Sandalwood
ಟ್ರೋಲ್ ಆಗುತ್ತೆ ಎಲ್ಲಾ ಟ್ರೋಲ್ ಆಗುತ್ತೆ ಎನ್ನುತ್ತಾ ಟ್ರೆಂಡ್ ಸೃಷ್ಟಿಸಿದ ಬೆಡಗಿ ರೀಷ್ಮಾ ನಾಣಯ್ಯ, ಸದ್ಯ ಚಂದನವನದ ಭರವಸೆಯ ನಟಿ.
ಯುಐ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ನಟಿಸಿದ ರೀಷ್ಮಾ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೀಷ್ಮಾ ಲಂಗ ದಾವಣಿ ಧರಿಸಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.
ರೀಷ್ಮಾ ಕೆಂಪು ಬಣ್ಣದ ಲಂಗ ದಾವಣಿ ಧರಿಸಿ, ಕೈತುಂಬಾ ಬಳೆ, ಕುತ್ತಿಗೆಯಲ್ಲಿ ನೆಕ್ಸೆಸ್ ಧರಿಸಿ ಕೈಯಲ್ಲಿ ಕಬ್ಬು ಹಿಡಿದು, ಎತ್ತುಗಳ ಜೊತೆ ನಿಂತು ಪೋಸ್ ಕೊಟ್ಟಿದ್ದಾರೆ.
ರೀಷ್ಮಾ ಎರಡು ಮುದ್ದಾದ ಬಿಳಿ ಬಣ್ಣದ ಜೋಡೆತ್ತುಗಳ ಮಧ್ಯೆ ನಿಂತು ಪೋಸ್ ಕೊಟ್ಟಿದ್ದು ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ರೀಷ್ಮಾ ನಾಣಯ್ಯ ಸಂಕ್ರಾಂತಿ ಫೋಟೊಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಯುವಕರನ್ನು ನಟಿಯ ಅಂದ, ಚೆಂದ, ನಗುವಿಗೆ ಫಿದಾ ಆಗಿದ್ದಾರೆ.
ರೀಷ್ಮಾ ನಾಣಯ್ಯ ಕೊಡಗಿನ ಬೆಡಗಿಯಾಗಿದ್ದು, ಹುಟ್ಟಿದ್ದು ಬೆಳೆದದ್ದು ಎಲ್ಲಾನೂ ಬೆಂಗಳೂರಲ್ಲಿ. 22 ವರ್ಷದ ಈ ಚೆಲುವೆ ಸದ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ.
ರೀಷ್ಮಾ ತಮ್ಮ 17ನೇ ವಯಸ್ಸಿನಲ್ಲಿಯೇ ಮಾಡೆಲ್ ಆಗಿ ತಮ್ಮ ಕರಿಯರ್ ಆರಂಭಿಸಿದ್ದರು. ಇವರು ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕೂಡ ಆಗಿದ್ದರು.
ಏಕ್ ಲವ್ ಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ಬಳಿಕ ರಾಣಾ, ಬಾನದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿದ್ದರು.
ರೀಷ್ಮಾ ಬಹು ನಿರೀಕ್ಷೀತ ಮತ್ತೆರಡು ಸಿನಿಮಾಗಳಲ್ಲೂ ನಟಿಸುತ್ತಿದ್ದು, ಒಂದು ಕೆಡಿ - ದ ಡೆವಿಲ್ ಹಾಗೂ ಅಣ್ಣ ಫ್ರಮ್ ಮೆಕ್ಸಿಕೋ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.