Sandalwood
2025ರ ಹೊಸ ವರ್ಷಕ್ಕೆ 1 ವಾರವಷ್ಟೇ ಬಾಕಿ ಇದೆ. ಈ ಒಂದು ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಯಾಗಿದೆ. ಇಲ್ಲಿ 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.
ನಟಿ ಮಾನ್ವಿತಾ ಕಾಮತ್ 2024ರ ಮೇ 1ರಂದು ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟನಾಗಿ, ನಿರ್ದೇಶಕನಾಗಿ ಕನ್ನಡಿಗರ ಮನಗೆದ್ದಿರುವ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ 2024ರ ಆಗಸ್ಟ್ 11ರಂದು ಪ್ರೀತಿಸಿ ಮದುವೆಯಾಗಿದ್ದಾರೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ನಟಿ ಐಶ್ವರ್ಯಾ ಅವರು ಜೂನ್ 10ರಂದು ಉಮಾಪತಿ ರಾಮಯ್ಯ ಅವರನ್ನು ಮದುವೆಯಾದರು. ಕನ್ನಡದಲ್ಲಿ 'ಪ್ರೇಮ ಬರಹ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ `ಮಾಣಿಕ್ಯ' ರನ್ನ ಸಿನಿಮಾದಲ್ಲಿ ನಟಿಸಿದ್ದ ವರಲಕ್ಷ್ಮಿ ಶರತ್ ಕುಮಾರ್ ಅವರು ನಿಖೋಲಯ್ ಸಚ್ದೇವ್ ಅವರನ್ನು ಜುಲೈ 2ರಂದು ವಿವಾಹವಾದರು.
ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, ಖಳನಾಯಕ ಪಾತ್ರದಲ್ಲಿ ಗುರುತಿಸಿಕೊಂಡಿರುವ ಯಶ್ ಶೆಟ್ಟಿ ಅವರು ಪೃಥ್ವಿ ಶೆಟ್ಟಿ ಎಂಬವರನ್ನು ಮದುವೆಯಾದರು. ಕಳೆದ ಆಗಸ್ಟ್ ನಲ್ಲಿ ಇವರಿಬ್ಬರ ವಿವಾಹ ನೆರವೇರಿದೆ.
ಸ್ಯಾಂಡಲ್‌ವುಡ್‌ನ ಯುವ ರೈಟರ್ ಪ್ರಮೋದ್ ಮರವಂತೆ ಅವರು ಕೆಜಿಎಫ್ ಸಿಂಗರ್ ಸುಚೇತಾ ಅವರನ್ನು ಕೈಹಿಡಿದರು. ಡಿ.5ರಂದು ಕುಂದಾಪುರದಲ್ಲಿ ಇವರಿಬ್ಬರ ವಿವಾಹ ನೆರವೇರಿದೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಅಭಿಷೇಕ್ ಶೆಟ್ಟಿ ಅವರು 2024ರ ನವೆಂಬರ್ 28ರಂದು ಕುಂದಾಪುರದಲ್ಲಿ ಸಾಕ್ಷಾ ಶೆಟ್ಟಿ ಎಂಬುವವರನ್ನು ಮದುವೆಯಾದರು.