Travel
ಆಳಿಮಲ ಶಿವ ದೇವಾಲಯವು ತಿರುವನಂತಪುರಂ ಬಳಿಯ ವಿಜಿಂಜಂನ ಪುಲಿಂಕುಡಿ ತೀರದಲ್ಲಿದೆ. ಇದನ್ನು ಶ್ರೀ ನಾರಾಯಣ ಗುರುಗಳ ದೃಷ್ಟಿಕೋನದಂತೆ ಸ್ಥಾಪಿಸಲಾಗಿದೆ.
ಆಳಿಮಲದಲ್ಲಿ ಸುಂದರವಾದ ಅರಬ್ಬಿ ಸಮುದ್ರದ ತೀರದಲ್ಲಿ ಈ ಶಿವದೇವಾಲಯವಿದ್ದು, ಅಲ್ಲೇ ಸಮೀಪದಲ್ಲಿ ಈ ಭವ್ಯವಾದ ಶಿವನ ಶಿಲ್ಪವಿದೆ.
ಗಂಗಾಧರೇಶ್ವರ ರೂಪದಲ್ಲಿರುವ ಶಿವನ ಸುಂದರವಾದ ಕಾಂಕ್ರೀಟ್ ಶಿಲ್ಪವು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ.
ಈ ದೇವಾಲಯವು ಕೇರಳದ ಅತಿ ಎತ್ತರದ ಶಿವ ಪ್ರತಿಮೆಯಾಗಿದ್ದು ಇದು 58 ಅಡಿ ಎತ್ತರವಿದೆ.
ನಾಲ್ಕು ತೋಳುಗಳನ್ನು ಹೊಂದಿರುವ ಶಿವ, ತನ್ನ ಜಡೆಯಲ್ಲಿ ಗಂಗೆಯನ್ನು ಕೂರಿಸಿಕೊಂಡಿದ್ದಾನೆ.
ಈ ಶಿಲ್ಪವು ಡಮರು ಮತ್ತು ತ್ರಿಶೂಲವನ್ನು ಹೊಂದಿದೆ. ಯೋಗಿಗಳುಈ ಪ್ರತಿಮೆ ನಿಂತಿರುವ ಸ್ಥಳದಲ್ಲಿ ಧ್ಯಾನ ಮಾಡಿದ್ದಾರೆ ಎಂದು ದಂತಕಥೆ ಹೇಳುತ್ತದೆ.
ಆಳಿಮಲದವರಾದ ಪಿ ಎಸ್ ದೇವದತ್ತನ್ ಅವರಿಂದ ಈ ಬೃಹತ್ ಪ್ರತಿಮೆ ನಿರ್ಮಾಣಗೊಂಡಿದೆ. 2014ರಲ್ಲಿ ನಿರ್ಮಾಣ ಆರಂಭವಾಗಿದ್ದು, ಡಿಸೆಂಬರ್31, 2022ರಿಂದ ಜನರ ವೀಕ್ಷಣೆಗೆ ಮುಕ್ತಾವಾಗಿದೆ..
ಇಲ್ಲಿ ಮುಖ್ಯ ದೇವತೆ ಶಿವನಾಗಿದ್ದು, ಗಣಪತಿ ಮತ್ತು ಪಾರ್ವತಿ ಉಪದೇವತೆಗಳಾಗಿವೆ.
ಈ ದೇವಾಲಯವು ಕೇರಳ ಪ್ರವಾಸೋದ್ಯಮದ ಯಾತ್ರಾ ಪ್ರವಾಸೋದ್ಯಮ ಸರ್ಕ್ಯೂಟ್ನ ಭಾಗವಾಗಿದೆ ಮತ್ತು ಎಲ್ಲಾ ಧರ್ಮಗಳಿಗೂ ಮುಕ್ತವಾಗಿದೆ.
ತಿರುವನಂತಪುರಂ-ಕನ್ಯಾಕುಮಾರಿ ರಸ್ತೆಯಲ್ಲಿ ವಿಜಿಂಜಂ-ಪೂವರ್ ಮಾರ್ಗದ ಮೂಲಕ ಸುಲಭವಾಗಿ ಇಲ್ಲಿಗೆ ತಲುಪಬಹುದು.