Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್. ಹೆಚ್ಚಾಗಿ ಜನರು ಗುರುತಿಸುವುದು ಬುಜ್ಜಿ ಎಂದು.
ಬಿಗ್ ಬಾಸ್ ಸೀಸನ್ 11 50 ದಿನಗಳನ್ನು ಪೂರೈಸುತ್ತಿದ್ದಂತೆ ಎಂಟ್ರಿ ಕೊಟ್ಟವರು. ಆರಂಭದಿಂದಲೂ ಟಫ್ ಕಾಂಪಿಟೇಷನ್ ಕೊಡುತ್ತಿದ್ದವರು ಈಗ ಎಲಿಮಿನೇಟ್ ಅಗಿದ್ದಾರೆ ಎಂಬ ಸುದ್ದಿ ಇದೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ಸಲ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಈ ವಾರ ಅತಿ ಕಡಿಮೆ ಅಂಕ ಪಡೆದಿರುವ ರಜತ್ ಹೊರ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆರಂಭದಿಂದಲೂ ಟಾಸ್ಕ್‌ನಲ್ಲಿ ಸೈ ಹಾಗೂ ಮನೋರಂಜನೆಯಲ್ಲೂ ಸೈ ಅನಿಸಿಕೊಂಡಿರುವ ರಜತ್ ಎಲಿಮಿನೇಟ್ ಆಗಲು ಸಾಧ್ಯವೇ ಇಲ್ಲ ಎಂದು ವೀಕ್ಷಕರು ಚರ್ಚೆ ಶುರು ಮಾಡಿದ್ದಾರೆ.
ರಜತ್ ಕ್ಯಾಪ್ಟನ್ ಆಗಿದ್ದಾಗ ಉತ್ತುವಾರಿ ಸರಿಯಾಗಿ ಮಾಡಿಲ್ಲ ಅನ್ನೋ ಬೇಸರವಿದೆ. ಅದಕ್ಕಿಂತ ಹೆಚ್ಚಾಗಿ ಪ್ರತಿಯೊಂದರಲ್ಲೂ ಭವ್ಯಾಳನ್ನು ಸೇಫ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಕಡಿಮೆ ಅವಧಿಯಲ್ಲಿ ರಜತ್ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ರಜತ್ ಎಲಿಮಿನೇಟ್ ಆಗಿಲ್ಲ ಅವರು ಫಿನಾಲೆ ಮುಟ್ಟುತ್ತಾರೆ ಎಂದು ಫ್ಯಾನ್ಸ್ ಪ್ರಚಾರ ಮಾಡುತ್ತಿದ್ದಾರೆ.
ಹಲವು ವರ್ಷಗಳಿಂದ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಬೇಕು ಅನ್ನೋದು ರಜತ್ ಕನಸು. ಹೀಗಾಗಿ ಅಷ್ಟು ಸುಲಭವಾಗಿ ಆಟ ಬಿಟ್ಟು ಕೊಡುವುದಿಲ್ಲ ಎನ್ನುತ್ತಿದ್ದಾರೆ.