Small Screen
ಕನ್ನಡ ಕಿರುತೆರೆಯಲ್ಲಿ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಗುರುತಿಸಿಕೊಂಡ ನಟಿ ಸಿರಿಜಾ. ತಮ್ಮ ಮುಗ್ಧ ನಾಯಕಿಯ ಪಾತ್ರದಿಂದಲೇ ಮನೆಮಾತಾಗಿದ್ದಾರೆ.
ನಟಿ ಸಿರಿಜಾ ಅವರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದು, ರಂಗೋಲಿ, ಮನೆಯೊಂದು ಮೂರು ಬಾಗಿಲು ಹಾಗೂ ಬದುಕು ಇವರು ನಟಿಸಿದ ಪ್ರಮುಖ ಸೀರಿಯಲ್ ಗಳು.
ಸಿರಿಜಾ ಅವರು 9ನೇ ತರಗತಿಯಲ್ಲಿರಬೇಕಾದ ತಂದೆಯ ಸ್ನೇಹಿತರ ಮೂಲಕ ನಟಿಸಲು ಅವಕಾಶ ಪಡೆದುಕೊಂಡ ಇವರು, ಅಂಬಿಕಾ ಸೀರಿಯಲ್ ನಲ್ಲಿ ಮೊದಲು ನಟಿಸಿದರು.
ಉದಯ ಟಿವಿಯ ಜನಪ್ರಿಯ ರಂಗೋಲಿ ಸೀರಿಯಲ್ ನಲ್ಲಿ ನಟಿಸುವಾಗ ಸಿರಿಯವರು ಪಿಯುಸಿಯಲ್ಲಿ ಓದುತ್ತಿದ್ದರು.
ಸಿರಿಜಾ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಮತ್ತು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದರು. ತೆಲುಗು ಸಿನಿಮಾಗಳಲ್ಲೂ ಸಹ ನಟಿಸಿದ್ದ ಬಹುಭಾಷಾ ನಟಿ ಸಿರಿ.
ಸ್ಯಾಂಡಲ್ ವುಡ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಸಿರಿ. ಸುದೀಪ್ ಜೊತೆಗೆ ಚಂದು ಸಿನಿಮಾದಲ್ಲಿ ನಟಿಸಿದ್ದು, ಜನಪ್ರಿಯತೆ ತಂದುಕೊಟ್ಟಿತ್ತು.
ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿದ್ದ ಸಿರಿಜಾ, ತಮ್ಮ ಒಳ್ಳೆಯತನ, ನಗು, ಆಟದ ಮೂಲಕ ಗಮನ ಸೆಳೆದಿದ್ದರು. ಸಹ ಸ್ಪರ್ಧಿಗಳ ಮೆಚ್ಚಿನ ಅಕ್ಕ, ವೀಕ್ಷಕರ ಫೇವರಿಟ್ ಸ್ಪರ್ಧಿಯಾಗಿದ್ದರು.
ವರ್ಷ 35 ಕಳೆದಿದ್ದರೂ ಮದುವೆಯಾಗದೇ ಇದ್ದ ಸಿರಿಜಾ, ಬಿಗ್ ಬಾಸ್ ನಿಂದ ಬಂದ ಸ್ವಲ್ಪ ಸಮಯದಲ್ಲಿ ದಿಢೀರ್ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.
ಮದುವೆಗೆ ಸಿಂಪಲ್ ಆಗಿ ರೆಡಿಯಾಗಿದ್ದ ನಟಿ ಸಿರಿಜಾ ಇದೀಗ, ವಧುವಿನಂತೆ ಸಿಂಗರಿಸಿಕೊಂಡು ವಿವಿಧ ರೀತಿಯಲ್ಲಿ ಪೋಸ್ ಕೊಡುತ್ತಾ, ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
ಸಿರಿ ಪಿಂಕ್ ಬಣ್ಣದ ಜರತಾರಿ ಸೀರೆಯುಟ್ಟು, ಕುತ್ತಿಗೆಯಲ್ಲಿ ದೊಡ್ಡದಾದ ಹಾರ, ಸೊಂಟದಲ್ಲಿ ಡಾಬು, ಕಿವಿಯಲ್ಲಿ ಜುಮುಕಿ, ಮುಂದಾಲೆ ಧರಿಸಿ ಮದುಮಗಳಂತೆ ಮುದ್ದಾಗಿ ಕಾಣಿಸಿಕೊಂಡಿದ್ದು, ಈ ಫೋಟೊ ವೈರಲ್ ಆಗ್ತಿದೆ.