Woman

ಟವೆಲ್ ತೊಳೆಯುವ ಸರಿಯಾದ ವಿಧಾನ

ಎಷ್ಟು ತೊಳೆದರು ಕೆಲವೊಮ್ಮೆ ಬಾತ್ ಟವೆಲ್‌ಗಳು ಕ್ಲೀನ್ ಅಗೋಲ್ಲ, ಜೊತೆಗೆ ಒರಟಾಗಿರುತ್ತವೆ. ಬಾತ್ ಟವೆಲ್‌ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಸಿಂಪಲ್ ಐಡಿಯಾ

ನಿಮ್ಮ ಟವೆಲ್ ಕೂಡ ಕೊಳಕಾಗಿದೆಯೇ?

ಕಿಚನ್ ಅಥವಾ ಸ್ನಾನಕ್ಕೆ ಬಳಸುವ ಟವೆಲ್‌ಗಳು ಬೇಗನೆ ಕೊಳಕಾಗುತ್ತವೆ ಮತ್ತು ತೊಳೆದಾಗ ಗಟ್ಟಿಯಾಗುತ್ತವೆ. ಹಾಗಾಗಿ ಟವೆಲ್ ಅನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ನಾವು ನಿಮಗೆ ಹೇಳುತ್ತೇವೆ.

ಇತರೆ ಬಟ್ಟೆಗಳಿಂದ ಪ್ರತ್ಯೇಕವಾಗಿ ತೊಳೆಯಿರಿ

ಟವೆಲ್‌ಗಳಲ್ಲಿ ಸಣ್ಣ ನಾರುಗಳಿರುತ್ತವೆ, ಆದ್ದರಿಂದ ನೀವು ಅದನ್ನು ಇತರ ಬಟ್ಟೆಗಳೊಂದಿಗೆ ತೊಳೆಯಬೇಡಿ, ಯಾವಾಗಲೂ ಟವೆಲ್‌ಗಳನ್ನು ಪ್ರತ್ಯೇಕವಾಗಿ ಕೈಯಿಂದ ಅಥವಾ ಯಂತ್ರದಲ್ಲಿ ತೊಳೆಯಬೇಕು.

ಬಿಸಿ ನೀರಿನಲ್ಲಿ ನೆನೆಸಿ

ಟವೆಲ್‌ಗಳಲ್ಲಿನ ಕೊಳೆ ಮತ್ತು ಎಣ್ಣೆಯನ್ನು ತೆಗೆದುಹಾಕಲು ಯಾವಾಗಲೂ ಬಿಸಿನೀರನ್ನು ಬಳಸಿ. ನೀವು ಬಿಸಿ ನೀರಿನಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಹಾಕಿ ಸ್ವಲ್ಪ ಹೊತ್ತು ಟವೆಲ್ ಅನ್ನು ಅದರಲ್ಲಿ ನೆನೆಸಿಡಿ.

ಬ್ಲೀಚ್ ಬಳಸಿ

ನಿಮ್ಮ ಮನೆಯಲ್ಲಿ ಬಿಳಿ ಟವೆಲ್‌ಗಳಿದ್ದರೆ, ನೀವು ತಿಂಗಳಿಗೊಮ್ಮೆ ಬ್ಲೀಚ್ ಬಳಸಬಹುದು. ಬ್ಲೀಚ್ ಬಳಸುವುದರಿಂದ ಬಿಳಿ ಬಣ್ಣ ಉಳಿಯುತ್ತದೆ. ಬಣ್ಣದ ಟವೆಲ್‌ಗಳಿಗೆ ಕಲರ್ ಸೇಫ್ ಬ್ಲೀಚ್ ಬಳಸಿ.

ವಿನೆಗರ್ ಬಳಸಿ

ಬಿಳಿ ಟವೆಲ್‌ಗಳನ್ನು ಸ್ವಚ್ಛಗೊಳಿಸಲು ಮತ್ತು ಅವುಗಳಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು, ಟವೆಲ್ ಅನ್ನು ನೆನೆಸುವಾಗ ಒಂದು ಕಪ್ ವಿನೆಗರ್ ಸೇರಿಸಿ.

ಬೇಕಿಂಗ್ ಸೋಡಾ ಬಳಸಿ

ಹಳೆಯ ಟವೆಲ್‌ಗಳು ವಿಚಿತ್ರವಾದ ವಾಸನೆ ಬರಲು ಪ್ರಾರಂಭಿಸುತ್ತದೆ. ಟವೆಲ್ ಅನ್ನು ನೆನೆಸುವಾಗ ಎರಡು ಚಮಚ ಬೇಕಿಂಗ್ ಸೋಡಾ ಸೇರಿಸಿ  ಸಾಮಾನ್ಯ ತೊಳೆಯುವ ಯಂತ್ರದಲ್ಲಿ ಅಥವಾ ಕೈಯಿಂದ ತೊಳೆಯಿರಿ.

ಬಿಸಿಲಿನಲ್ಲಿ ಒಣಗಿಸುವುದನ್ನು ತಪ್ಪಿಸಿ

ಟವೆಲ್‌ಗಳನ್ನು ಯಾವಾಗಲೂ ಕಡಿಮೆ ಬಿಸಿಲಿನಲ್ಲಿ ಒಣಗಿಸಬೇಕು. ನೀವು ಅದನ್ನು ಗಾಳಿ ಬೀಸುವ ಸ್ಥಳದಲ್ಲಿ ಒಣಗಿಸಬಹುದು. ಹೆಚ್ಚು ಹೊತ್ತು ಬಿಸಿಲಿನಲ್ಲಿ ಒಣಗಿಸುವುದರಿಂದ ಟವೆಲ್ ಗಟ್ಟಿಯಾಗುತ್ತದೆ.

Find Next One