Lifestyle

59ರಲ್ಲೂ 29ರಂತೆ ಕಾಣಲು ಮಿಲಿಂದ್ ಸೋಮನ್‌ರ 5 ಆರೋಗ್ಯಕರ ಅಭ್ಯಾಸಗಳು

'ಎಮರ್ಜೆನ್ಸಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಿಲಿಂದ್

ಬಾಲಿವುಡ್ ಉದ್ಯಮದ ಫಿಟ್ನೆಸ್ ಫ್ರೀಕ್ ನಟ ಮತ್ತು ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಶೀಘ್ರದಲ್ಲೇ ಕಂಗನಾ ರನೌತ್ ಅವರ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಿಲಿಂದ್‌ರ 59ರಲ್ಲೂ ಪರಿಪೂರ್ಣ ದೇಹ

ಮಿಲಿಂದ್ 59 ವರ್ಷದವರಾಗಿದ್ದರೂ, ಅವರ ಫಿಟ್ನೆಸ್ ಮತ್ತು ಲುಕ್ಸ್ ಹೇಗಿದೆ ನೋಡಿ. ಈ ವಯಸ್ಸಿನಲ್ಲಿ ಇಷ್ಟು ಪರಿಪೂರ್ಣ ದೇಹವನ್ನು ಪಡೆಯಲು ಮಿಲಿಂದ್ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುತ್ತಾರೆ.

ಓಟ

ಮಿಲಿಂದ್ ಸೋಮನ್ ಪ್ರತಿದಿನ ಬೆಳಿಗ್ಗೆ ಎದ್ದು ಹಲವು ಕಿಲೋಮೀಟರ್ ಓಡುತ್ತಾರೆ. ಇದರೊಂದಿಗೆ ಅವರು ಹಲವಾರು ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತಾರೆ. ಇದರಿಂದ ಅವರು ಸಾಕಷ್ಟು ಫಿಟ್ ಆಗಿರುತ್ತಾರೆ.

ವ್ಯಾಯಾಮ

ಓಟದ ನಂತರ ಮಿಲಿಂದ್ ಸಾಕಷ್ಟು ವ್ಯಾಯಾಮ ಮಾಡುತ್ತಾರೆ. ಇದರಿಂದ ಅವರ ತೂಕ ನಿಯಂತ್ರಣದಲ್ಲಿರುತ್ತದೆ. ಇದಲ್ಲದೆ ಮಿಲಿಂದ್ ಯೋಗ ಮತ್ತು ಧ್ಯಾನವನ್ನೂ ಮಾಡುತ್ತಾರೆ.

ಆಹಾರ

ಇವೆಲ್ಲದರ ಜೊತೆಗೆ ಮಿಲಿಂದ್ ತಮ್ಮ ಆಹಾರಕ್ರಮದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸುತ್ತಾರೆ. ಸೀಡ್ಸ್, ಸೀಸನ್‌ಗೆ ತಕ್ಕಂತ ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್‌ ಮಿಲಿಂದ್‌ರ ಆಹಾರದ ಪ್ರಮುಖ ಭಾಗವಾಗಿದೆ.

ತುಪ್ಪದ ಬಳಕೆ

ಅದೇ ರೀತಿ ಮಿಲಿಂದ್ ತುಪ್ಪದಲ್ಲಿ ಮಾಡಿದ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಇದರಿಂದ ಅವರ ಚರ್ಮವು ಯಾವಾಗಲೂ ಹೊಳೆಯುತ್ತಿರುತ್ತದೆ.

ನೀರು

ಇದರೊಂದಿಗೆ ಮಿಲಿಂದ್ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ. ಇದು ತೂಕ ಇಳಿಸುವುದರಿಂದ ಹಿಡಿದು ಹಲವು ವಿಷಯಗಳಲ್ಲಿ ಸಹಾಯ ಮಾಡುತ್ತದೆ.

ನಯನತಾರ ಅವರಂತೆ ಮುದ್ದಾಗಿ ಕಾಣಲು ಈ 8 ರೀತಿಯ ಸೀರೆ ಧರಿಸಿ ನೋಡಿ!

ವಿಶ್ವದ 5 ಅತ್ಯಂತ ಸುಂದರ ಮಹಿಳಾ ಟೆನಿಸ್ ಆಟಗಾರ್ತಿಯರಿವರು

Laptop ನಲ್ಲಿ ಹೆಚ್ಚು ಕೆಲಸ ಮಾಡ್ತೀರಾ? ಕಣ್ಣಿನ ಆರೋಗ್ಯದ ಈ 5 ವಿಚಾರ ತಿಳಿದಿರಲಿ!

ಟೊಮ್ಯಾಟೋ, ಕೊತ್ತಂಬರಿ ಸೇರಿ ಬಾಲ್ಕನಿಯಲ್ಲಿ ಬೆಳೆಸುವ 5 ತರಕಾರಿಗಳು!