Small Screen

Flying Passport ನಿಮಗೆ ಗೊತ್ತಿದೆ ಅಲ್ವಾ?

Flying Passport ಹೆಸರು ಸದ್ಯಕ್ಕಂತೂ ಯುವ ಕನ್ನಡಿಗರ ಬಾಯಲ್ಲಿ ಸದಾ ಕೇಳಿ ಬರುವಂತಹ ಜನಪ್ರಿಯ ಕನ್ನಡ ಟ್ರಾವೆಲ್ ವ್ಲೋಗರ್ ಹೆಸರು. 
 

Image credits: Instagram

ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯತೆ

ದೇಶ ವಿದೇಶಗಳನ್ನು ಸುತ್ತುತ್ತಾ, ಆ ದೇಶಗಳ ಆಚಾರ, ವಿಚಾರ, ಸಂಸ್ಕೃತಿ ಆಹಾರದ ಬಗ್ಗೆ ಮಾಹಿತಿ ನೀಡುವ ಈ ಜೋಡಿ, ತಮ್ಮ ಯೂಟ್ಯೂಬ್ ನಿಂದಾಗಿ ಕನ್ನಡಿಗರಿಗೆ ಚಿರಪರಿಚಿತ. 
 

Image credits: Instagram

95 ದೇಶಗಳನ್ನು ಸುತ್ತಿರುವ ಜೋಡಿ

ಪ್ರಪಂಚದಲ್ಲಿರುವ ಒಟ್ಟು 197 ದೇಶಗಳಲ್ಲಿ ಕನ್ನಡ ಬಾವುಟ ಹಾರಿಸುತ್ತೇವೆ ಎನ್ನುತ್ತಾ ಟ್ರಾವೆಲ್ ಆರಂಭಿಸಿದ ಜೋಡಿ, ಈಗಾಗಲೇ ಬರೋಬ್ಬರಿ 95 ದೇಶಗಳನ್ನು ಪರ್ಯಟನೆ ಮಾಡಿದ್ದಾರೆ. 
 

Image credits: Instagram

102 ದೇಶಗಳು ಬಾಕಿ

ಕೆಲಸದ ಜೊತೆ ಟ್ರಾವೆಲ್ ಕೂಡ ಮಾಡಿಕೊಂಡು, ಅದರ ಜೊತೆ ಜೊತೆಗೆ ವಿಡಿಯೋಗಳನ್ನು ಎಡಿಟ್ ಮಾಡಿ, ಅಪ್ ಲೋಡ್ ಮಾಡುವ ಈ ಜೋಡಿ ನೋಡೋಕೆ ಬಾಕಿ ಇರೋದು 102 ದೇಶಗಳು. 
 

Image credits: Instagram

ಕಿರಣ್ ಹಾಗೂ ಆಶಾ

ಫ್ಲೈಯಿಂಗ್ ಪಾಸ್‌ಪೋರ್ಟ್ ಹೆಸರಿನ ಯೂಟ್ಯೂಬ್ ಹಾಗೂ ಇತರ ಸೋಶಿಯಲ್ ಮೀಡಿಯಾ ಹೊಂದಿರುವ ಈ ಜೋಡಿಯ ನಿಜವಾದ ಹೆಸರು ಕಿರಣ್ ಹಾಗೂ ಆಶಾ. 
 

Image credits: Instagram

ವಿದೇಶಗಳ ಸಂಸ್ಕೃತಿ ಅನಾವರಣ

ಈ ಜೋಡಿ ಟ್ರಾವೆಲ್ ಮಾಡೋದರ ಜೊತೆಗೆ ಅಲ್ಲಿನ ಹವಾಮಾನ, ಆಚರಣೆ, ಆಹಾರ, ಸಂಸ್ಕೃತಿಯನ್ನು ಸಹ ಕನ್ನಡಿಗರಿಗೆ ಕನ್ನಡದಲ್ಲಿಯೇ ತಿಳಿಸಿಕೊಡುತ್ತಿದ್ದಾರೆ. 
 

Image credits: Instagram

14 ವರ್ಷದ ಟ್ರಾವೆಲ್ ಜರ್ನಿ

ಈ ಜೋಡಿಯ ಟ್ರಾವೆಲ್ ಜರ್ನಿ ಆರಂಭವಾಗಿ 14 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹಳೆಯ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. 
 

Image credits: Instagram

ಥ್ಯಾಂಕ್ಯೂ ಹೇಳಿದ ಜೋಡಿ

14 ವರ್ಷದ ಟ್ರಾವೆಲ್ ಜರ್ನಿಗೆ ಸಾಥ್ ನೀಡಿದ ಎಲ್ಲ ಅಭಿಮಾನಿಗಳಿಗೂ, ಪ್ರೀತಿ ಕೊಟ್ಟ ಎಲ್ಲಾ ಕನ್ನಡಿಗರಿಗೂ ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿ ಥ್ಯಾಂಕ್ಯೂ ತಿಳಿಸಿದೆ. 
 

Image credits: Instagram

ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ

ಈ ಜೋಡಿಗಳ ಇನ್’ಸ್ಟಾಗ್ರಾಂ ಖಾತೆಯಲ್ಲಿ ಮೂರುವರೆ ಲಕ್ಷ ಫಾಲೋವರ್ಸ್ ಇದ್ದಾರೆ. ಯುಟ್ಯೂಬ್‌ನಲ್ಲಿ 5.85 ಲಕ್ಷ ಸಬ್‌ಸ್ಕ್ರೈಬರ್ ಹೊಂದಿದ್ದಾರೆ. ಇಲ್ಲಿವರೆಗೆ ಬರೋಬ್ಬರಿ 370 ವಿಡಿಯೋಗಳನ್ನ ಹಾಕಿದ್ದಾರೆ. 
 

Image credits: Instagram

ಮೈಕೊರೆಯುವ ಚಳಿಯಲ್ಲಿ ಲಂಡನ್’ನಲ್ಲಿ ಕ್ರಿಸ್ಮಸ್ ಸಂಭ್ರಮಿಸಿದ ದೀಪಿಕಾ ದಾಸ್

ಬಿಗ್‌ಬಾಸ್‌ ಬಂದು ತಪ್ಪು ಮಾಡಿದೆ, ಚೈತ್ರಾ ಕುಂದಾಪುರ ಪಶ್ಚಾತಾಪಕ್ಕೆ ಕಾರಣವೇನು?

ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?

ಪುಟ್ಟ ಸಿಯಾ ಜೊತೆ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸಿದ ನಟಿ ಕಾವ್ಯಾ ಗೌಡ