Satellite Internet: ಭಾರತದಲ್ಲಿ ಅನುಮತಿ ಪಡೆಯಲಿದೆ ಎಲಾನ್ ಮಸ್ಕ್ ಕಂಪನಿ Starlink

By Suvarna News  |  First Published Dec 4, 2021, 5:31 PM IST

ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ಎಕ್ಸ್ (SpaceX) ಕಮರ್ಷಿಯಲ್ ರಾಕೆಟ್ ಕಂಪನಿಯ ಭಾಗವಾಗಿರುವ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ. ಇದಕ್ಕೆ ಅನುಮತಿ ಪಡೆಯಲು ಜನವರಿಯಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿದೆ. ಅನುಮತಿ ಸಿಕ್ಕ ಬಳಿಕ ಹೆಚ್ಚಿನ ಸೇವೆಯನ್ನು ಗ್ರಾಮೀಣ ಪ್ರದೇಶದಲ್ಲಿ ಒದಗಿಸಲಿದೆ ಎನ್ನಲಾಗಿದೆ. 


ಬೃಹತ್ ಉದ್ದಿಮೆದಾರ ಎಲಾನ್ ಮಸ್ಕ್ (Elon Musk) ಅವರು ಸ್ಪೇಸ್‌ಎಕ್ಸ್ (SpaceX) ಕಮರ್ಷಿಯಲ್ ರಾಕೆಟ್‌ ಕಂಪನಿ ಮೂಲಕ ಹೊಸ ಸಂಚಲನ ಹುಟ್ಟು ಹಾಕಿದ್ದಾರೆ. ಬಾನಂಚಿನ ಪ್ರವಾಸವನ್ನು ಆಯೋಜಿಸುವ ಮೂಲಕ ಹೊಸ ಅಧ್ಯಾಯವನ್ನೇ  ಬರೆದಿದ್ದಾರೆ. ಅದೇ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್ ಲಿಂಕ್ (Starlink) ಮತ್ತೊಂದು ಸಾಹಸವನ್ನು ಮಾಡಿದೆ. ಈಗಾಗಲೇ ಈ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಅಂಥದ್ದೇ ಸೇವೆಯನ್ನು ಸ್ಟಾರ್ ಲಿಂಕ್ (Starlink) ಭಾರತ (India) ದಲ್ಲೂ ನೀಡಲಿದೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗುವ ಸಂದರ್ಭ ಎದುರಾಗಿದೆ. ಎಲಾನ್ ಮಸ್ಕ್ ಒಡೆತನತದ ಸ್ಟಾರ್‌ಲಿಂಕ್, ಭಾರತದಲ್ಲೂ ಸ್ಯಾಟಲೈಟ್‌ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸರ್ಕಾರದ ಅನುಮತಿಗಾಗಿ ಮುಂದಿನ ಜನವರಿಯಲ್ಲಿ ಅರ್ಜಿ ಸಲ್ಲಿಸಲಿದ್ದು, ಜನವರಿ ಅಂತ್ಯಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಸ್ಟಾರ್‌ಲಿಂಕ್‌ (Starlink)ನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಇದರೊಂದಗೆ ಭಾರತದಲ್ಲಿ ಶೀಘ್ರವೇ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆಯನ್ನು ನಿರೀಕ್ಷಿಸಬಹುದಾಗಿದೆ. ಈ ಹಿಂದೆಯೇ ಈ ಬಗ್ಗೆ ಸುದ್ದಿಯಾಗಿತ್ತು. ಅದೀಕ ಖಚಿತಗೊಂಡಿದೆ.

ಸ್ಪೇಸ್‌ ಎಕ್ಸ್‌ (SpaceX) ಭಾರತೀಯ ಸ್ಟಾರ್‌ಲಿಂಕ್ ಕೌಂಟ್ರಿ ಡೈರೆಕ್ಟರ್ (Starlink Country Director) ಸಂಜಯ್ ಭಾರ್ಗವ್ (Sanjay Bhargava) ಅವರು, ಭಾರತದಲ್ಲಿ ಸ್ಟಾರ್‌ಲಿಂಕ್ ಕಂಪನಿಯು ಸ್ಯಾಟಲೈಟ್ ಆಧರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಂಬಂಧ ಅನುಮತಿ ಪಡೆದುಕೊಳ್ಳುತ್ತಿರುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ನಾವು 31 ಜನವರಿಗಿಂತಲೂ ಮುಂಚೆಯೇ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ ವಾಣಿಜ್ಯಾತ್ಮಕ ಅನುಮತಿಗಾಗಿ  ಅಪ್ಲೈ ಮಾಡಲಿದ್ದೇವೆ ಎಂದು ಸಂಜಯ್ ಭಾರ್ಗವ ತಿಳಿಸಿದ್ದಾರೆಂದು  ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

Tap to resize

Latest Videos

undefined

Most Used Emoji: 2021 ರಲ್ಲಿ ನೆಟ್ಟಿಗರು ಅತಿ ಹೆಚ್ಚು ಬಳಸಿದ ಇಮೋಜಿ ಯಾವುದು ಗೊತ್ತಾ?

ಜನವರಿ ಅಂತ್ಯಕ್ಕೆ ಮೊದಲೇ ಸ್ಟಾರ್‌ಲಿಂಕ್‌ಗೆ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸಲು ಭಾರತದಲ್ಲಿ ಅನುಮತಿ ಸಿಕ್ಕರೆ, ಏಪ್ರಿಲ್‌ ತಿಂಗಳಿನಿಂದ ಸೇವೆಯನ್ನು ಪೂರೈಸಲು ಸಾಧ್ಯವಾಗಲಿದೆ. ಹಾಗೆಯೇ, ಕಂಪನಿಯು 2022ರ ಡಿಸೆಂಬರ್ ಅಂತ್ಯಕ್ಕೆ 20000 ಸ್ಟಾರ್‌ಲಿಂಕ್ ಸಾಧನಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ. ಭಾರ್ಗವ್ ಅವರು ಪೋಸ್ಟ್ ಮಾಡಿರುವ ಪ್ರೆಸೆಂಟೇಷನ್‌ನಲ್ಲಿ ಈ ಎಲ್ಲ ಮಾಹಿತಿಯನ್ನು ತಿಲಿಸಲಾಗಿದೆ. ಇನ್ನು ಒಂದು ಗಮನಿಸಬೇಕಾದಗ ಸಂಗತಿ ಏನೆಂದರೆ, ಸ್ಟಾರ್‌ಲಿಂಕ್ ತನ್ನ ಈ ಹೊಸ ಇಂಟರ್ನೆಟ್ ಸೇವೆಯನ್ನು ಭಾರತದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿಗೆ ನೀಡಲು ಯೋಜಿಸಿದಂತಿದೆ. ಈ ಹಿಂದೆಯೇ ಗೊತ್ತಾದ ಮಾಹಿತಿಯ ಪ್ರಕಾರ, ಈ ಸಾಧನಗಳ ಪೈಕಿ ಶೇ.80ರಷ್ಟು ಸಾಧನಗಳನ್ನು ಅದು ಗ್ರಾಮೀಣ ಭಾಗದಲ್ಲಿ ನೀಡಲಿದೆ ಎನ್ನಲಾಗಿದೆ.

ವಿಶೇಷ ಎಂದರೆ, ಸ್ಟಾರ್‌ಲಿಂಕ್ ಈಗಾಗಲೇ ಭಾರತದಲ್ಲಿ ತನ್ನ ಸಾಧನಗಳನ್ನು ಅಳವಡಿಸಿಕೊಳ್ಳಲು 5000ಕ್ಕೂ ಹೆಚ್ಚು ಪ್ರೀ ಆರ್ಡರ್‌ಗಳನ್ನು ಪಡೆದುಕೊಂಡಿದೆಯಂತೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಭಾರತದಲ್ಲೂ ಸ್ಯಾಟ್‌ಲೈಟ್ ಇಂಟರ್ನೆಟ್ ಸೇವೆಗೆ ಈಗಾಗಲೇ ಡಿಮ್ಯಾಂಡ್ ಶುರುವಾಗಿದೆ ಎಂದು ಹೇಳಬಹುದು. ಸ್ಟಾರ್‌ಲಿಂಕ್ ಮಾತ್ರವಲ್ಲದೇ, ಅಮೆಜಾನ್ ಕಂಪನಿಯ ಕ್ವಿಪರ್ ಮತ್ತು ಬ್ರಿಟಿಷ್ ಸರ್ಕಾರ ಹಾಗೂ ಭಾರ್ತಿ ಎಂಟರ್‌ಪ್ರೈಸಸ್ ಜಂಟಿ ಒಡೆತನದ ಒನ್‌ವೆಬ್ ಕೂಡ ಇಂಥದ್ದೇ ಸೇವೆಯನ್ನು ಒದಗಿಸುವ ಕಂಪನಿಗಳು. ಇವು ಸ್ಟಾರ್‌ಲಿಂಕ್‌ನ ಪ್ರತಿಸ್ಪರ್ಧಿಗಳು ಎನ್ನಬಹುದು. 

ಆದರೆ, ಆಶ್ಚರ್ಯಕ ಬೆಳವಣಿಗೆಯೊಂದರಲ್ಲಿ ಇಂಥ ಸ್ಯಾಟ್ಲೈಟ್ ಇಂಟರ್ನೆಟ್ (Internet) ಸೇವೆಯನ್ನು ಪಡೆಯಲು ಚಂದಾದಾರಿಕೆಯನ್ನು ಪಡೆದುಕೊಳ್ಳಬಾರದು ಎಂದು ಕಳೆದ ವಾರವೇ ಭಾರತ ಸರ್ಕಾರ (Indian Government) ಎಚ್ಚರಿಸಿದೆ. ಇಂಥ ಯಾವುದೇ ಸೇವೆಯನ್ನು ಒದಗಿಸಲು ಅನುಮತಿ ನೀಡಿಲ್ಲವಾದ್ದರಿಂದ ಇದರಿಂದ ಎಚ್ಚರಿಕೆ ವಹಿಸುವಂತೆ ಹೇಳಿತ್ತು. ಆದರೆ, ಮುಂದಿನ ದಿನಗಳಲ್ಲಿ ಸ್ಯಾಟ್‌ಲೈಟ್ ಆಧರಿತ ಇಂಟರ್ನೆಟ್ ಸೇವೆಯು ಸಾಮಾನ್ಯವಾಗಲಿದೆ. ಬಹುಶಃ ಈ ಸೇವೆಗೆ ಅನುಮತಿ ನೀಡಿಲ್ಲವಾದ್ದರಿಂದ, ಎಚ್ಚರಿಕೆ ವಹಿಸುವಂತೆ ಸರ್ಕಾರ ಹೇಳಿರುವ ಸಾಧ್ಯತೆ. ಒಂದೊಮ್ಮೆ, ಅನುಮತಿ ದೊರತರೆ ಯಾವುದೇ ಸಮಸ್ಯೆಗಳು ಉದ್ಭವಿಸಲಾರವು ಎನ್ನಬಹುದು.

Google best apps 2021: ಗೂಗಲ್ ಪ್ರಕಾರ 2021ರ ಬೆಸ್ಟ್ ಆಪ್ ಯಾವುದು ಗೊತ್ತಾ?

click me!