Sandalwood
ಕನ್ನಡ ಚಿತ್ರರಂಗದಲ್ಲಿ ತನ್ನ ಅದ್ಭುತ ನಟನೆಯಿಂದ ಗುರುತಿಸಿಕೊಂಡು ಭರವಸೆಯ ನಟಿಯಾಗಿ ಬೆಳೆಯುತ್ತಿರುವ ಬೆಡಗಿ ಅಂದ್ರೆ ಅದು ಚೈತ್ರಾ ಆಚಾರ್.
ನಟಿ ಚೈತ್ರಾ ಆಚಾರ್ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರದಲ್ಲಾದರೂ, ವಿಭಿನ್ನ ಪಾತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯತೆಯನ್ನು ತೋರಿ, ಬೆಸ್ಟ್ ನಟಿ ಎನಿಸಿಕೊಂಡವರು ಇವರು.
ಚೈತ್ರಾ ನಟಿಸಿದ ಸಿನಿಮಾಗಳಲ್ಲಿ ಸಪ್ತಸಾಗರದಾಚೆಯ ಸುರಭಿ ಪಾತ್ರ ಹಾಗೂ ಟೋಬಿ ಸಿನಿಮಾದ ಜೆನ್ನಿ ಪಾತ್ರ ಹೆಚ್ಚು ಜನಪ್ರಿಯತೆ ಗಳಿಸಿತ್ತು. ನಟಿಯ ಅಭಿನಯಕ್ಕೆ ಭೇಷ್ ಎಂದಿದ್ದರು ಜನ.
ಚೈತ್ರಾ ಆಚಾರ್, ಹೆಚ್ಚಾಗಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜನ ಹುಬ್ಬೇರಿಸುವಂತಹ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ದಿನಕ್ಕೊಂದರಂತೆ ಫೋಟೊ ಶೂಟ್ ಮಾಡಿ, ಶೇರ್ ಮಾಡುತ್ತಿರುತ್ತಾರೆ. ಇವರ ಮಾಡರ್ನ್, ಟ್ರೆಡಿಶನಲ್ ಲುಕ್ ಜನಕ್ಕೂ ಇಷ್ಟ.
ಇದೀಗ ಚೈತ್ರಾ ಆಚಾರ್ ಹೊಸ ಫೋಟೊಶೂಟ್ ಮೂಲಕ ಕಾಣಿಸಿಕೊಂಡಿದ್ದು, ಕಣ್ ಕಣ್ಣ ಸಲಿಗೆ ಎನ್ನುತ್ತಾ ಕಣ್ಣಿನಲ್ಲೇ ಸೆಳೆಯುತ್ತಿದ್ದಾರೆ ಬೆಡಗಿ.
ಚೈತ್ರಾ ಆಚಾರ್ ಕಪ್ಪು ಮತ್ತು ಬಿಳಿ ಬಣ್ಣದ ಸೀರೆ ಜೊತೆಗೆ ಕಪ್ಪು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದು, ಕಣ್ಣುಗಳಲ್ಲೇ ಮಾತನಾಡುತ್ತಾ ಮೋಡಿ ಮಾಡುತ್ತಿದ್ದಾರೆ ಈ ಬೆಡಗಿ.
ಸುಧಾ -ಸುಬ್ಬಿ… ಹೇಗಿದೆ ಈ ಅಮ್ಮ ಮಗಳ ಮುದ್ದಾದ ಜೋಡಿ…
ನಮ್ಮನ್ನಗಲಿದ ಚಂದನವನದ ತಾರೆಯರ ಕ್ರಿಸ್ಮಸ್ ಸೆಲಬ್ರೇಶನ್ ಹೀಗೂ ಇದ್ದಿರಬಹುದೇ?
ಅಬ್ಬಬ್ಬಾ! ಈ ವರ್ಷ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸೆಲೆಬ್ರಿಟಿಗಳು ಇವರೇ
ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ; ಗುಣದಲ್ಲಿ ಸತಿಸಾವಿತ್ರಿ ಎಂದ ಫ್ಯಾನ್ಸ್