ಜಿಯೋದಿಂದ ಹೊಸ ರೀಚಾರ್ಜ್‌ ಪ್ಲಾನ್‌, ಅತೀ ಕಡಿಮೆ ಬೆಲೆಗೆ ಅನ್‌ಲಿಮಿಡೆಟ್‌ 5G ಡೇಟಾ, 14 OTT ಸಬ್‌ಸ್ಕ್ರಿಪ್ಶನ್‌

By Vinutha Perla  |  First Published Dec 15, 2023, 11:48 AM IST

ಮುಕೇಶ್ ಅಂಬಾನಿ ಒಡೆತನದ ಜಿಯೋ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಅನಿಯಮಿತ ಕರೆಗಳು, 5G ಡೇಟಾ, 14 OTT subscription ಅತೀ ಕಡಿಮೆ ಬೆಲೆಗೆ ಲಭ್ಯವಿರಲಿದೆ. ಆ ಬಗ್ಗೆ ಹೆಚ್ಚಿನ ಇಲ್ಲಿದೆ ಮಾಹಿತಿ.


ಮುಕೇಶ್ ಅಂಬಾನಿ, ದೇಶದ ಟೆಲಿಕಾಂ ಕ್ಷೇತ್ರ ಮತ್ತು ಭಾರತೀಯರು ಇಂಟರ್ನೆಟ್ ಬಳಕೆಯ ರೀತಿಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹಲವಾರು ಕೈಗೆಟುಕುವ ಯೋಜನೆಗಳನ್ನು ಪ್ರಾರಂಭಿಸಿದೆ. ನಿರ್ದಿಷ್ಟ ಪ್ರೇಕ್ಷಕರ ಬಳಕೆ ಅಗತ್ಯಗಳನ್ನು ಪೂರೈಸಲು ಹೊಸ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಜನಸಾಮಾನ್ಯರಿಗೆ ನರವಾಗಿದೆ. ರಿಲಯನ್ಸ್ ಜಿಯೋ ಪ್ಲಾನ್‌ಗಳನ್ನು, ಇತರ ಸೇವೆಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಸಂಯೋಜಿಸಲಾಗಿದೆ. OTT ಸಬ್‌ಸ್ಕ್ರಿಪ್ಶನ್‌ಗಳೊಂದಿಗೆ ಸಂಯೋಜಿಸಲಾದ ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ.

ಸದ್ಯ ಮುಕೇಶ್ ಅಂಬಾನಿಯ ರಿಲಯನ್ಸ್ ಜಿಯೋ JioTV ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಜಿಯೋದ ಹೊಸ ಯೋಜನೆಯು ಅನಿಯಮಿತ ಕರೆಗಳು, 5G ಡೇಟಾವನ್ನು ನೀಡುತ್ತದೆ. ಇದು Zee5, Disney+ Hotstar, JioCinema ನಂತಹ 14 OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಗಳೊಂದಿಗೆ ಬರುತ್ತದೆ. ಹೊಸ ಜಿಯೋ ಪ್ರಿಪೇಯ್ಡ್ ಯೋಜನೆಯು ಕೇವಲ 398 ರೂ.ನಿಂದ ಪ್ರಾರಂಭವಾಗುತ್ತವೆ.

Tap to resize

Latest Videos

undefined

ಜಿಯೋ ಏರ್‌ಫೈಬರ್‌ಗೆ ಬೂಸ್ಟರ್ ಪ್ಲಾನ್ ಘೋಷಿಸಿದ ಆಕಾಶ್ ಅಂಬಾನಿ, ಅತ್ಯಂತ ಕಡಿಮೆ ದರಕ್ಕೆ 1000GB ಡೇಟಾ ಲಭ್ಯ!

ಹಲವು ದರಗಳಲ್ಲಿ ಅನ್‌ಲಿಮಿಟೆಡ್ ಪ್ಲಾನ್ ಲಭ್ಯ
ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋದ ಹೊಸ ಯೋಜನೆಗಳು ಮೂರು ಆಯ್ಕೆಗಳಲ್ಲಿ ಬರುತ್ತವೆ. 398 ರೂ., 1198 ರೂ. ಮತ್ತು 4498 ರೂ . ಹೊಸ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್ 398 ರೂ. ಕೇವಲ 28 ದಿನಗಳ ವರೆಗೆ ಮಾನ್ಯವಾಗಿರುತ್ತದೆ. ಇದು ಬಳಕೆದಾರರಿಗೆ ದಿನಕ್ಕೆ 2 ಜಿಬಿ 5ಜಿ ಡೇಟಾವನ್ನು ಒದಗಿಸುತ್ತದೆ. ಅನ್‌ಲಿಮಿಡೆಟ್‌ ಕಾಲ್‌, ದಿನಕ್ಕೆ 100 SMS ಸಹ ಇರುತ್ತದೆ. ಇದು JioTV ಅಪ್ಲಿಕೇಶನ್ ಮೂಲಕ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.

1198 ರೂ. ನ ರಿಲಯನ್ಸ್ ಜಿಯೋ ಪ್ಲಾನ್ ಕೇವಲ 84 ದಿನಗಳ ವರೆಗೆ ಮಾತ್ರ ಮಾನ್ಯವಾಗಿದೆ. ಇದು ಬಳಕೆದಾರರಿಗೆ ದಿನಕ್ಕೆ 2GB5G ಡೇಟಾ, ಅನ್‌ಲಿಮಿಟೆಡ್‌ ಕಾಲ್‌ ಮತ್ತು ದಿನಕ್ಕೆ 100 SMS ಮೆಸೇಜ್ ಒದಗಿಸುತ್ತದೆ. ಇದು JioTV ಅಪ್ಲಿಕೇಶನ್ ಮೂಲಕ 14 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ. 4498 ರೂ. ಯೋಜನೆಗೆ ಒಂದು ವರ್ಷಕ್ಕೆ ವ್ಯಾಲಿಡಿಟಿಯಿರುತ್ತದೆ.

ಬಹುಕೋಟಿ ಬಿಸಿನೆಸ್‌ಗೆ ಲಾಸ್‌ ಮಾಡ್ತಾರ ಮುಕೇಶ್ ಅಂಬಾನಿ, ಅತೀ ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್‌!

JioTV ಪ್ರೀಮಿಯಂ ಅಡಿಯಲ್ಲಿ ನೀಡಲಾಗುವ 14 OTT ಚಂದಾದಾರಿಕೆಗಳು ಸೇರಿವೆ. JioCinema Premium, Disney+ Hotstar, ZEE5, SonyLIV, Prime Video (Mobile), Lionsgate Play, Discovery+, Docubay, Hoichoi, SunNXT, Planet Marathi, Chaupal, EpicON, ಮತ್ತು Kanccha Lannkaಗಳು ಗ್ರಾಹಕರಿಗೆ ಲಭ್ಯವಿರುತ್ತವೆ.

click me!