ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್, Meta AI chatbot ಪರಿಚಯಿಸಿದೆ! ಯಾರೆಲ್ಲ ಬಳಸಬಹುದು?

By Kannadaprabha News  |  First Published Apr 13, 2024, 6:04 AM IST

ವಿಶ್ವದ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್‌ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್‌ಬೋಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ.


ನವದೆಹಲಿ (ಏ.13): ವಿಶ್ವದ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್‌ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್‌ಬೋಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ.

ವಾಟ್ಸಾಪ್‌ ಐಕಾನ್‌ ಕೆಳಗಡೆ ಬರುವ ವಾಟ್ಸಾಪ್‌ ಚಾಟ್‌ ಫೀಡ್‌ನಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಚಾಟ್ ಮಾಡುವಂತೆ ಚಾಟ್‌ ಮಾಡಬಹುದು.

Latest Videos

undefined

 

ವಾಟ್ಸಾಪ್ ಡೆಸ್ಕ್‌ಟಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್‌: ಸ್ಟೇಟಸ್‌ ಅಪ್ಡೇಟ್‌ ಮಾಡಲು ಇನ್ಮುಂದೆ ಮೊಬೈಲೇ ಬೇಕಿಲ್ಲ!

ಚಾಟ್‌ಬೋಟ್‌ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಅವುಗಳ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು, ಕಥೆ ಹೇಳು ಅಥವಾ ಜೋಕ್ಸ್‌ ಎನ್ನಬಹುದು.

ಕೆಲ ತಿಂಗಳ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಆಯ್ದ ಬಳಕೆದಾರರಿಗೆ ಪ್ರಾಯೋಗಿಕವಾಗಿ ಈ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಇದೀಗ ಭಾರತ ಸೇರಿದಂತೆ ಇನ್ನಷ್ಟು ದೇಶಗಳಲ್ಲಿ ವ್ಯಾಪಕ ಪ್ರಮಾಣದ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ.

 

ವಾಟ್ಸಪ್‌ ಸ್ಟೇಟಸ್‌ಗೆ ಇನ್ಮುಂದೆ ಎಚ್‌ಡಿ ಫೋಟೋ, ವಿಡಿಯೋ ಶೇರ್‌ ಮಾಡಲು ಹೀಗೆ ಮಾಡಿ

click me!