ದೇಶಾದ್ಯಂತ ಧೂಳೆಬ್ಬಿಸಿದ ಕನ್ನಡದ ಸಿನಿಮಾ ಅಂದ್ರೆ ಅದು ರಾಕಿಂಗ್ ಯಶ್ ಅಭಿನಯದ ಕೆಜಿಎಫ್. ಈ ಸಿನಿಮಾದ ಕಥೆಯೇ ತಾಯಿ ಸೆಂಟಿಮೆಂಟ್. ರಾಕಿ ಭಾಯ್ ತಾಯಿ ಪಾತ್ರ ಮಾಡಿದ ನಟಿ ಅರ್ಚನಾ ಜೋಯಿಸ್ ಮರೆಯೋಕೆ ಸಾಧ್ಯವೇ?
Image credits: Instagram
ಅರ್ಚನಾ ಜೋಯಿಸ್
ಜೀ ಕನ್ನಡದ ಮಹಾದೇವಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅರ್ಚನಾ, ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರಾವಾಹಿಯಲ್ಲಿ ನಾಯಕಿಯಾಗಿದ್ದರು.
Image credits: Instagram
ಸಿನಿಮಾಗಳಲ್ಲಿ ಅರ್ಚನಾ
ಕೆಜಿಎಫ್ ನಲ್ಲಿ ಪುಟ್ಟ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿ ಅರ್ಚನಾ ಬಳಿಕ ವಿಜಯರಥ, ಮ್ಯೂಟ್, ಕ್ಷೇತ್ರಪತಿ, ಹೊಂದಿಸಿ ಬರೆಯಿರಿ, ಘೋಸ್ಟ್ ಸಿನಿಮಾಗಳಲ್ಲಿ ನಟಿಸಿದ್ದರು.
Image credits: Instagram
ವೈರಲ್ ಫೋಟೊ
ಇದೀಗ ಅರ್ಚನಾ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಲಂಗ ಬ್ಲೌಸ್ ಧರಿಸಿ, ಡ್ಯಾನ್ಸ್ ಪೋಸ್ ಕೊಟ್ಟಿದ್ದು, ಟ್ರೆಡಿಶನಲ್ ಅವತಾರದಲ್ಲೂ ನಟಿ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ.
Image credits: Instagram
ಜೀವನ ಮತ್ತು ರಂಗೋಲಿ
ಅರ್ಚನಾ ರಂಗೋಲಿ ಡಿಸೈನ್ ಇರುವ ಡ್ರೆಸ್ ಧರಿಸಿದ್ದು, ಜೀವನ ಮತ್ತು ರಂಗೋಲಿಕೆ ಹೋಲಿಕೆ ಮಾಡಿ, ಪ್ರತಿಯೊಂದು ಚುಕ್ಕೆಗಳನ್ನು ಸರಿಯಾಗಿ ಕನೆಕ್ಟ್ ಮಾಡಿದ್ರೆ ಮಾತ್ರ ರಂಗೋಲಿ ಹಾಗೆ ಜೀವನವೂ ಚೆನ್ನಾಗಿರುತ್ತೆ ಎಂದಿದ್ದಾರೆ.
Image credits: Instagram
ಅಭಿಮಾನಿಗಳ ಮೆಚ್ಚುಗೆ
ಅರ್ಚನಾ ಜೋಯಿಸ್ ಈ ಹೊಸ ಫೋಟೊ ಶೂಟನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅರ್ಚನಾ ಆಟಿಟ್ಯೂಡ್, ಸೌಂದರ್ಯ ಎಲ್ಲವೂ ಅದ್ಭುತವಾಗಿದೆ ಎಂದಿದ್ದಾರೆ. ಜೊತೆಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವಂತೆ ಹಾರೈಸಿದ್ದಾರೆ.