ಕನ್ನಡದ ನಟಿ ಬಿಗ್‌ಬಾಸ್ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್ ಅವರು ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Image credits: our own
ಅಸ್ಕರ್ ಕಾನ್ಫಿಡೆಂಟ್ ಕ್ವೀನ್ ಪ್ರಶಸ್ತಿ ಕೂಡ ಲಾಸ್ಯ ಪಾಲು
ನೋವಾಕಾಸ್ಮೋ ವರ್ಲ್ಡ್ ವೈಡ್ ಪೆಜೇಂಟ್ಸ್ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ಇದಾಗಿತ್ತು. ಇದರ ಜೊತೆಗೆ ಶೋ ನಲ್ಲಿ ಅಸ್ಕರ್ ಕಾನ್ಫಿಡೆಂಟ್ ಕ್ವೀನ್ ಪ್ರಶಸ್ತಿಯನ್ನು ಸಹ ಗೆದ್ದಳು!
Image credits: our own
ಕೆನಡಾದಲ್ಲಿ ನಡೆದ ಕಾರ್ಯಕ್ರಮ
ಇತ್ತೀಚಿಗೆ ಕೆನಡಾದ ಟೋರೊಂಟೊದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಜಗತ್ತಿನ ನೂರಾರು ಮಾಡೆಲ್ ಗಳ ಮಧ್ಯೆ ramp ವಾಕ್ ಮಾಡಿದ ಮಿಂಚಿದ ಕನ್ನಡದ ಹುಡುಗಿ.
Image credits: our own
ಫೋಟೋ ಹಂಚಿಕೊಂಡ ಲಾಸ್ಯ
ರನ್ನರ್ ಅಪ್ ಪ್ರಶಸ್ತಿ ಗೆದ್ದ ಖುಷಿಯ ಕ್ಷಣಗಳ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ
ಇದಕ್ಕಾಗಿ ಪಟ್ಟ ಪರಿಶ್ರಮದ ಬಗ್ಗೆ ಲಾಸ್ಯ ತಮ್ಮ ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ.
Image credits: our own
ನನ್ನ ಕನಸಾಗಿತ್ತು-ಲಾಸ್ಯ
ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಪ್ರಶಸ್ತಿಯನ್ನು ಗೆಲ್ಲುವುದು ನಿಜವಾಗಿಯೂ ನನ್ನ ಇಚ್ಛೆ, ನನ್ನ ನಂಬಿಕೆ ವ್ಯವಸ್ಥೆ, ತಾಳ್ಮೆ ಮತ್ತು ಸಾಮರ್ಥ್ಯಗಳಿಗೆ ಸವಾಲಾಗಿತ್ತು.
Image credits: our own
ವೈಫಲ್ಯ ಗೆಲುವಿಗೆ ಕಾರಣ-ಲಾಸ್ಯ
ಸಣ್ಣ ವೈಫಲ್ಯಗಳು ಮತ್ತು ಗೆಲುವುಗಳು ಯಾವಾಗಲೂ ಸಾಧನೆಗೆ ನಿಮ್ಮನ್ನು ಸಿದ್ಧಪಡಿಸುತ್ತವೆ. ಹಾಗಾಗಿ ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅವಕಾಶವನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ
Image credits: our own
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಲಾಸ್ಯ
ಲಾಸ್ಯ ಸದ್ಯ ಕೆನಡಾದಲ್ಲಿ ನಟನೆ ಮತ್ತು ಡೈರೆಕ್ಷನ್ ತರಬೇತಿ ನಡೆಸುತ್ತಿದ್ದಾರೆ. ಕಳೆದ ಹಲವು ತಿಂಗಳಿಂದಲೂ ಕೆನಡಾದಲ್ಲಿದ್ದಾರೆ