ಕನ್ನಡ ಕಿರುತೆರೆಯ ಖಡಕ್ ವಿಲನ್ ಅಂದ್ರೆ ನೆನಪಾಗೋದು ಶರ್ಮಿತಾ ಗೌಡ . ವಿಲನ್ ಪಾತ್ರಕ್ಕೆ ಜೀವತುಂಬುವ ಮೂಲಕ ಅದ್ಭುತವಾಗಿ ನಟಿಸುವ ಮೋಸ್ಟ್ ವಾಂಟೆಡ್ ವಿಲನ್ ಇವರು.
Image credits: Instagram
ಗೀತಾ ಸೀರಿಯಲ್ ಭಾನುಮತಿ
ನಟಿ ಶರ್ಮಿತಾ ಗೌಡ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಗೀತಾ ದಲ್ಲಿ ಭಾನುಮತಿಯಾಗಿ ನಟಿಸುವ ಮೂಲಕ, ಕನ್ನಡ ಕಿರುತೆರೆಯ ಬೆಸ್ಟ್ ವಿಲನ್ ಎನಿಸಿಕೊಂಡಿದ್ದರು.
Image credits: Instagram
ಟ್ರಾವೆಲ್ ಪ್ರಿಯೆ ಶರ್ಮಿತಾ
ಶರ್ಮಿತಾ ಗೌಡ ಹೆಚ್ಚಾಗಿ ಟ್ರಾವೆಲ್ ಮಾಡುತ್ತಿರುತ್ತಾರೆ. ದೇಶ , ವಿದೇಶಗಳನ್ನು ಸುತ್ತುತ್ತಾ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್, ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
Image credits: Instagram
ಅಯೋಧ್ಯೆಯಲ್ಲಿ ಶರ್ಮಿತಾ
ಇದೀಗಾ ಶರ್ಮಿತಾ ಶೆಟ್ಟಿ ಅಯೋಧ್ಯೆ ರಾಮ ಮಂದಿರಕ್ಕೆ ತಮ್ಮ ಕುಟುಂಬ ಸಮೇತರಾಗಿ ಭೇಟಿ ಕೊಟ್ಟಿದ್ದು, ಅಯೋಧ್ಯೆಯಲ್ಲಿ ತೆಗೆದಂತಹ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Image credits: Instagram
ಫ್ಯಾಮಿಲಿ ಜೊತೆ ಶರ್ಮಿತಾ
ತಂದೆ, ತಾಯಿ, ಮಕ್ಕಳು ಹಾಗೂ ಕುಟುಂಬ ಸದಸ್ಯರ ಜೊತೆ ಶರ್ಮಿತಾ ಕಾಶಿ, ಬನಾರಸ್, ಪ್ರಯಾಗ್ ರಾಜ್ ಹಾಗೂ ಅಯೋಧ್ಯೆ ಮೊದಲಾದ ತೀರ್ಥಕ್ಷೇತ್ರಗಳ ದರ್ಶನ ಮಾಡಿದ್ದಾರೆ.
Image credits: Instagram
ಜೈ ಶ್ರೀರಾಮ್
ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ದೈವೀಕತ್ವದ ಸೆಳೆಯಲ್ಲಿ ಕಳೆದು ಹೋಗಿರುವ ಶರ್ಮಿತಾ, ತಮ್ಮ ಹಣೆಯ ಮೇಲೆ ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರಾಮನಿಗೆ ಪೂಜೆ ಸಲ್ಲಿಸಿದ್ದಾರೆ.