ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸಿ, ತಮ್ಮ ಒಳ್ಳೆಯತನದಿಂದಲೇ ಜನರ ಮನಸನ್ನು ಗೆದ್ದು, ಆರಂಭದಲ್ಲೇ ಎಲಿಮಿನೇಟ್ ಆಗಿ ಹೊರ ಬಂದಿರುವ ಸ್ಪರ್ಧಿ ಅನುಷಾ ರೈ.
Image credits: instagram
ಅಭಿಮಾನಿಗಳ ಪ್ರೀತಿ
ಅನುಷಾ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ನಟಿಯ ಫಾಲೋವರ್ಸ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
Image credits: Instagram
ಸೋಶಿಯಲ್ ಮೀಡಿಯಾ
ಅನುಷಾ ರೈ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೊಸ ಹೊಸ ಫೋಟೊ ಶೂಟ್ ಮೂಲಕ ನಟಿ ಸುದ್ದಿಯಲ್ಲಿರುತ್ತಾರೆ. ಈ ಬಾರಿಯೂ ಹೊಸದೊಂದು ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.
Image credits: Instagram
ಪ್ರಿನ್ಸೆಸ್ ಲುಕ್
ಅನುಷಾ ರೈ ಆಫ್ ವೈಟ್ ಬಣ್ಣದ ಗ್ಲಿಟರಿಂಗ್ ಮರ್ಮೈಡ್ ಲಾಂಗ್ ಸ್ಕರ್ಟ್ ಹಾಗೂ ಟ್ಯೂಬ್ ಟಾಪ್ ಧರಿಸಿದ್ದು, ಪ್ರಿನ್ಸೆಸ್ ಥರ ಕಾಣಿಸ್ತಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Image credits: Instagram
ನಾನು ಹುಡುಗಿ ಮಾತ್ರ ಅಲ್ಲ
ಅನುಷಾ ಈ ಫೋಟೊಗಳ ಜೊತೆಗೆ ’m not just a girl I’m a PRINCESS ಎಂದು ಕ್ಯಾಪ್ಶನ್ ಕೊಟ್ಟಿದ್ದು, ಅದರಂತೆ ಅಪ್ಸರೆಯಂತೆ ಕಾಣಿಸ್ತಿರೋದಂತೂ ನಿಜಾ.
Image credits: Instagram
ಐಶ್ವರ್ಯ ರೈ ಏನೂ ಇಲ್ಲ
ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ನಿಮ್ಮ ಸೌಂದರ್ಯದ ಮುಂದೆ ಐಶ್ವರ್ಯ ರೈ ನಿಮ್ಮ ಮುಂದೆ ಏನು ಇಲ್ಲಾ ಬಿಡಿ ಅಕ್ಕ ಎಂದಿದ್ದಾರೆ. ಮತ್ತೊಬ್ಬರು ಇಷ್ಟೊಂದು ಚೆಂದ ಒಳ್ಳೇದಲ್ಲ ಅಂತಾನೂ ಹೇಳಿದ್ದಾರೆ.
Image credits: Instagram
ಬಾಲಿವುಡ್ ದಿವಾ
ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, ಬಾಲಿವುಡ್ ಹೀರೋಯಿನ್ ಥರ ಕಾಣಿಸ್ತೀರಿ ಎಂದಿದ್ದಾರೆ. ಅದಕ್ಕೆ ಅನುಷಾ ಉತ್ತರಿಸಿ, ನಂಗೂ ಹಾಗೇ ಅನಿಸ್ತಿದೆ, ತುಂಬಾನೆ ಚೆನ್ನಾಗಿ ಫೋಟೊ ಶೂಟ್ ಮಾಡಿದ್ದಾರೆ ಎಂದಿದ್ದಾರೆ.
Image credits: Instagram
ಸಿಕ್ಕಾಪಟ್ಟೆ ಫ್ಯಾನ್ಸು
ಇನ್ನೊಬ್ಬ ಅಭಿಮಾನಿ ನೀವು ಯಾವ ಡ್ರೆಸ್ ಹಾಕಿದ್ರು ಚೆನ್ನಾಗಿ ಕಾಣಿಸುತ್ತೀರಿ. ನಮಗೆ ನಿಮ್ಮನ್ನ ಸೀರೆಯಲ್ಲಿ ನೋಡೋಕೆ ಇಷ್ಟ. ನಿಮ್ಮ ಗುಣ, ಸಹಾಯ, ಮಾತು, ನೀವು ಕೊಡುವ ಗೌರವ, ತುಂಬಾ ಇಷ್ಟ ಆಯ್ತು ಎಂದಿದ್ದಾರೆ.