Sandalwood

ಚಂದ್ರು ಏನೋ ಒಂದು ಪ್ರಯತ್ನ ಮಾಡುತ್ತಿದ್ದಾರೆ

ಆರ್. ಚಂದ್ರು ಐದು ಸಿನಿಮಾ ಒಟ್ಟಿಗೆ ಘೋಷಣೆ ಮಾಡಿದಾಗ ಐದು ಚಂದ್ರು ಅಂತ ಕೆಲವರು ಹೇಳಿದ್ದರು. ಚಂದ್ರು ಏನೋ ಒಂದು ಪ್ರಯತ್ನ ಮಾಡುತ್ತಿದ್ದಾರೆ. 

Image credits: google

ಕಾಲೆಳೆಯಬೇಡಿ, ಪೋತ್ಸಾಹಿಸಿ

ಎಲ್ಲಾ ಸಿನಿಮಾಗಳು ಎಕ್ಸಾರ್ಡಿನರಿ ಆಗಿರಲ್ಲ. ಹಾಗಾಗಿ ಕಾಲೆಳೆಯಬೇಡಿ, ಪೋತ್ಸಾಹಿಸಿ. ಫಾದರ್ ಸಿನಿಮಾದ ಮೋಷನ್ ಪೋಸ್ಟರ್ ಬಹಳ ಚೆನ್ನಾಗಿದೆ.  ಹೀಗೆ ಹೇಳಿದ್ದು ಕಿಚ್ಚ ಸುದೀಪ್. 
 

Image credits: google

ಮೋಷನ್ ಪೋಸ್ಟರ್ ಬಿಡುಗಡೆ

ಆರ್ ಚಂದ್ರು ನಿರ್ಮಾಣದ, ರಾಜಮೋಹನ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ, ನಾಗಭೂಷಣ ಹಾಗೂ ಅಮೃತಾ ಅಯ್ಯಂಗಾರ್ ನಟನೆಯ ಫಾದರ್ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
 

Image credits: google

ನನಗೆ ಕಥೆ ಬಹಳ ಇಷ್ಟ ಆಯಿತು

ಡಾರ್ಲಿಂಗ್ ಕೃಷ್ಣ ಮಾತನಾಡಿ, ನನಗೆ ಕಥೆ ಬಹಳ ಇಷ್ಟ ಆಯಿತು. ಹಾಗಾಗಿ ಒಪ್ಪಿಕೊಂಡೆ. ಇತ್ತೀಚೆಗೆ ಬಹಳ ಆಯ್ಕೆ ಮಾಡಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ ಎಂದರು. 
 

Image credits: google

ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿದ್ದೇನೆ

ಆರ್ ಚಂದ್ರು ಮಾತನಾಡಿ, ಕಥೆ ಬಹಳ ಚೆನ್ನಾಗಿದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿದ್ದೇನೆ. ಎಲ್ಲರಿಗೂ ಈ ಕಥೆ ಕನೆಕ್ಟ್ ಆಗುತ್ತದೆ ಎಂದರು. 

Image credits: google

ಕಥೆಯೇ ನನ್ನನ್ನು ಇಲ್ಲಿಯವರೆಗೆ ಕರೆ ತಂದಿದೆ

ನಿರ್ದೇಶಕ ರಾಜಮೋಹನ್, ಪ್ರತೀ ಕಥೆಗೂ ಒಂದು ಜೀವ ಇರುತ್ತದೆ. ಈ ಕಥೆಯೇ ನನ್ನನ್ನು ಇಲ್ಲಿಯವರೆಗೆ ಕರೆ ತಂದಿದೆ. ಯಾವ ಸಿನಿಮಾದಲ್ಲೂ ಇರದ ಕಥೆ ಈ ಚಿತ್ರದಲ್ಲಿದೆ ಎಂದರು.

Image credits: google

My world ಎನ್ನುತ್ತಾ ಹೆಂಡತಿ -ಮಗಳ ಮುದ್ದಾದ ಫೋಟೊ ಶೇರ್ ಮಾಡಿದ ಡಾರ್ಲಿಂಗ್ ಕೃಷ್ಣ

ಕುರುಚಲು ಗುಡ್ಡದ ರಾಣಿಯಾದ ಭೂಮಿ ಶೆಟ್ಟಿ; ಕಿರೀಟ ಮಾತ್ರ ಮಿಸ್!

ಸಖತ್ತಾಗಿದೆ ನೋಡಿ ಕೆಜಿಎಫ್ ರಾಕಿ ಭಾಯ್ ಅಮ್ಮನ ಹೊಸ ಲುಕ್

ಕನ್ನಡದ ಯ್ಯೂಟೂಬರ್ ಡಾ. ಬ್ರೋ ಜೊತೆ ಸೆಲೆಬ್ರಿಟಿಗಳ ಸೆಲ್ಫಿಗಳು!