ಹೊಸ ವರ್ಷದಲ್ಲಿ ಮುಕೇಶ್ ಅಂಬಾನಿ ಬಿಗ್‌ ಬಿಸಿನೆಸ್ ಪ್ಲಾನ್‌ , AI ಬಳಸಿ ಕೋಟಿ ಕೋಟಿ ಗಳಿಸುತ್ತಾ ಅಂಬಾನಿ ಗ್ರೂಪ್‌!

By Vinutha Perla  |  First Published Dec 29, 2023, 11:13 AM IST

ಏಷ್ಯಾದ ಹಾಗೂ ಭಾರತದ ಬಿಲಿಯನೇರ್‌ಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಹಲವು ಐಷಾರಾಮಿ ಬಂಗಲೆ, ಕಾರುಗಳನ್ನು ಹೊಂದಿದ್ದಾರೆ 2024ರಲ್ಲೂ ಬಿಸಿನೆಸ್‌ ಪ್ರಾಫಿಟ್ ಹೆಚ್ಚಿಸಿಕೊಳ್ಳಲು ಅಂಬಾನಿ ಹಲವು ಪ್ಲಾನ್‌ಗಳನ್ನು ಮಾಡ್ಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.


ಏಷ್ಯಾದ ಹಾಗೂ ಭಾರತದ ಬಿಲಿಯನೇರ್‌ಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಹಲವು ಐಷಾರಾಮಿ ಬಂಗಲೆ, ಕಾರುಗಳನ್ನು ಹೊಂದಿದ್ದಾರೆ. ಮುಕೇಶ್ ಅಂಬಾನಿ ಬರೋಬ್ಬರಿ 829514 ಕೋಟಿ ನಿವ್ವಳ ಆಸ್ತಿಯೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. ದೇಶದ ಅತೀ ಹೆಚ್ಚು ಲಾಭದಾಯಕ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಬಹು-ಶತಕೋಟಿ ಡಾಲರ್ ಅಂಗಸಂಸ್ಥೆಗಳನ್ನು ಹೊಂದಿದೆ. ಅಂಬಾನಿ ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಹೊಸ ಹೊಸ ಉದ್ಯಮವನ್ನು ಆರಂಭಿಸುತ್ತಲೇ ಇರುತ್ತಾರೆ. 2024ರಲ್ಲೂ ಬಿಸಿನೆಸ್‌ ಪ್ರಾಫಿಟ್ ಹೆಚ್ಚಿಸಿಕೊಳ್ಳಲು ಅಂಬಾನಿ ಹಲವು ಪ್ಲಾನ್‌ಗಳನ್ನು ಮಾಡ್ಕೊಂಡಿದ್ದಾರೆ. 

ರಿಲಯನ್ಸ್ ಇಂಡಸ್ಟ್ರೀಸ್ (RIL)ನ ಬಿಲಿಯನೇರ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೊಸ ವರ್ಷದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ್ನು ಪ್ರಬಲ ಉದ್ಯಮವಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕೃತಕ ಬುದ್ಧಿಮತ್ತೆಯ (AI) ಅಳವಡಿಕೆಯನ್ನು 2024ರಲ್ಲಿ ಕಂಪನಿಯ ಗುರಿಯಾಗಿರಿಸಲು ಅಂಬಾನಿ ಗ್ರೂಪ್‌ ಮುಂದಾಗಿದೆ.

Tap to resize

Latest Videos

undefined

ಬಿಲಿಯನೇರ್ ಮುಕೇಶ್ ಅಂಬಾನಿ ಮಗನನ್ನೇ, ಸ್ನೇಹಿತರು 'ಭಿಕಾರಿ' ಅಂದು ಕರೆದಿದ್ಯಾಕೆ?

ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾದ ರಿಲಯನ್ಸ್ ಗ್ರೂಪ್‌
RILನ ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ 91ನೇ ಜನ್ಮ ವಾರ್ಷಿಕೋತ್ಸವದಂದು ಉದ್ಯೋಗಿ (Employees)ಗಳನ್ನು ಉದ್ದೇಶಿಸಿ ಮಾತನಾಡಿದಾಗ ಮುಕೇಶ್ ಅಂಬಾನಿ, 'ಕಂಪೆನಿಯನ್ನು ವಿಶ್ವದ ಅಗ್ರ ಹತ್ತು ವ್ಯಾಪಾರ (Business) ಸಂಘಟಿತ ಸಂಸ್ಥೆಗಳಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು. ಇಂದು, ವ್ಯಾಪಾರಕ್ಕಾಗಿ ದೇಶೀಯ ಮತ್ತು ಜಾಗತಿಕ ಪರಿಸರವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ರಿಲಯನ್ಸ್ ಸಹ ಹೊಸ ತಂತ್ರಜ್ಞಾನ (Technology)ಗಳನ್ನು ಅಳವಡಿಸಿಕೊಳ್ಳಲು ಬಯಸುತ್ತದೆ' ಎಂದು ತಿಳಿಸಿದರು.

'ಶಾಶ್ವತ ರೀಚಾರ್ಜ್ ಬ್ಯಾಟರಿ' ಎಂದು ತಮ್ಮ ಕಾರ್ಯಪಡೆಯನ್ನು ಉಲ್ಲೇಖಿಸಿದ ಮುಖೇಶ್ ಅಂಬಾನಿ, '2024ರಲ್ಲಿ AIಯನ್ನು ಉದ್ಯಮವನ್ನಾಗಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ರಿಲಯನ್ಸ್ ಮುಂಬೈನಲ್ಲಿ ಸಣ್ಣ ಜವಳಿ ಉತ್ಪಾದನಾ ಘಟಕವಾಗಿ ತನ್ನ ಆರಂಭವಾಯಿತು. ನಂತರ ಪೆಟ್ರೋಕೆಮಿಕಲ್ಸ್‌ಗೆ ಶಿಫ್ಟ್ ಆಯಿತು. ಇದು ವಿಶ್ವದ ಅತಿದೊಡ್ಡ ಏಕ-ಸ್ಥಳ ತೈಲ ಸಂಸ್ಕರಣಾ ಸಂಕೀರ್ಣವೆಂದು ಗುರುತಿಸಿಕೊಂಡಿದೆ. 

ಭಾರತದ ಮನರಂಜನಾ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಗೆ ಸಹಿ ಹಾಕಿದ ಅಂಬಾನಿ ಮತ್ತು ಡಿಸ್ನಿ ಸ್ಟಾರ್!

2005ರಲ್ಲಿ ರಿಲಯನ್ಸ್ ಚಿಲ್ಲರೆ ವಲಯವನ್ನು ಪ್ರವೇಶಿಸಿತು. ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ನಿರ್ವಾಹಕರಾದರು. 2016ರಲ್ಲಿ, ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಯನ್ನು ಪ್ರಾರಂಭಿಸಿತು, ಇದು ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಎಂದು ಗುರುತಿಸಿಕೊಂಡಿದೆ. ರಿಲಯನ್ಸ್ ದೀರ್ಘಕಾಲಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದರು.

ತಮ್ಮ ಮೂವರು ಮಕ್ಕಳನ್ನು ಉಲ್ಲೇಖಿಸಿದ ಮುಕೇಶ್ ಅಂಬಾನಿ, 'ರಿಲಯನ್ಸ್‌ನ ಭವಿಷ್ಯವು ಆಕಾಶ್, ಇಶಾ, ಅನಂತ್ ಮತ್ತು ಅವರ ಪೀಳಿಗೆಗೆ ಸೇರಿದ್ದು'  ಎಂದು ಹೇಳಿದರು. ಮಾತ್ರವಲ್ಲ,  ಮುಕೇಶ್ ಅಂಬಾನಿ ತಮ್ಮ ಉದ್ಯೋಗಿಗಳಿಗೆ ತಮ್ಮನ್ನು ತಾವು ಅಪ್‌ಡೇಟ್ ಮಾಡಿಕೊಳ್ಳಲಿ, ಹೊಸ-ಯುಗದ ತಂತ್ರಜ್ಞಾನವನ್ನು ಕಂಪೆನಿಯಲ್ಲಿ ಬಳಸಿಕೊಳ್ಳಲು ಮಾರ್ಗದರ್ಶನ ನೀಡಿದರು. 'ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ, ಪ್ರತಿಭೆ ಮತ್ತು ಹಣದ ಜೊತೆಗೆ ಡೇಟಾವು ಉತ್ಪಾದನೆಯ ಹೊಸ ಅಂಶವಾಗಿದೆ. ಉತ್ಪಾದಕತೆ ಮತ್ತು ದಕ್ಷತೆಯಲ್ಲಿ ಕ್ವಾಂಟಮ್ ಜಿಗಿತವನ್ನು ಸಾಧಿಸಲು AI ಅನ್ನು ಸಕ್ರಿಯಗೊಳಿಸುವ ಮೂಲಕ ಡೇಟಾವನ್ನು ಬಳಸುವಲ್ಲಿ ನಾವು ಮುಂಚೂಣಿಯಲ್ಲಿರಬೇಕು' ಎಂದು ತಿಳಿಸಿದರು. 

click me!