ಪಿರಿಯಡ್ಸ್ ಅಂದ್ರೆ ಬ್ಲೀಡಿಂಗ್ ನಾರ್ಮಲ್ ಆಗಬೇಕು, ಕಡಿಮೆ ಆದ್ರೂ ಇಗ್ನೋರ್ ಮಾಡಬೇಡಿ

By Suvarna News  |  First Published Jan 20, 2023, 3:52 PM IST

ಮಹಿಳೆ ಆರೋಗ್ಯದ ಬಗಗೆ ಹೆಚ್ಚು ಗಮನ ನೀಡ್ಬೇಕು. ಪ್ರತಿಯೊಂದು ಹಂತದಲ್ಲೂ ಆಕೆಯ ಹಾರ್ಮೋನ್ ನಲ್ಲಿ ಬದಲಾವಣೆಯಾಗ್ತಿರುತ್ತದೆ. ಮುಟ್ಟಿಗೆ ಸಂಬಂಧಿಸಿದಂತೆ ಅನೇಕ ವಿಷ್ಯಗಳನ್ನು ಆಕೆ ತಿಳಿದಿರಬೇಕಾಗುತ್ತದೆ. ಬ್ಲೀಡಿಂಗ್ ಹೆಚ್ಚಾದ್ರೆ ಮಾತ್ರವಲ್ಲ ಕಡಿಮೆಯಾದ್ರೂ ಸಮಸ್ಯೆ ಎಂಬುದು ಗೊತ್ತಿರಬೇಕು.
 


ಮುಟ್ಟಿನ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದಿರುವ ಅಗತ್ಯವಿದೆ. ಮುಟ್ಟಿನ ಸಮಯದಲ್ಲಿ ನೋವು, ಕಿರಿಕಿರಿ, ರಕ್ತಸ್ರಾವ ಆಗೋದ್ರಿಂದ ಅನೇಕ ಮಹಿಳೆಯರು ಈ ಸಮಸ್ಯೆ ಇಲ್ಲದೆ ಹೋದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂದುಕೊಳ್ತಾರೆ. ಹಾಗಂತ ಮುಟ್ಟು ನಿಯಮಿತವಾಗಿ ಆಗ್ತಿಲ್ಲವೆಂದ್ರೆ ಅದನ್ನು ನಿರ್ಲಕ್ಷ್ಯಿಸೋಕೆ ಹೋಗ್ಬಾರದು. ನಿಯಮಿತ ಮುಟ್ಟು ಆರೋಗ್ಯಕ್ಕೆ ಬಹಳ ಮುಖ್ಯ. ತಿಂಗಳಿಗೊಮ್ಮೆ ಪಿರಿಯಡ್ಸ್ ಆಗೋದು ಎಷ್ಟು ಮುಖ್ಯವೋ ಎಷ್ಟು ಬ್ಲೀಡಿಂಗ್ ಆಗ್ತಿದೆ ಎನ್ನುವುದು ಕೂಡ ಮಹತ್ವ ಪಡೆಯುತ್ತದೆ. ಅತಿ ಹೆಚ್ಚು ಬ್ಲೀಡಿಂಗ್ ಆಗೋದು ಹೇಗೆ ದೇಹಕ್ಕೆ ಹಾನಿಯುಂಟು ಮಾಡುತ್ತದೆಯೋ ಅದೇ ರೀತಿ ಅತಿ ಕಡಿಮೆ ಬ್ಲೀಡಿಂಗ್ ಕೂಡ ಸಮಸ್ಯೆಯುಂಟು ಮಾಡುತ್ತದೆ. ಕಡಿಮೆ ಬ್ಲೀಡಿಂಗ್ ಆಗ್ತಿದೆ ಎಂಬ ಕಾರಣಕ್ಕೆ ಸಂತೋಷಪಡಬೇಡಿ. ಅದ್ರ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಿ.

ನಿಮಗೆ ಕಡಿಮೆ ಬ್ಲೀಡಿಂಗ್ ಆಗ್ತಿದ್ದರೆ ಅದು ಅನಾರೋಗ್ಯಕ್ಕೆ ಕಾರಣವಾಗಬಹುದು. ಕೆಲ ಸಮಸ್ಯೆಯಿಂದಾಗಿ ನಿಮಗೆ ಬ್ಲೀಡಿಂಗ್ ಕಡಿಮೆಯಾಗ್ತಿರಬಹುದು. ದೀರ್ಘಕಾಲದವರೆಗೆ ನೀವು ಕಡಿಮೆ ಬ್ಲೀಡಿಂಗ್ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಒತ್ತಡ, ಹಠಾತ್ ತೂಕ (Weight) ಹೆಚ್ಚಾಗುವುದು ಸೇರಿದಂತೆ ಅನೇಕ ಗಂಭೀರ ಆರೋಗ್ಯ (Health)  ಪರಿಸ್ಥಿತಿಗಳ ಪರಿಣಾಮವಾಗಿರಬಹುದು. ಈ ಸಂದರ್ಭದಲ್ಲಿ ಕಾರಣ ಗುರುತಿಸಿ, ಚಿಕಿತ್ಸೆ ಪಡೆಯುವುದು ಮುಖ್ಯ.

ಮದುವೆಯಾದ್ಮೇಲೂ ಹಳೇ ಸ್ನೇಹ ಕಾಪಾಡಿಕೊಳ್ಳೋದು ಹೇಗೆ? 

Tap to resize

Latest Videos

ಬ್ಲೀಡಿಂಗ್ (Bleeding) ಕಡಿಮೆಯಾಗೋದು ಅಂದ್ರೇನು ? : ಸಾಮಾನ್ಯವಾಗಿ ಮುಟ್ಟು ಐದು ದಿನಗಳವರೆಗೆ ಇರುತ್ತದೆ. ನಿಮಗೆ ಐದು ದಿನಕ್ಕಿಂತ ಮೊದಲೇ ಬ್ಲೀಡಿಂಗ್ ನಿಂತಿದ್ರೆ, ದಿನವೊಂದಕ್ಕೆ ಒಂದೇ ಪ್ಯಾಡ್ (Pad) ಸಾಕು ಎನ್ನುವವರು ನೀವಾಗಿದ್ದರೆ ಅಥವಾ ಫ್ಲೋ ಕಡಿಮೆ ಇದ್ದು, ಮೂತ್ರ ವಿಸರ್ಜನೆ ವೇಳೆ ಮಾತ್ರ ಸ್ವಲ್ಪ ರಕ್ತಸ್ರಾವವಾಗ್ತಿದ್ದರೆ ನಿಮಗೆ ಬ್ಲೀಡಿಂಗ್ ಕಡಿಮೆಯಾಗಿದೆ ಎಂದರ್ಥ. 

ಬ್ಲೀಡಿಂಗ್ ಕಡಿಮೆಯಾಗಲು ಕಾರಣ : 

ಈಸ್ಟ್ರೊಜನ್ (Estrogen) ಮಟ್ಟದಲ್ಲಿ ಇಳಿಕೆ : ಈಸ್ಟ್ರೋಜನ್ ಮಟ್ಟ ಕಡಿಮೆ ಇರುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಬ್ಲೀಡಿಂಗ್ ಕಡಿಮೆಯಿರುತ್ತದೆ. ಈಸ್ಟ್ರೊಜೆನ್ ಗರ್ಭಾಶಯ (Uterus) ದ ಒಳಪದರದ ದಪ್ಪವನ್ನು ಹೆಚ್ಚಿಸುತ್ತದೆ. ಅತಿಯಾದ ವ್ಯಾಯಾಮ, ಕೆಟ್ಟ ಆಹಾರ ಸೇವನೆ ಮತ್ತು ಅಂಡೋತ್ಪತ್ತಿಯಲ್ಲಿನ ಅಡಚಣೆಗಳಿಂದ ಈಸ್ಟ್ರೊಜೆನ್ ಕಡಿಮೆಯಾಗುತ್ತದೆ.

ರಕ್ತದಲ್ಲಿ ಹೆಚ್ಚಾಗುವ ಪ್ರೊಲ್ಯಾಕ್ಟಿನ್ : ಪ್ರೊಲ್ಯಾಕ್ಟಿನ್ ಒಂದು ರೀತಿಯ ಹಾರ್ಮೋನ್ ಆಗಿದೆ. ಮಹಿಳೆಯರ ಸ್ತನ ಬೆಳವಣಿಗೆ ಮತ್ತು ಹಾಲು ಉತ್ಪಾದನೆಗೆ ಇದು ಸಂಬಂಧ ಹೊಂದಿದೆ. ರಕ್ತದಲ್ಲಿ ಪ್ರೊಲ್ಯಾಕ್ಟಿನ್ ಮಟ್ಟ ಹೆಚ್ಚಾದ್ರೆ ಮುಟ್ಟಿನ ಅವಧಿಯಲ್ಲಿ ಏರುಪೇರಾಗುತ್ತದೆ. ಹಾಗೆಯೇ ಬ್ಲೀಡಿಂಗ್ ಕೂಡ ಕಡಿಮೆಯಾಗುತ್ತದೆ. ಪ್ರೊಲ್ಯಾಕ್ಟಿನ್ ಮಹಿಳೆಯರ ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರುತ್ತದೆ. 

ಬ್ಲೀಡಿಂಗ್ ಕಡಿಮೆಯಾಗಲು ಥೈರಾಯ್ಡ್ ಕಾರಣ : ಥೈರಾಯ್ಡ್ ಮಹಿಳೆಯರನ್ನು ಅತಿಯಾಗಿ ಕಾಡುವ ಖಾಯಿಲೆಯಾಗಿದೆ. ಹತ್ತರಲ್ಲಿ ಒಬ್ಬ ಮಹಿಳೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. ಥೈರಾಯ್ಡ್ ನಿಂದಾಗಿ ಹಾರ್ಮೋನುಗಳಲ್ಲಿ ಏರುಪೇರು ಕಂಡು ಬರುತ್ತದೆ. ಇದ್ರಿಂದ ಮುಟ್ಟು ಸರಿಯಾಗಿ ಆಗೋದಿಲ್ಲ. ಥೈರಾಯ್ಡ್ ಇರುವ ಮಹಿಳೆಗೆ ನಾಲ್ಕೈದು ತಿಂಗಳು ಪಿರಿಯಡ್ಸ್ ಆಗದೆ ಇರಬಹುದು. ಇದನ್ನು ಅಮೆನೋರಿಯಾ ಎಂದು ಕರೆಯಲಾಗುತ್ತದೆ. ನಿಮಗೆ ಬ್ಲೀಡಿಂಗ್ ಕಡಿಮೆಯಾಗಿದೆ ಎಂದೆನಿಸಿದ್ರೆ ಥೈರಾಯ್ಡ್ ಪರೀಕ್ಷಿಸಿಕೊಳ್ಳಿ.

ರಕ್ತಹೀನತೆ : ರಕ್ತ ಹೀನತೆ ಮತ್ತು ಮುಟ್ಟಿನ ಮಧ್ಯೆ ಸಂಬಂಧಿಸಿವೆ. ಹೆಚ್ಚಿನ ಬ್ಲೀಡಿಂಗ್ ನಿಂದ ರಕ್ತ ಕಡಿಮೆಯಾಗುತ್ತದೆ. ಹಾಗೆಯೇ ರಕ್ತ ಹೀನತೆಯಿಂದ ಬ್ಲೀಡಿಂಗ್ ಕಡಿಮೆಯಾಗುತ್ತದೆ. ಹಾಗಾಗಿ ಬ್ಲೀಡಿಂಗ್ ಹೆಚ್ಚಾದಾಗ ಎಚ್ಚೆತ್ತುಕೊಳ್ಳುವಂತೆ ಬ್ಲೀಡಿಂಗ್ ಕಡಿಮೆಯಾದಾಗ ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.

ಟೀ ಕಪ್ ಕಪ್ಪು ಕಪ್ಪಾಗಿದ್ಯಾ? ಹೀಗೇ ಮೆಂಟೇನ್ ಮಾಡ್ಬೇಕು ನೋಡಿ

ಅಂಡೋತ್ಪತ್ತಿಯಲ್ಲಿ ಇಳಿಕೆ : ಮುಟ್ಟಿಗೆ ಅಂಡಾಣು ಉತ್ಪತ್ತಿಯಾಗಬೇಕು. ಕೆಲ ಮಹಿಳೆಯರಿಗೆ ಅಂಡೋತ್ಪತ್ತಿ ಕಡಿಮೆಯಾಗುತ್ತದೆ. ಆಗ ಮುಟ್ಟಿನ ಸಂದರ್ಭದಲ್ಲಿ ಬ್ಲೀಡಿಂಗ್ ಕಡಿಮೆಯಾಗುತ್ತದೆ. 
 

click me!