Woman
ಟೊಮೆಟೊ ಫೇಸ್ ಪ್ಯಾಕ್ ಮುಖಕ್ಕೆ ಹೊಳಪು ನೀಡುತ್ತದೆ, ಟೊಮೆಟೊ, ಜೇನುತುಪ್ಪ, ಮುಲ್ತಾನಿ ಮಿಟ್ಟಿ ಮತ್ತು ಅರಿಶಿನದೊಂದಿಗೆ ನೈಸರ್ಗಿಕ ಫೇಸ್ ಪ್ಯಾಕ್ ತಯಾರಿಸುವ ಮೂಲಕ ಆರೋಗ್ಯಕರ ಮತ್ತು ಹೊಳೆಯುವ ತ್ವಚೆ ಪಡೆಯಬಹುದು.
ವಿಟಮಿನ್ ಸಿ, ಲೈಕೋಪೀನ್, ಉತ್ಕರ್ಷಣ ನಿರೋಧಕಗಳು ಇತ್ಯಾದಿಗಳಿಂದ ಸಮೃದ್ಧವಾಗಿರುವ ಟೊಮೆಟೊದ ಫೇಸ್ ಪ್ಯಾಕ್ ಬಳಸಿ ನೀವು ಆರೋಗ್ಯಕರ ತ್ವಚೆ ಪಡೆಯಬಹುದು.
ಮೊಸರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಜೊತೆಗೆ ಸತ್ತ ಚರ್ಮ ಕಿತ್ತೆಸೆಯುವ ಸಾಮರ್ಥ್ಯವಿದೆ. ಮೊಸರಿನಲ್ಲಿ ಟೊಮೆಟೊ ಬೆರೆಸಿ ಹಚ್ಚುವುದರಿಂದ ಕಲೆಗಳು ಮಾಯವಾಗುವುದರ ಜೊತೆಗೆ ಮುಖ ಹೊಳೆಯುತ್ತದೆ.
ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಅರಿಶಿನವು ಮುಖದ ಊತವನ್ನು ಕಡಿಮೆ ಮಾಡುತ್ತದೆ ಟೊಮೆಟೊ ರಸದೊಂದಿಗೆ ಅರಿಶಿನವನ್ನು ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಸಹ ಮಾಯವಾಗುತ್ತವೆ.
ಹೆಚ್ಚಿನ ಮನೆಗಳಲ್ಲಿ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಬಳಸುತ್ತಾರೆ.. ಈ ಬಾರಿ ನೀವು ಕಡಲೆ ಹಿಟ್ಟಿನಲ್ಲಿ ಟೊಮೆಟೊ ರಸವನ್ನು ಬೆರೆಸಿ ಹಚ್ಚಿ. ಇದು ಮುಖದ ಕೊಳೆ ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
ಮುಖದಲ್ಲಿ ತಕ್ಷಣ ಹೊಳಪು ಬೇಕಾದರೆ, ಹಣ್ಣಾದ ಟೊಮೆಟೊವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ರುಬ್ಬಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ಮತ್ತು 15 ನಿಮಿಷ ಬಿಟ್ಟು ನಂತರ ತೊಳೆಯಿರಿ ನಿಮ್ಮ ಚರ್ಮವು ಹೊಳೆಯುತ್ತದೆ
ಮೊಡವೆ ಸಮಸ್ಯೆ ಇರುವವರು ಮುಲ್ತಾನಿ ಮಿಟ್ಟಿಯೊಂದಿಗೆ ಟೊಮೆಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಬಹುದು. ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.