Small Screen
ಅಮೃತ ಸೂದ್ ಅಥವಾ ಅಮೃತ ನಾಯ್ಕ್ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ. ತಮ್ಮ ಅಭಿನಯದ ಮೂಲಕವೇ ಮೋಡಿ ಮಾಡ್ತಾರೆ.
ಅಮೃತ ನಾಯ್ಕ್ ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ಲೆಕ್ಚರರ್ ಆಗಿ ಜನಪ್ರಿಯತೆ ಪಡೆದಿದ್ದರು. ರಾಜ್ ಬಿ ಶೆಟ್ಟಿ ಜೊತೆ ಚಂದ ಅವಳ ಕಿರು ಲಜ್ಜೆ ಹಾಡಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದರು.
ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತಂಗಿ ಅಪೇಕ್ಷಾ ಪಾತ್ರದಲ್ಲಿ ಅಮೃತಾ ನಾಯ್ಕ್ ನಟಿಸುತ್ತಿದ್ದಾರೆ.
ಭೂಮಿಕಾ ಪ್ರೀತಿಯಿಂದ ಆಕೆಯನ್ನು ಅಪ್ಪಿ ಅಂತಾನೆ ಕರೆಯೋದು, ಭೂಮಿಕಾ ತಂಗಿಯ ಪ್ರೀತಿಯ ಭೂ ಆಗಿದ್ದಳು, ಆದರೆ ಮದುವೆಯಾಗಿ ಒಂದೇ ಮನೆ ಸೇರಿದ ಮೇಲೆ ಅಪೇಕ್ಷ ವರಸೆ ಬದಲಾಯ್ತು.
ಕುತಂತ್ರಿಗಳ ಷಡ್ಯಂತ್ರದಿಂದಾಗಿ ಅಕ್ಕನ ವಿರುದ್ಧ ನಿಂತಿರುವ ಅಪ್ಪಿ, ಸದ್ಯ ಅತ್ತೆಯಂತೆ ಪಾರ್ಟಿ ಮಾಡುತ್ತಾ, ಜೂಜಾಡುತ್ತಾ, ದುಂದು ವೆಚ್ಚ ಮಾಡುತ್ತಿರುತ್ತಾರೆ.
ಸೀರಿಯಲ್ ನಲ್ಲಿ ಮದುವೆಗೂ ಮುನ್ನ ಮಾಡೆಲ್ ಆಗಿದ್ದ ಅಪೇಕ್ಷಾ ಸದ್ಯ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಇವರು ಉಡುವ ಸೀರೆ ಸಖತ್ ಸ್ಟೈಲಿಶ್ ಆಗಿರುತ್ತೆ.
ಪಾತ್ರವೇ ಸ್ಟೈಲಿಶ್ ಆಗಿರೋದರಿಂದ ಅಪೇಕ್ಷಾ ಪ್ರತಿಯೊಂದು ಸೀರೆ ಜೊತೆ ತೊಡುವಂತಹ ಬ್ಲೌಸ್ ಸಖತ್ ಟ್ರೆಂಡಿಯಾಗಿರುತ್ತೆ. ಇದು ಸಿಂಪಲ್ ಸೀರೆಗೂ ಬೋಲ್ಡ್ ಲುಕ್ ನೀಡುತ್ತೆ.
ಅಪೇಕ್ಷಾ ತೊಡುವಂತಹ ಬ್ಲೌಸ್ ಗಳನ್ನು ನೀವು ಮದುವೆ ಪಾರ್ಟಿಗಳಲ್ಲಿ ಖಂಡಿತವಾಗಿಯೂ ಧರಿಸಬಹುದು. ಇದು ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತೆ, ಜೊತೆಗೆ ರಿಚ್ ಲುಕ್ ಕೂಡ ನೀಡುತ್ತೆ.
ಅಪೇಕ್ಷಾ ಧಾರಾವಾಹಿಯಲ್ಲಿ ಉಡುವಂತಹ ಪ್ರತಿಸೀರೆಗೂ ವಿಭಿನ್ನ ರೀತಿಯಲ್ಲಿ ಡಿಸೈನ್ ಮಾಡಿದ ಬ್ಲೌಸ್ ಧರಿಸುತ್ತಾರೆ. ಹೆಚ್ಚಾಗಿ ಸ್ಲೀವ್ ಲೆಸ್ ಬ್ಲೌಸ್ ಧರಿಸುವ ಅಪೇಕ್ಷಾ ಬ್ಲೌಸ್ ಡಿಸೈನ್ ನೊಡೋದಕ್ಕೆ ಚೆಂದ.
ನೀವು ಕೂಡ ಸಿಂಪಲ್ ಸೀರೆಯಲ್ಲಿ ಮಾಡರ್ನ್ ಆಗಿ ಕಾಣಬೇಕು ಎಂದು ಬಯಸಿದ್ರೆ, ಅಪೇಕ್ಷಾ ಬ್ಲೌಸ್ ಡಿಸೈನ್ ಸೇವ್ ಮಾಡಿ, ಮುಂದಿನ ಸಲ ಕಾಲೇಜು ಕಾರ್ಯಕ್ರಮಕ್ಕೋ, ಪಾರ್ಟಿಗೋ ಸೀರೆಗೆ ಮ್ಯಾಚ್ ಮಾಡಬಹುದು.