Small Screen
ಸ್ಯಾಂಡಲ್ ವುಡ್ ನಟಿ ಅನುಷಾ ರೈ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಜನಪ್ರಿಯತೆ ಪಡೆದದ್ದು ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗುವ ಮೂಲಕ.
ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಅನುಷಾ ರೈ ತಮ್ಮ ನಡವಳಿಕೆ ಹಾಗೂ ಸೌಂದರ್ಯದಿಂದಲೇ ಯುವಕರ ಮನ ಗೆದ್ದಿದ್ದರು. ಇತ್ತೀಚೆಗಷ್ಟೇ ನಟಿ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದರು.
ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದ ಅನುಷಾ ರೈಗೆ ಗ್ರ್ಯಾಂಡ್ ವೆಲ್ ಕಂ ಸಿಕ್ಕಿತ್ತು. ಅಷ್ಟೇ ಅಲ್ಲದೇ ಹಲವು ಖಾಸಗಿ ಕಾರ್ಯಕ್ರಮಗಳಲ್ಲೂ ನಟಿ ಭಾಗವಹಿಸಿದ್ದರು. ಜನರ ಪ್ರೀತಿಯನ್ನು ಕಣ್ತುಂಬಿಕೊಂಡಿದ್ದರು ನಟಿ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅನುಷಾ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಂಡಿದ್ದರು. ಲಂಗ ದಾವಣಿ, ಸೀರೆಯಲ್ಲಿ ರಂಭೆಯಂತೆ ಕಾಣಿಸುತ್ತಿದ್ದ ಚೆಲುವೆ.
ಇತ್ತೀಚಿನ ದಿನಗಳಲ್ಲಿ ಅನುಷಾ ರೈ ದೇಶ, ವಿದೇಶ ಟೂರ್ ಮಾಡುತ್ತಾ, ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಹಾಂಗ್ ಕಾಂಗ್ ನಲ್ಲಿದ್ದು, ಅಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಸ್ತಿ ಮಾಡ್ತಿದ್ದಾರೆ ನಟಿ.
ಚೀನಾದ ಭಾಗವಾಗಿರುವ ಹಾಂಗ್ ಕಾಂಕ್ ನಲ್ಲಿ ಸದ್ಯ ಅನುಷಾ ಇದ್ದು, ಇತ್ತೀಚೆಗೆ ಅಲ್ಲಿಂದಲೇ ವಿಡೀಯೋ ಮಾಡಿ, ಭಾರತದಲ್ಲಿ ಕೋಲಾಹಲ ಎಬ್ಬಿಸಿದ ಎಚ್ ಎಂಪಿವಿ ವೈರಸ್ ಬಗ್ಗೆ ಮಾತನಾಡಿದ್ದರು.
ಚೀನಾದಲ್ಲಿ ಅಂಥದ್ದೇನು ಸಮಸ್ಯೆ ಇಲ್ಲ, ಇಲ್ಲಿ ಎಲ್ಲವೂ ನಾರ್ಮಲ್ ಆಗಿದೆ. ನನಗೆ ಎಲ್ಲೂ ಪ್ಯಾಂಡಮಿಕ್ ಕಾಣಿಸಿಲ್ಲ. ಭಾರತೀಯರು ಎಲ್ಲಿ ಹೋದರೂ ಸುರಕ್ಷಿತವಾಗಿರುತ್ತಾರೆ ಎಂದಿದ್ದರು.
ಇದೀಗ ಅನುಷಾ ಡಿಸ್ನಿ ಲ್ಯಾಂಡ್ ಗೆ ಭೇಟಿ ಕೊಟ್ಟಿದ್ದು, ಡಿಸ್ನಿ ಲ್ಯಾಂಡ್ ಮುಂದೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟು ಫೋಟೊ ಕ್ಲಿಕ್ ಮಾಡಿಕೊಂಡಿದ್ದು, ನಟಿ ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ.
ಅನುಷಾ ರೈ, ಇನ್ನೊಬ್ಬ ಸಿನಿಮಾ ತಾರೆ ಹಾಗೂ ಬಿಗ್ ಬಾಸ್ ಕಂಟೆಸ್ಟಂಟ್ ಆಗಿದ್ದ ಪ್ರಿಯಾಂಕಾ ತಿಮ್ಮೇಶ್ ಜೊತೆ ಡಿಸ್ನಿ ಲ್ಯಾಂಡ್ ಗೆ ತೆರಳಿದ್ದಾರೆ. ತಮ್ಮ ಫೊಟೊಗಳಿಗೆ ಕರ್ಟಸಿಯಲ್ಲಿ ಪ್ರಿಯಾಂಕಾ ಹೆಸರು ಕಾಣಬಹುದು.
ಅನುಷಾ ಚೀನಾದಲ್ಲಿರೋದರಿಂದ ಹಾಗೂ, ಭಾರತೀಯರಲ್ಲಿ ಆತಂಕ ಮನೆಮಾಡಿರೋದರಿಂದ ನಟಿಗೆ ಅಭಿಮಾನಿಗಳು ಸಾಧ್ಯವಾದಷ್ಟು ಸುರಕ್ಷಿತವಾಗಿರಿ, ಮಾಸ್ಕ್ ಧರಿಸಿ ಎಂದಿದ್ದಾರೆ. ಎಲ್ಲರಿಗೂ ಅನುಷಾ ಧನ್ಯವಾದ ತಿಳಿಸಿದ್ದಾರೆ.