Small Screen
ಬಿಗ್‌ಬಾಸ್ ಕನ್ನಡ 11ನೇ ಸೀಸನ್ ನಲ್ಲಿ ಓರ್ವ ಸ್ಪರ್ಧಿಗಾಗಿ ಇತರ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮೋಸ ಮಾಡಿತಾ ಎಂಬ ಅನುಮಾನ ಬಲವಾಗಿ ಹುಟ್ಟಿಕೊಂಡಿದೆ.
ಕ್ಯಾಪ್ಟೆನ್ಸಿ ಟಾಸ್ಕ್ ಎಲ್ಲರಿಗೂ ಮುಖ್ಯ. ಯಾಕೆಂದರೆ ಮನೆಯ ಕ್ಯಾಪ್ಟನ್ ಆಗಿ ಇಮ್ಯೂನಿಟಿ ಪಡೆದು ನಾಮಿನೇಶನ್‌ನಿಂದ ಪಾರಾಗಿ ಮನೆಯಲ್ಲಿ ಉಳಿದುಕೊಳ್ಳುವ ಒಂದೇ ಒಂದು ಅವಕಾಶವಾಗಿರುತ್ತದೆ.
ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತಿರುವ ಸಂದರ್ಭದಲ್ಲಿ ಅಚಾತುರ್ಯದಿಂದ ಆದ ತಪ್ಪನ್ನು ತಿಳಿಸದೇ ಬಿಗ್‌ಬಾಸ್ ಇತರ ಸ್ಪರ್ಧಿಗಳಿಗೆ ಮೋಸ ಮಾಡಿದೆ ಎಂಬ ಚರ್ಚೆ ಆರಂಭವಾಗಿದೆ.
ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಹೇಳಿದ ನಂಬರ್ ನಿಂದ ಬಾಲ್ ತೆಗೆದು ಮೀಸಲಿಟ್ಟ ಬುಟ್ಟಿಗೆ ಹಾಕಬೇಕಿತ್ತು.
ಬಿಗ್‌ಬಾಸ್ 9 ನಂಬರ್ ಬಾಲ್ ಬುಟ್ಟಿಗೆ ಹಾಕಲು ಸೂಚಿಸಲಾಗಿತ್ತು. ಆದರೆ ಭವ್ಯಾ ಗೌಡ 3 ನಂಬರ್ ನಿಂದ ಬಿದ್ದ ಬಾಲ್ ಅನ್ನು ಬುಟ್ಟಿಗೆ ಹಾಕಿ ಮುಂದಿನ ಹಂತಕ್ಕೆ ಆಯ್ಕೆಯಾದರು.
ಉಸ್ತುವಾರಿಗಳಿಗೆ ಕೂಡ ಭವ್ಯ ಯಾವ ಬಾಲ್ ಬುಟ್ಟಿಗೆ ಹಾಕಿದ್ರು ಎಂಬುದು ಸ್ಪಷ್ಟವಿಲ್ಲ.ಆದರೆ ಬಿಗ್‌ಬಾಸ್ ಕ್ಯಾಮಾರಾ ಕಣ್ಣಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಿಗ್‌ಬಾಸ್‌ಗಿಂತ ದೊಡ್ಡ ಉಸ್ತುವಾರಿ ಬೇರೊಂದಿಲ್ಲ.
ಭವ್ಯಾರ ಅಚಾತುರ್ಯವನ್ನು ಬಿಗ್‌ಬಾಸ್ ತೆಗೆದುಕೊಳ್ಳಲಿಲ್ಲ ಯಾಕೆ? ಬೇರೆ ಸ್ಪರ್ಧಿಗಳು ಕೂಡ ಕ್ಯಾಪ್ಟನ್ ಆಗಿ ಸೇವ್ ಆಗಬೇಕೆಂಬುವವರೇ ಅಲ್ವಾ? ಭವ್ಯಾ ಕ್ಯಾಪ್ಟನ್ಸಿಯಾಗೋ ಆಸೆ ಬಿಬಿಕೆಗೂ ಇತ್ತಾ ಎಂಬ ಚರ್ಚೆ ಆರಂಭವಾಗಿದೆ.
ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಭವ್ಯಾ ಅವರು ಟಾಪ್ 5 ಒಳಗೆ ಇರಲು ಬಿಗ್‌ಬಾಸ್ ಕೂಡ ಬಯಸುತ್ತಿದೆಯೇ ಎಂಬ ಅನುಮಾನ ಮೂಡಿದೆ ಎಂಬುದು ವೀಕ್ಷಕರ ಅಭಿಪ್ರಾಯ
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮೋಸ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಭವ್ಯಾಗಾಗಿ ಪ್ರಾಮಾಣಿಕ ಸ್ಪರ್ಧಿಗಳಿಗೆ ಮೋಸ ಮಾಡಿದೆ. ವೀಕೆಂಡ್‌ನಲ್ಲಿ ಸ್ಪಷ್ಟನೆಬೇಕೆಂದು ಒತ್ತಾಯಿಸಲಾಗುತ್ತಿದೆ
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭವ್ಯಾ, ತ್ರಿವಿಕ್ರಮ, ಧನರಾಜ್, ಮೋಕ್ಷಿತಾ ಮತ್ತು ರಜತ್ ಇದ್ದರು. ಕೊನೆಗೆ ಭವ್ಯಾ ಮತ್ತು ಧನ್‌ರಾಜ್ ಅವರಲ್ಲಿ ಭವ್ಯಾ ಗೆದ್ದರು.