ಬಿಗ್‌ಬಾಸ್ ಕನ್ನಡ 11 ಇನ್ನೇನು 4 ವಾರದಲ್ಲಿ ಮುಕ್ತಾಯ ಕಾಣಲಿದೆ. ಇದೇ ಸಮಯದಲ್ಲಿ ಅಚ್ಚರಿಯ ರೀತಿಯಲ್ಲಿ ಬಿಬಿಕೆ ಮನೆಗೆ ಕಾಲಿಟ್ಟ ಚೈತ್ರಾ ಕುಂದಾಪುರ ಈಗ ಪಶ್ಚಾತಾಪ ಪಡುತ್ತಿದ್ದಾರೆ.
Image credits: our own
ತಪ್ಪು ಮಾಡಿದ್ರಾ ಚೈತ್ರಾ
ಅತ್ಯಂತ ಖುಷಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚೈತ್ರಾ ಈಗ ನಾನು ತಪ್ಪು ಮಾಡಿದೆ ಎಂಬ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ.
Image credits: our own
ಮಂಕಾದ ಚೈತ್ರಾ
ಕಳೆದ ಕೆಲವು ದಿನಗಳಿಂದ ಚೈತ್ರಾ ಅವರು ಬಿಗ್‌ಬಾಸ್ ಮನೆಯಲ್ಲಿ ಮಂಕಾಗಿದ್ದಾರೆ. ಮಂಗಳವಾರದ ಎಪಿಸೋಡ್ ನಲ್ಲಿ ಕೂಡ ಚೈತ್ರಾ ಅತ್ತುಕೊಂಡು, ದೇವಿಯ ಮೊರೆ ಹೋಗಿದ್ದರು.
Image credits: our own
ಕಸಕ್ಕೆ ಹೋಲಿಸಿದ ಮನೆಮಂದಿ
ಭಾನುವಾರ ಎಪಿಸೋಡ್‌ನ ಟಾಸ್ಕ್‌ನಲ್ಲಿ ಮನೆಯಲ್ಲಿ ಇರಲು ಯೋಗ್ಯ ಅಲ್ವೇ ಅಲ್ಲ ಎಂದು ಕಸದ ಬುಟ್ಟಿಗೆ ಹಾಕುವ ಚಟುವಟಿಕೆಯಲ್ಲಿ ಎಲ್ಲರೂ ಕೂಡ ಚೈತ್ರಾ ಅವರನ್ನೇ ಟಾರ್ಗೆಟ್ ಮಾಡಿದ್ದರು.
Image credits: our own
ಈ ವೇದಿಕೆ ನನಗಲ್ಲ
ಎಂತಹದ್ದೇ ಸಂದರ್ಭ ಬಂದರೂ ಕುಗ್ಗದೆ ಮಾತಿಗೆ ಮಾತು ಕೊಟ್ಟ ಮಾತನಾಡುತ್ತಿದ್ದ ಚೈತ್ರಾ ಕಳೆದವಾರದ ಕಿಚ್ಚನ ಪಂಚಾಯಿತಿ ಬಳಿಕ ನನಗೆ ಈ ವೇದಿಕೆ ಅಲ್ಲ ಅಂತ ಎಂದು ಹೇಳಿಕೆ ನೀಡಿದ್ದಾರೆ.
Image credits: our own
ಭವ್ಯಾ ಬಳಿ ನೋವು ತೋಡಿಕೊಂಡ ಚೈತ್ರಾ
ಬಿಗ್‌ಬಾಸ್ ನನಗಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗೋರು ದೇಗುಲಕ್ಕೆ ಹೋಗಬೇಕು. ಪಬ್ಗೆ ಹೋಗೋರು ಪಬ್ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು.
Image credits: our own
ಮಾತು ಅನ್ನ ಕೊಟ್ಟಿದೆ
ಮನೆಯ ಪರಿಸ್ಥಿತಿಯನ್ನು ಎದುರಿಸಬೇಕೆಂದು ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಸಾಧ್ಯವಾಗುತ್ತಿಲ್ಲ. ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕು ಕೊಟ್ಟಿಯೆಂದು ಕಣ್ಣೀರು.
Image credits: our own
ಕಿಚ್ಚನ ಕ್ಲಾಸ್
ಇದಕ್ಕೆ ಭವ್ಯಾ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇನೆ ಎನ್ನುವುದು ನಿಮ್ಮ ತಪ್ಪು ನಿರ್ಧಾರ ಎಂದಿದ್ದಾರೆ. ಇನ್ನು ಕಿಚ್ಚನ ಶನಿವಾರದ ಪಂಚಾಯಿತಿಯಲ್ಲಿ ಕೂಡ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು.