ಕೆಜಿಎಫ್ ಸಿನಿಮಾ ಮೂಲಕ ಮನೆಮಾತಾದ ಬೆಡಗಿ ಶ್ರೀನಿಧಿ ಶೆಟ್ಟಿ. ಸಿನಿಮಾದಲ್ಲಿ ಎಷ್ಟೊಂದು ರಾಯಲ್ ಆಗಿ ಕಾಣಿಸಿಕೊಂಡಿದ್ದಾರೋ, ಅದಕ್ಕೆ ವಿರುದ್ಧವಾಗಿ ರಿಯಲ್ ಲೈಫಲ್ಲಿ ಸಿಂಪಲ್ ಆಗಿದ್ದಾರೆ ಈ ಬೆಡಗಿ.
Image credits: Instagram
ಸರಳ ಸುಂದರಿ
ಶ್ರೀನಿಧಿ ಶೆಟ್ಟಿ ತುಂಬಾನೆ ಸಿಂಪಲ್ ಆಗಿದ್ದು, ಹೆಚ್ಚಾಗಿ ಮೇಕಪ್ ಇಲ್ಲದೇ, ಪಜಾಮ, ಕುರ್ತಾ ಪ್ಯಾಂಟ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಟಿಯ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Image credits: Instagram
ಮುದ್ದಾದ ಫೋಟೊಗಳು
ಶ್ರೀನಿಧಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ನಾಯಿ ಜೊತೆಗೆ, ಸೂರ್ಯನ ಎದುರಿಗೆ ಫೋಟೊ ಸೇರಿ ಒಂದಷ್ಟು ಟ್ರಾವೆಲ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Image credits: Instagram
ಸಿನಿಮಾಗಳು
ಶ್ರೀನಿಧಿ ಶೆಟ್ಟಿ ಕೆಜಿಎಫ್ 1 ಮತ್ತು 2 ಸಿನಿಮಾಗಳಲ್ಲಿ ನಟಿಸಿದ ಬಳಿಕ, ಶ್ರೀನಿಧಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾದರು. ಕೋಬ್ರಾ, ತೆಲುಸು ಕಾದ, ಹಿಟ್ - ದ ಥರ್ಡ್ ಕೇಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
Image credits: Instagram
ಹಿಟ್ 3
ತೆಲುಗಿನ ಸೂಪರ್‌ಹಿಟ್ ಸೀರೀಸ್ ಆಗಿರುವ ‘ಹಿಟ್ 3’ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಣಿ ಟೆರರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Image credits: Instagram
ಕಿಚ್ಚ 47
ಕೆಜಿಎಫ್ ಬಳಿಕ ಕನ್ನಡದಲ್ಲಿ ಯಾವ ಸಿನಿಮಾದಲ್ಲೂ ಶ್ರೀನಿಧಿ ನಟಿಸಿರಲಿಲ್ಲ. ಇದೀಗ ಕಿಚ್ಚ 47 ಸಿನಿಮಾದಲ್ಲಿ ಈ ನಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನರಲ್ಲೂ ಈ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.
Image credits: Instagram
ಗ್ರಾಮೋತ್ಸವದಲ್ಲಿ ಶ್ರೀನಿಧಿ
ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಈಶಾ ಫೌಂಡೇಶನ್ ಗ್ರಾಮೋತ್ಸವದಲ್ಲಿ ನಟಿ ಭಾಗವಹಿಸಿದ್ದು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.