Small Screen
ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅನಾರೋಗ್ಯ ಸಮಸ್ಯೆಯಿಂದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸ್ವತಃ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ, ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ, ಆಸೆ ಧಾರಾವಾಹಿಗಳಲ್ಲಿ ನಟಿಸಿದ್ದ, ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ ನಟಿ.
ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಟ್ಟಿರುವ ಅಮೃತಾ ತಾವು ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿರೋದಾಗಿ ತಿಳಿಸಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿನ ಫೋಟೊ ಕೂಡ ಶೇರ್ ಮಾಡಿದ್ದಾರೆ.
ನಮಸ್ಕಾರ ಎಲ್ಲರಿಗೂ. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಗಿದೆ ಏನಾಯ್ತು ಅಂತ. ನಂಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್ಟ್ರೀಮ್ ಲೆವೆಲ್ಗೆ ಹೋಗಿದೆ ಇನ್ಫೆಕ್ಷನ್.
ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಳೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮ್ಗೆ ವಿಧಿಯಿಲ್ಲ. ಶೂಟಿಂಗ್ ಸೆಟ್ನಲ್ಲಿ ರೆಸ್ಟ್ರೂಮ್ ಯೂಸ್ ಮಾಡ್ಬೇಕಾಗುತ್ತದೆ.
ನಮ್ಮ ಶೂಟಿಂಗ್ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ಮುಖ್ಯ. ನಾನೀಗ ಹುಷಾರಾಗುತ್ತಿದ್ದೇನೆ ಎಂದಿದ್ದಾರೆ. 3 ದಿನಗಳ ಹಿಂದೆ ನಟಿ ಮಾಹಿತಿ ನೀಡಿದ್ದು, ಇದೀಗ ಡಿಸ್ಚಾರ್ಚ್ ಆಗಿರುವ ಸಾಧ್ಯತೆ ಇದೆ.
ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ, ನಮ್ಮನೆ ಯುವರಾಣಿ ಖ್ಯಾತಿ ರಾಘವೇಂದ್ರ ಜೊತೆ ಅಮೃತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮುದ್ದಾದ ಮಗಳು ಇದ್ದಾರೆ. ಸದ್ಯ ನಟಿಯ ಆರೋಗ್ಯ ಸುಧಾರಿಸಿದೆ ಎನ್ನುವ ಮಾಹಿತಿ ಇದೆ.