಿಪೂರ್ವ ಜನನ ಮತ್ತು ಶ್ವಾಸಕೋಶ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನವಜಾತ ಶಿಶುವಿನ ಮೆದುಳು ಬೆಳವಣಿಗೆಗೆ ಥೈರಾಯ್ಡ್‌ ಹಾರ್ಮೋನ್‌ ಅಗತ್ಯವಿರುತ್ತದೆ. ಚಿಕಿತ್ಸೆ ಕೊಡಿಸದಿದ್ದಲ್ಲಿ, ಆ ಮಗುವಿನ ಐಕ್ಯೂ ಮಟ್ಟದಲ್ಲಿ ನ್ಯೂನತೆ ಕಂಡುಬರುತ್ತದೆ.

ಹೈಪರ್‌ಥೈರಾಯ್ಡ್‌ ಹೊಂದಿರುವ ಮಹಿಳೆಯರು ಥೈರಾಯ್ಡ್‌ ನಿರೋಧಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ಮೂಲಕ ಥೈರಾಯ್ಡ್‌ ಹಾರ್ಮೋನ್‌ ಉತ್ಪಾದನೆಯನ್ನು ತಡೆಗಟ್ಟಬಹುದು. ಹೈಪೋಥೈರಾಯ್ಡಿಸಂ ಅನ್ನು ಲೆವೊಥೈರಾಕ್ಸಿನ್‌ ಎಂದು ಕರೆಯಲ್ಪಡುವ ಸಿಂಥೆಟಿಕ್‌ ಹಾರ್ಮೋನ್‌ನಿಂದ ಚಿಕಿತ್ಸೆ ನೀಡಬಹುದಾಗಿದೆ. ಗರ್ಭಾವಸ್ಥೆಯ ವೇಳೆ ಪ್ರತಿ 4-6 ವಾರಗಳ ಕಾಲ ಪರೀಕ್ಷೆ ಮಾಡಿಸಿ ಈ ಡೋಸ್‌ ಅಗತ್ಯವಿರುತ್ತದೆ.

ಮೂಲಂಗಿ, ಎಲೆಕೋಸು ಮತ್ತು ಹೂಕೋಸಿನಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಥೈರಾಯ್ಡ್‌ ಅನ್ನು ಪರಿಹರಿಸಿಕೊಳ್ಳಬಹುದು. ಈ ಪದಾರ್ಥಗಳು ಥೈರಾಯ್ಡ್‌ ಹಾರ್ಮೋನ್‌ ಉತ್ಪತ್ತಿಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

click me!