Small Screen
ಬಿಗ್ ಬಾಸ್ ಸೀಸನ್ 11 ರಲ್ಲಿ ತಮ್ಮ ಪಾಸಿಟಿವ್ ಮಂತ್ರಗಳಿಂದಲೇ ಸುದ್ದಿಯಾಗಿ, ಟ್ರೋಲ್ ಗಳಿಗೂ ಆಹಾರವಾದ ನಟಿ ಗೌತಮಿ ಜಾದವ್. ಈಕೆ ಟಫ್ ಸ್ಪರ್ಧಿ ಕೂಡ ಹೌದು.
ಗೌತಮಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ, ಅದರಲ್ಲೂ ವೀಕೆಂಡ್ ಗಳಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಗೌತಮಿ ಬಳಿ ಇರೋ ಒಂದೊಂದು ಸೀರೆಗಳೂ ಸಹ ಅದ್ಭುತವಾಗಿವೆ.
ಹೆಚ್ಚಾಗಿ ಮೈಸೂರ್ ಸಿಲ್ಕ್ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಗೌತಮಿಯವರ ಸೀರೆಯಲ್ಲಿ ಹೆಣ್ಮಕ್ಕಳು ಕೂಡ ಇಷ್ಟಪಟ್ಟಿದ್ದಾರೆ. ಆದರೆ ಈ ಸೀರೆಗಳು ಯಾವುದೂ ಕಡಿಮೆ ಬೆಲೆಯದ್ದಲ್ಲ ಅನ್ನೋದು ಗೊತ್ತಾ/
ಗೌತಮಿ ಬಿಗ್ ಬಾಸ್ ಮನೆಯಲ್ಲಿ ಉಟ್ಟಿರುವಂತಹ ಕಡು ನೀಲಿ ಬಣ್ಣದ, ಮೈ ಮೇಲೆ ಗೋಲ್ಡನ್ ಫ್ಲೋರಲ್ ವರ್ಕ್ ಇರುವಂತಹ ಸೀರೆಯ ಬೆಲೆ 10,500 ರೂಪಾಯಿಗಳು.
ಗೌತಮಿ ಜಾಧವ್ ಧರಿಸಿದ್ದ ತಿಳಿ ನೇರಳೆ ಬಣ್ಣದ ಪ್ಲೈನ್ ಮೈಸೂರ್ ಕ್ರೇಪ್ ಸಿಲ್ಕ್ ಸೀರೆಯ ಬೆಲೆ 10,800 ರೂಪಾಯಿಗಳು.
ದೊಡ್ಮನೆಯಲ್ಲಿ ಗೌತಮಿ ಒಂದು ಬಾರಿ ಪಿಸ್ತಾ ಹಸಿರು ಬಣ್ಣದ ಸಿಂಪಲ್ ಆಗಿರುವ ಕಾಟನ್ ಸೀರೆ ಧರಿಸಿದ್ದರು. ಇದರ ಬೆಲೆ 1100 ರೂಪಾಯಿ.
ಗೌತಮಿ ಧರಿಸಿದ್ದಂತಹ ಈ ಸಾಸಿವೆ ಹಳದಿ ಬಣ್ಣದ ಮೈಸೂರು ಕ್ರೇಪ್ ಸಿಲ್ಕ್ ಸೀರೆಯ ಬೆಲೆ ಬರೋಬ್ಬರಿ 12,300 ರೂಪಾಯಿಗಳು.
ಇನ್ನೊಂದು ನೀಲಿ ಜರಿ ಬಾರ್ಡರ್ ಇರುವಂತಹ ಮರೂನ್ ಬಣ್ಣದ ಮೈಸೂರ್ ಕ್ರೇಪ್ ಸಿಲ್ಕ್ ಸೀರೆ ಧರಿಸಿದ್ದು ಅದರ ಬೆಲೆ 5950 ರೂಪಾಯಿ.
ವೀಕೆಂಡ್ ನಲ್ಲಿ ಗೌತಮಿ ಉಟ್ಟಿದ್ದಂತಹ ನೇರಳೆ ಬಣ್ಣ ಹಾಗೂ ತಿಳಿ ನೀಲಿ ಬಣ್ಣದ ಅದರ ಮೇಲೆ ಕಲರ್ಫುಲ್ ಫ್ಲೋರಲ್ ಡಿಸೈನ್ ಇರುವಂತಹ ಪ್ಯೂರ್ ಮೈಸೂರ್ ಕ್ರೇಪ್ ಸಿಲ್ಕ್ ಸೀರೆ ಬೆಲೆ 13,500 ರೂಪಾಯಿ.